Q3: ವಿಪ್ರೋ ಪಾಲಿಗೆ ಇಂದು ಶುಭ ಶುಕ್ರವಾರ

Wipro Q3 beats forecast, net up 6.5% QoQ to Rs 1,716 cr
ಬೆಂಗಳೂರು, ಜ.18: ವಿಪ್ರೋ ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ನಿರೀಕ್ಷೆಗೂ ಮೀರಿ ಭರ್ಜರಿ ಇಳುವರಿ ಕಂಡಿದೆ. ಶುಕ್ರವಾರ(ಜ.18) ಪ್ರಕಟವಾದ ತ್ರೈಮಾಸಿಕ ವರದಿಯಲ್ಲಿ QoQ ನಂತೆ ನಿವ್ವಳ ಲಾಭದಲ್ಲಿ ಶೇ 6.5ರಷ್ಟು ಏರಿಕೆ ಕಂಡು 1,7616 ಕೋಟಿ ರು ಗಳಿಸಿದೆ.

ಒಟ್ಟಾರೆ ನಿವ್ವಳ ಆದಾಯ ಶೇ 3.3ರಷ್ಟು ಏರಿಕೆಗೊಂಡು ಸುಮಾರು 10,989.1 ಕೋಟಿ ರು. ಗಳಿಕೆ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10,639.7 ಕೋಟಿ ರು. ಗಳಿಸಿತ್ತು.

ಷೇರುಪೇಟೆಯಲ್ಲಿ ಯಾಕೋ ವಿಪ್ರೋ ಷೇರುಗಳು ಡಲ್ ಹೊಡೆಯುತ್ತಿದೆ. ಬಿಎಸ್ಇನಲ್ಲಿ 11.45 ಗಂಟೆ ಸುಮಾರಿಗೆ 410.20 ರು. ನಂತೆ ಶೇ 4.85 ರಷ್ಟು ಇಳಿದಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 409.25 ರು. ನಂತೆ ಶೇ 4.98 ರಷ್ಟು ಇಳಿದಿದೆ.

ಮಾರುಕಟ್ಟೆ ತಜ್ಞರು ಈ ಅವಧಿಗೆ ನಿವ್ವಳ ಲಾಭ 1,633 ಕೋಟಿ ರು ಹಾಗೂ ಆದಾಯ 10,930 ಕೋಟಿ ರು ನಿರೀಕ್ಷೆ ಹೊಂದಿದ್ದರು. ಆದರೆ, ನಿರೀಕ್ಷೆ ಮೀರಿ ವಿಪ್ರೋ ಸಾಧನೆ ಮಾಡಿದೆ. Q3FY13ಗೆ EBIT 1,945.9 ಕೋಟಿ ರು ನಷ್ಟಿತ್ತು.

ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ಗ್ರಾಹಕರು ಹಾಗೂ ಉದ್ಯೋಗಿಗಳ ನಡುವೆ ನಿರಂತರ ಸಂಪರ್ಕ ಈ ಸಾಧನೆಗೆ ಪೂರಕವಾಗಿದೆ. ಕ್ಲೌಡ್, ಮೊಬಿಲಿಟಿ, ಅನಾಲಿಟಿಕ್ಸ್ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮುಂದುವರೆಯಲಿದೆ ಎಂದು ವಿಪ್ರೋ ಸಂಸ್ಥೆಯ ಸಿಎಫ್ ಒ ಸುರೇಶ್ ಸೇನಾಪತಿ ಹೇಳಿದ್ದಾರೆ.

ಇದೇ ಖುಷಿಯಲ್ಲಿ ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ವಿಪ್ರೋ, ತನ್ನ ಷೇರುದಾರರಿಗೆ ಪ್ರತಿ ಈಕ್ವಿಟಿ ಷೇರುಗಳಿಗೆ 2 ರು (0.04 ಡಾಲರ್) ನಂತೆ ಮಧ್ಯಂತರ ಡಿವೆಂಡೆಡ್ ಘೋಷಿಸಿದೆ.

ಡಿಸೆಂಬರ್ 31, 2012ಕ್ಕೆ ಅನ್ವಯವಾಗುವಂತೆ ವಿಪ್ರೋನ ಐಟಿ ಸರ್ವೀಸಸ್ ವಿಭಾಗದಲ್ಲಿ ಸುಮಾರು 1,42,905 ಉದ್ಯೋಗಿಗಳಿದ್ದಾರೆ.ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ 2,336 ಹೆಚ್ಚುವರಿ ನೇಮಕಾತಿ ನಡೆದಿದೆ. ಈ ಅವಧಿಯಲ್ಲಿ ಸುಮಾರು 50 ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+