ಯಡಿಯೂರಪ್ಪ ಗುರುವಾರದ ಸುದ್ದಿಗೋಷ್ಠಿ ವಿವರಗಳು

ಕರ್ನಾಟಕ ಜನತಾ ಪಕ್ಷಕ್ಕೆ ಯಾರು ಯಾರು ಸೇರಲಿದ್ದಾರೆ. ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಿಂದ ಕೆಜೆಪಿಗೆ ಯಾರು ಯಾರು ಬರಲಿದ್ದಾರೆ ಎಂಬುದರ ಬಗ್ಗೆ ಸ್ಥೂಲವಾಗಿ ಬಿಎಸ್ ಯಡಿಯೂರಪ್ಪ ವಿವರಿಸಿದರು.
ಸುದ್ದಿಗೋಷ್ಠಿ ಮುಖ್ಯಾಂಶಗಳು ಇಂತಿದೆ:
* ಇಬ್ಬರು ಸಚಿವರು, 13 ಶಾಸಕರು ನಿನ್ನೆ ರಾಜೀನಾಮೆ ನೀಡಿದ್ದಾರೆ. ಇನ್ನಷ್ಟು ಸಚಿವರು ರಾಜೀನಾಮೆ ನೀಡುತ್ತಾರೆ.
* ಸ್ಪೀಕರ್ ಜ.28ಕ್ಕೆ ಬರುತ್ತಾರಂತೆ, ನಾಳೆ ಬಂದರೆ ನಾಳೆಯೇ ನಮ್ಮ ಶಾಸಕರು ರಾಜೀನಾಮೆ ನೀಡುತ್ತಾರೆ.
* ಸುನೀಲ್ ವಲ್ಯಾಪುರೆ ರಾಜೀನಾಮೆ ನೀಡುತ್ತಾರೆ. ಮುಕುಡಪ್ಪ ಕೆಜೆಪಿ ಸೇರುತ್ತಾರೆ.
* ಜನವರಿ ಮುಗಿದಿಲ್ಲ. ಈಗಾಗಲೇ ಕುಡಿಯುವ ನೀರಿನ ಹಾಹಾಕಾರ ಎದ್ದಿದೆ. ಸರ್ಕಾರ ಗಮನ ಹರಿಸುತ್ತಿಲ್ಲ.
* ಬಜೆಟ್ ಮಂಡನೆ ತಡೆಯುವುದು ನಮ್ಮ ಉದ್ದೇಶವಲ್ಲ. ಸರ್ಕಾರ ಬೀಳಿಸಲು ಯತ್ನಿಸುತ್ತಿಲ್ಲ.
* ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಸಾಮಾನ್ಯ ಜನರನ್ನು ಕೇಳಿದರೂ ಹೇಳುತ್ತಾರೆ.
* ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಳು ವಾಸ್ತವಾಂಶವನ್ನು ಅರ್ಥಮಾಡಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನರು ತಮಗೆ ಬೇಕಾದ ಸರ್ಕಾರ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು.
* ಸದ್ಯದಲ್ಲೇ ಕೆಜೆಪಿ ಸಂಸದೀಯ ಮಂಡಳಿ ರಚಿಸಲಾಗಿದೆ.
* ಚಿತ್ರದುರ್ಗದ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಪಕ್ಷ ಸೇರುತ್ತಿದ್ದಾರೆ. ಅವರಿಗೆ ಅಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತೆ.












Click it and Unblock the Notifications