ಬೆಂಗಳೂರು ಉತ್ತರದಲ್ಲಿ ಭೂಮಿ ಬೆಲೆ ಮತ್ತೆ ಗಗನಕ್ಕೆ

bangalore-north-residential-rentals-remain-upbeat
ಬೆಂಗಳೂರು, ಜ.16: ರಾಜಧಾನಿಯಲ್ಲಿ ಯಾವ ಭಾಗದಲ್ಲಿ ರಿಯಲ್ ಎಸ್ಟೇಟ್ ಸುಭಿಕ್ಷವಾಗಿದೆ? ಯಾವ ಜಾಗ ಸುಭಿಕ್ಷವಾಗಿಲ್ಲ, ಹೇಳಿ ಸ್ವಾಮಿ. ಬೆಂಗಳೂರಿನ ಇಂಚಿಂಚೂ ಭೂಮಿಯೂ (ಅಂದರೆ ಅದರ ಬೆಲೆಗಳು) ಗಗನದಲ್ಲೇ ಹಾರಾಡುತ್ತಿದೆ ಎಂಬುದು ಎಲ್ಲರೂ ಒಪ್ಪಿರುವ ಮಾತು.

ಆದರೂ ನಿರ್ದಿಷ್ಟವಾಗಿ ಇಂತಿಷ್ಟೇ ಎಂದು ಹೇಳುವುದಾದರೆ ಬೆಂಗಳೂರು ಉತ್ತರದಲ್ಲಿ ಭೂಮಿ ಬೆಲೆ ಗಗನದಲ್ಲೇ ಹಾರಾಡುತ್ತಿದೆ. ಮೂಲಸೌಕರ್ಯ ಉತ್ತಮವಾಗಿ ಅಭಿವೃದ್ಧಿಯಾಗಿರುವುದು, ಬೇಡಿಕೆ ಹೆಚ್ಚಳ, ಬೆಲೆ ವೃದ್ಧಿ ಇವೇ ಮುಂತಾದ ನೆಪಗಳಿಂದಾಗಿ ಕಳೆದ ವರ್ಷದಂತೆ 2013ರಲ್ಲಿಯೂ ಇಲ್ಲಿನ ಭೂಮಿಗೆ ಬಂಗಾರದಂತಹ ಬೆಲೆಯಿರುತ್ತದೆ.

ವಸತಿ ಮಾರಾಟ ಭರಾಟೆ ಜೋರು
: ಅಧ್ಯಯನವೊಂದರ ಪ್ರಕಾರ ಮೊನ್ನೆ ಡಿಸೆಂಬರಿನಲ್ಲಿ ಬೆಂಗಳೂರು ಉತ್ತರದಲ್ಲಿ ವಸತಿಯೋಗ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮಾರಾಟ ಭರಾಟೆ ಜೋರಾಗಿಯೇ ನಡೆದಿದೆ. ಇದರಿಂದ ಹೊಷ ವರ್ಷ ಸಂದರ್ಭದಲ್ಲಿ ಅನೇಕ ಖಾಸಗಿ ಕಂಪನಿಗಳು ಹೊಸ ಹೊಸ ಗೃಹ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಂಡಿವೆ.

ಮುಖ್ಯವಾಗಿ Woodland Heights-DLF, New Heaven-TATA Housing ಮತ್ತು Royale Gardens -Prestige Group ಕಂಪನಿಗಳು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿವೆ.

ಗೃಹ ನಿರ್ಮಾಣ ಯೋಜನೆಗಳು ಹೀಗೆ ಭದ್ರ ಅಡಿಪಾಯ ಹಾಕುತ್ತಿರುವಾಗಲೇ ಅದಕ್ಕೆ ಆಧಾರವಾಗಿ ಮನೆ ಬಾಡಿಗೆಯೂ ಗಗನಚುಂಬಿಯಾಗಿದೆ. ಬೇಡಿಕೆ ಹೆಚ್ಚಾಗುತ್ತಿರುವುದು ಮತ್ತು ಖರೀದಿಗಾಗಿ ತಕ್ಷಣಕ್ಕೆ ಅಪಾರ್ಟ್ ಮೆಂಟುಗಳು ಸಿಗದಿರುವುದು (ಬೇಡಿಕೆ ಹೆಚ್ಚಳ ಮತ್ತು ಲಭ್ಯತೆಯ ಪ್ರಮಾಣ ಕ್ಷೀಣಿಸಿರುವುದು) ಈ ವಿದ್ಯಮಾನಕ್ಕೆ ಹೇತುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+