ಕ್ರೂರ ದುರಂತ: ಅಮಾಯಕ ಮಗ ಸಾವು

bangalore-kerosene-stove-blast-13-yr-old-boy-killed
ಬೆಂಗಳೂರು, ಜ.26: ಅವನಿನ್ನೂ 13 ವರ್ಷದ ಬಾಲಕ. ಅಮ್ಮ ಅಂದರೆ ಪಂಚಪ್ರಾಣ. ಅದೂ ಬುದ್ಧಿಮಾಂದ್ಯ ಅಮ್ಮನ ಸೇವೆಯಲ್ಲಿ ಆನಂದ ಕಾಣುತ್ತಿದ್ದ.

ಹಾಗೆಂದೇ ಗುರುವಾರ ರಾತ್ರಿ 7.30ರಲ್ಲಿ ಅಮ್ಮನಿಗೆ ಟೀ ಮಾಡಿಕೊಡೋಣವೆಂದು ಪಂಪ್ ಸ್ಟವ್ ಹಚ್ಚಿದ್ದಾನೆ. ಅದೇನಾಯಿತೋ ಸ್ಟವ್ ಸಿಡಿದಿದೆ. ಪಕ್ಕದಲ್ಲೇ ಇದ್ದ ಸೀಮೆಎಣ್ಣೆ ಡಬ್ಬಕ್ಕೂ ಬೆಂಕಿ ತಾಕಿದೆ. ಆ ಪುಟ್ಟ ಕೋಣೆಯಲ್ಲಿ ಅಗ್ನಿಜ್ವಾಲೆಗಳು ಹರಡಿವೆ. ಅದರಲ್ಲಿ ಮಗು ಬೆಂದು ಹೋಗಿದೆ. ಕಮಲಾ ನಗರದ 3ನೇ ಕ್ರಾಸಿನಲ್ಲಿ ಈ ಕ್ರೂರ ದುರಂತ ಸಂಭವಿಸಿದೆ.

ಬುದ್ಧಿಮಾಂದ್ಯ ಅಮ್ಮನಿಗೆ, ಕಣ್ಣೆದುರೇ ತನ್ನ ಮಗನಿಗೆ ಏನಾಗುತ್ತಿದೆ ಎಂಬುದರ ಪರಿವೆಯೂ ಇಲ್ಲ. ಬೆಂಕಿ-ಹೊಗೆಯನ್ನು ಕಂಡು ಹೌಹಾರಿದ ಸುತ್ತಮುತ್ತಲ ಜನ ಬಂದು ಬೆಂಕಿಗೆ ಸಿಲುಕಿ ಒದ್ದಾಡುತ್ತಿದ್ದ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಶೇ. 80ರಷ್ಟು ಸಂಪೂರ್ಣವಾಗಿ ಸುಟ್ಟುಹೋಗಿದ್ದ ಮಗು ಹೆಚ್ಚು ಕಾಲ ಉರಿಯನ್ನು ತಾಳಲಾರದೆ ಅಸುನೀಗಿದೆ.

ಮೃತ ದುರ್ದೈವಿಯ ಹೆಸರು ಚಂದನ್. ಅವನು 5ನೇ ಕ್ಲಾಸಿನಲ್ಲೂ ಓದುತ್ತಿದ್ದ. ಅವರಪ್ಪ ಚಂದ್ರಶೇಖರ್ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಸೇವೆಯಲ್ಲಿದ್ದಾರೆ. ಮೂಲತಃ ಬಳ್ಳಾರಿಯವರು. 'ಚಂದನದ' ಬದುಕು ರೂಪಿಸೋಣ ಅಂತ ಬುದ್ಧಿಮಾಂದ್ಯ ಪತ್ನಿಯೊಂದಿಗೆ ಊರುಬಿಟ್ಟು ಬಂದಿದ್ದರು. ಆದರೆ ಇದೀಗ ಅವರ ಜೀವನದ ಗುರಿಯಾಗಿದ್ದ ಮಗುವೇ ಅವರನ್ನು ಬಿಟ್ಟುಹೋಗಿದ್ದಾನೆ. ಬಸವೇಶ್ವರ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+