'ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಶಾಸಕರು'

15-mlas-resignation-ktk-bjp-govt-safe-cm-shettar
ಉಡುಪಿ, ಜ.23:ಯಡಿಯೂರಪ್ಪ ಬೆಂಬಲಿಗ ಶಾಸಕರ ರಾಜೀನಾಮೆ ಪ್ರಹಸನದ ಬಗ್ಗೆ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಉಡುಪಿಯಲ್ಲಿ ಲೇವಡಿ ಮಾಡಿದ್ದಾರೆ. 'ರಾಜೀನಾಮೆಗೆ ಮುಂದಾಗಿರುವ ಶಾಸಕರ ಪರಿಸ್ಥಿತಿ ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಹಾಗೆ ಆಗಿದೆ. ಆನೆ ಮುಂದೆ ನಿಂತು ಇರುವೆಗಳು ಕೂಗು ಹಾಕಿದಂತಿದೆ' ಎಂದು ಬಣ್ಣಿಸಿದ್ದಾರೆ.

'ಇಂದಿರಾ ಗಾಂಧಿ ಅವರೇ ಬಿಜೆಪಿ ಸರಕಾರವನ್ನು ಉರುಳಿಸಲು ಈ ಹಿಂದೆ ಯತ್ನಿಸಿದ್ದರು. ಆದರೆ ಅವರೇ ಮಣ್ಣು ಮುಕ್ಕಿದರು. ಇನ್ನು ಈ ನಾಯಕರು ಯಾವ ಲೆಕ್ಕ?' ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಸರಕಾರ ಸೇಫ್; ರಾಜೀನಾಮೆ ಮಕ್ಕಳಾಟವಲ್ಲ:
ಬಿಜೆಪಿ ಪಕ್ಷದ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲ. ಸರಕಾರ ಸೇಫ್ ಆಗಿದೆ ಎಂದು ಜಗದೀಶ್ ಶೆಟ್ಟರ್ ಅವರು ಬಳ್ಳಾರಿಯ ತೋರಣಗಲ್ ನಲ್ಲಿ ಇಂದು ಬೆಳಗ್ಗೆ ಹೇಳಿದ್ದಾರೆ.

'ಫೆ. 8ಕ್ಕೆ ಬಜೆಟ್ ಮಂಡಿಸುವುದೇ ನಾನೇ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಶೆಟ್ಟರ್, ಶಾಸಕರ ರಾಜೀನಾಮೆ ಮಕ್ಕಳಾಟವಲ್ಲ. ನಾಡಿನ ಜನತೆ ಇವರಾಟವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.

'ಸ್ಪೀಕರ್ ವಿದೇಶ ಪ್ರವಾಸದ ಹಿಂದೆ ಯಾವುದೇ ರಾಜಕೀಯ ಕುತಂತ್ರವಿಲ್ಲ. ಅದು ಅವರ ಸ್ವಯಂ ನಿರ್ಧಾರ. ಸದ್ಯಕ್ಕೆ ಸ್ಪೀಕರ್ ಬೋಪಯ್ಯ ಅವರು ನೇಪಾಳದ ಕಠ್ಮಂಡುವಿನಲ್ಲಿದ್ದಾರೆ' ಎಂದು ಶೆಟ್ಟರ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+