ತೆಳ್ಳನೆ ಗೆರೆ ಮೇಲೆ ಮೀಡಿಯಾ ಸರ್ಕಸ್ ಸಕ್ಸಸ್

ಬೆಂಗಳೂರು, ಜ 25 : ಬದಲಾಗುತ್ತಿರುವ ಭಾರತದ ಮಾಧ್ಯಮ ಪರಿಸರದಲ್ಲಿ ನಾನು ಹೇಳುವುದಿಷ್ಟೆ : "ಪುರುಷ ಕೇಂದ್ರಿತ ಸಮಾಜ ನಮ್ಮ ದೇಶದಲ್ಲಿ ಸದ್ಯದಲ್ಲೇ 'ಇತಿಹಾಸ'ವಾಗುವುದು ಖಂಡಿತ. ನೋಡ್ತಾ ಇರಿ, ಮೂರು ವರ್ಷದ ನಂತರ ನಾನು ನಿಮ್ಮನ್ನು ಮತ್ತೆ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಭಾರತ ಗುರುತು ಹಿಡಿಯಲಾರದಷ್ಟು ಬದಲಾಗಿರುತ್ತದೆ."

ಹೀಗೆ ಹೇಳಿದವರು ಪ್ರಸಿದ್ಧ ಪತ್ರಕರ್ತ ಡಾ. ದಿಲೀಪ್ ಪಡಗಾಂವ್‌ಕರ್. ಸಂದರ್ಭ : ಸಿಂಬಯಾಸಿಸ್ ಸಂಸ್ಥೆ ಗುರುವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಒಂದು ದಿನದ ಮಾಧ್ಯಮ ವಿಚಾರ ಸಂಕಿರಣ. ಮಾಧ್ಯಮ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಸೀನ್ ಬೈ ಸೀನ್ ಬದಲಾವಣೆಗಳ ಹಿನ್ನೆಲೆಯಲ್ಲಿ ದಿಲೀಪ್ ಮಾರ್ಮಿಕವಾಗಿ ನುಡಿದ ಮಾತು ಆದಾಗಿತ್ತು.

ವಿಚಾರಣ ಸಂಕಿರಣದಲ್ಲಿ ದೇಶದ ನಾನಾ ಸಂಸ್ಥೆಗಳಿಂದ ಮಾಧ್ಯಮ ಪಂಡಿತರು, ಪತ್ರಕರ್ತರು, ವಿದ್ಯಾರ್ಥಿಗಳು ಹಾಗೂ ಸುದ್ದಿ ಸರಕುಗಳನ್ನು ಮಾರಾಟ ಮಾಡಲಿಕ್ಕಾಗಿ ತಂತ್ರಗಾರಿಕೆಯನ್ನು ಹೆಣೆಯುವ ಮಾರುಕಟ್ಟೆ ತಜ್ಞರು ಪಾಲ್ಗೊಂಡಿದ್ದರು.

Sensuality Vs Vulgarity : Symbiosis transparent seminar in Bangalore

ಸಂಕಿರಣದಲ್ಲಿ ಅನೇಕ ವಿಷಯ ವಿಶೇಷಗಳ ಕುರಿತ ಚಿಂತನ ಮಂಥನ ನಡೆದರೂ ಬಹಳಷ್ಟು ಪ್ರತಿನಿಧಿಗಳ ಗಮನ ಅಪಹರಿಸಿದ ಸಂಗತಿ, ಸಮಕಾಲೀನ ಭಾರತದಲ್ಲಿ ಅತಿ ಹೆಚ್ಚು ಚರ್ಚೆಗೆ ಗುರಿಯಾಗುತ್ತಿರುವ ಸಬ್ಜೆಕ್ಟ್ - The thin line between sensuality and vulgarity in visual communication.

ಒಂಥರಾ ರಸಿಕತೆ ಮತ್ತು ಒಂಥರಾ ಅಸಭ್ಯತೆಯನ್ನು ಬಿಂಬಿಸುವ ಸುದ್ದಿ, ಮನರಂಜನೆ, ಜಾಹೀರಾತುಗಳ "ಚಿತ್ರಕಾವ್ಯ"ದ ವಿಮರ್ಶೆ ಮಾಡುವುದು ಕಷ್ಟಕಷ್ಟ. ಆದರೇನಂತೆ, ಇವೆರಡರ ನಡುವೆ ಇದ್ದೂ ಇಲ್ಲದಂತಿರುವ ತೆಳುವಾದ, ಪಾರದರ್ಶಕವಾದ ಲಕ್ಷ್ಮಣ ರೇಖೆಯನ್ನು ಗುರುತಿಸುವುದು ಸಾಧ್ಯವೇ? ಎನ್ನುವುದು ಅನೇಕರ ಕುತೂಹಲಕ್ಕೆ ಮತ್ತು ಚಿಂತನೆಗೆ ಗ್ರಾಸವಾಯಿತು.

