ಮತಾಂತರವಾಗುವ ದಲಿತರಿಗೆ ಸರ್ಕಾರಿ ಸೌಲಭ್ಯ ಕಟ್

ಭಾನುವಾರ (ಜ 20) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು, ಪ್ರಮುಖವಾಗಿ ದಲಿತ ಕುಟುಂಬದವರು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರ ಗೊಳ್ಳುತ್ತಿದ್ದಾರೆ.
ದಲಿತ ಕುಟುಂಬಗಳಿಗೆ ಎಸ್ಸಿ, ಎಸ್ಟಿ ಸೌಲಭ್ಯ ನೀಡಲಾಗುತ್ತದೆ. ಹೀಗೆ ಮತಾಂತರಗೊಂಡ ಕುಟುಂಬಕ್ಕೆ ಕೊಡುತ್ತಿರುವ ಸರಕಾರೀ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಸರಕಾರದ ವ್ಯಾಪ್ತಿಗೆ ಬರುವ ಜಮೀನುಗಳನ್ನು ವಸತಿಹೀನರಿಗೆ ಹಂಚಲಾಗುವುದು. ಈ ಸಂಬಂಧ ನ್ಯಾಯಾಲಯದ ಮಾರ್ಗದರ್ಶನ ಪಡೆಯಲಾಗುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಕುಮ್ಕಿ ಜಮೀನು ರಾಜ್ಯ ಸರಕಾರದ ಅಧೀನದ್ದು. ಇದು ಅರಣ್ಯ ಇಲಾಖೆಯ ಸುಪರ್ದಿಗೆ ಬರುವುದಿಲ್ಲ.
ಸೂಕ್ತ ಕಾನೂನಿನಡಿ ಸದ್ಯದಲ್ಲೇ ಸರಕಾರ ಈ ಜಮೀನುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.
ಈ ಜಮೀನನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡ ನಂತರ ವಸತಿಹೀನರಿಗೆ ಮನೆ ಕಟ್ಟಿಕೊಳ್ಳಲು ವಿತರಿಸಲಾಗುವುದು ಎಂದು ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.












Click it and Unblock the Notifications