ಗ್ಯಾಂಗ್ ಮನ್ ಗಳನ್ನು ಜಜ್ಜಿ ಮಾಡಿದ ರೈಲುಗಳು

ರೈಲ್ವೆ ಹಳಿಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ ಮೂಲದ 57 ವರ್ಷದ ಕದಿರೆಪ್ಪ ಹಾಗೂ ಅವರ ಸಹಾಯಕ ಬಿಹಾರ ಮೂಲದ 24 ವರ್ಷದ ಅರುಣ್ ಕುಮಾರ್ ಅವರ ಸಾವು ಇಲಾಖೆ ಪಾಠವಾಗಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರೈಲ್ವೆ ನಿಲ್ದಾಣದ ಕೆಲವೆ ಮೀಟರ್ ಗಳ ಅಂತರದಲ್ಲಿ ಈ ರೀತಿ ದುರಂತ ಸಂಭವಿಸಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಮೈಸೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ರೈಲು ಕಂಡ ಕಾರ್ಮಿಕರು ಪಕ್ಕದ ಹಳಿಗೆ ಬಂದು ನಿಂತಿದ್ದಾರೆ.
ಆದರೆ, ಅವರ ಲಕ್ ಚೆನ್ನಾಗಿರಲಿಲ್ಲ. ಅದೇ ಹಳಿ ಮೇಲೆ ಬೆಂಗಳೂರಿನಿಂದ ಬರುತ್ತಿದ್ದ ಮತ್ತೊಂದು ರೈಲು ಕಾಣಿಸಿಕೊಂಡಿದೆ. ಎರಡು ಹಳಿಗಳ ಮೇಲೆ ರೈಲು ಬರುತ್ತಿದ್ದರಿಂದ ಬೇರೆ ಮಾರ್ಗವಿಲ್ಲದೆ ಒಂದು ದಿಕ್ಕು ಹಿಡಿದು ಓಡಿದ್ದಾರೆ.
ಆದರೆ, ಎರಡು ಬದಿ ರೈಲು ಚಾಲಕರು ರೈಲು ನಿಯಂತ್ರಿಸಲು ಸಾಧ್ಯವಾಗದೆ ಇಬ್ಬರು ದುರ್ದೈವಿಗಳಿಗೆ ಡಿಕ್ಕಿ ಹೊಡೆಸಿದ್ದಾರೆ. ಹಳಿ ಬಿಟ್ಟು ಮಧ್ಯದಲ್ಲಿ ನಿಂತಿದ್ದರೆ ಇಬ್ಬರು ಬದುಕುಳಿಯುವ ಸಾಧ್ಯತೆ ಇತ್ತು. ಆದರೆ, ಎರಡು ಕಡೆ ಒಮ್ಮೆಗೆ ರೈಲು ಬರುತ್ತಿದ್ದರಿಂದ ಗಾಬರಿಗೊಂಡು ಪ್ರಾಣ ತೆತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನಗರ ರೈಲ್ವೆ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೊಮ್ಮೆ ವಿರುದ್ಧ ದಿಕ್ಕಿನಿಂದ ಒಂದೆ ಹಳಿಯ ಮೇಲೆ ಬರುತ್ತಿದ್ದ ಎರಡು ರೈಲುಗಳು ಅದೃಷ್ಟವಶಾತ್ ಡಿಕ್ಕಿ ಹೊಡೆಯದೆ ಭಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದು, ಆಗ ಚಾಲಕರ ಸಮಯಪ್ರಜ್ಞೆ ಕಾಪಾಡಿತ್ತು. ಆದರೆ, ಈಗ ಇಬ್ಬರು ಕಾರ್ಮಿಕರು ದುರಂತ ಸಾವಿಗೀಡಾಗಿದ್ದಾರೆ.












Click it and Unblock the Notifications