ದೃಶ್ಯ ಮಾಧ್ಯಮ ವೇದಿಕೆಗಳಲ್ಲಿ ನಿರಂತರವಾಗಿ ಸಾಗಿರುವ ಅಶ್ಲೀಲ, ಅಸಭ್ಯ ಕಮಾಡಿಟಿಗಳತ್ತ ಅನೇಕರು ಕೆಂಗಣ್ಣು ಬೀರಿದರು. ಇದನ್ನು ತಡೆಯುವುದು ಸಾಧ್ಯವೇ? ತಡೆಯುವುದೇ ಆದರೆ, ಇವತ್ತಿನ ಪೈಪೋಟಿ ಮಾರುಕಟ್ಟೆಯಲ್ಲಿ ಅಂಥ ರಿಸ್ಕ್ ಅನ್ನು ಯಾರು ತೆಗೆದುಕೊಳ್ಳುತ್ತಾರೆ? ಎನ್ನುವುದರ ಸುತ್ತ ಚರ್ಚೆ ಗಿರಕಿ ಹೊಡೆಯಿತು.

ಇನ್ನು, ವೇದಿಕೆಗಳ ನಡುವೆ ಪರಸ್ಪರ ಸುದ್ದಿ ಮಾಹಿತಿ ಚಿತ್ರಗಳನ್ನು ಹಂಚಿಕೊಂಡು ತಿನ್ನುವ ಟ್ರೆಂಡ್ ಬಗ್ಗೆ ಉದ್ಯಮ ವಕ್ತಾರರ ನಡುವೆ ಬಿಸಿಬಿಸಿ ವಾಗ್ವಾದಗಳೂ ನಡೆದವು. Cross marketing content ಎಂಬ ಈಡಿಯಂ ಅನ್ನು ನಾವು, ಒನ್ಇಂಡಿಯಾ ಕನ್ನಡದವರು ಸ್ನೇಹ ಸೇತು ಎಂದು ಕರೆಯುತ್ತೇವೆ.

ಒಟ್ಟಾರೆ, ಸಂಕಿರಣದಲ್ಲಿ ನಡೆದ ಗಂಭೀರ ಚಿಂತನೆಗಳು ಇವತ್ತಿನ ದೃಶ್ಯ ಮಾಧ್ಯಮದ ತಪ್ಪು ಒಪ್ಪು, ದಿಕ್ಕು- ದೆಸೆಗಳತ್ತ ಬೊಟ್ಟು ಮಾಡಿ ತೋರಿಸಿದ್ದು ಸತ್ಯ. ಅಷ್ಟೇ ಅಲ್ಲ, ತನ್ನದೇ ಆದ ಕೆಲವು ಚಿಂತನಯೋಗ್ಯ ಒಳನೋಟಗಳನ್ನು ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡದ್ದು ಇಡೀ ಸೆಮಿನಾರಿನ ವೈಶಿಷ್ಟ್ಯವಾಗಿತ್ತು.

ಸಂಕಿರಣವನ್ನು ಆಯೋಜಿಸಿದವರು ಮಾಧ್ಯಮ ಮತ್ತು ಸಂವಹನ ಸಂಸ್ಥೆ ಸಿಂಬಯಾಸಿಸ್. ಸೆಮಿನಾರಿಗೆ CQ 2013 ಎಂಬ ಟ್ಯಾಗ್ ಲೈನ್ ಕೊಟ್ಟಿತ್ತು. ಕಾರ್ಯಕ್ರಮದ ಕೊನೆಯಲ್ಲಿ "ಯಕ್ಷದೇಗುಲ" ತಂಡ ಪ್ರದರ್ಶಿಸಿದ ಯಕ್ಷಗಾನ ಪ್ರಯೋಗ ಅನೇಕರಿಗೆ ಮಾಧ್ಯಮದ ನಿರ್ವಹಣೆಯ ತಲೆಬಿಸಿಗಳನ್ನು ಕೆಲಕಾಲ ಮರೆಸಿದುದು ಸ್ವಾರಸ್ಯವೇ ಆಗಿತ್ತು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+