ಕಮಟು ವಾಸನೆ ಬರ್ತಿದೆ, ಬಿಜೆಪಿ ಸರ್ಕಾರದ ಹೆಣ ಎತ್ತಿ

ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ರಾಜ್ಯ ಬಿಜೆಪಿ ಸರ್ಕಾರದ ಕುರಿತು ಸುದ್ದಿಗೋಷ್ಠಿಯಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ: 'ಸತ್ತು ಹೋಗಿರುವ ಸರ್ಕಾರದ ಪಕ್ಕದಲ್ಲಿ ಬಿಜೆಪಿ, ಕೆಜೆಪಿಯವರು ಅಳುತ್ತಾ ಕುಳಿತ್ತಿದ್ದಾರೆ. ಹೆಣ ಕೊಳೆತು ವಾಸನೆ ಬಂದು ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕುವ ಮುನ್ನವೇ ಶವದ ಅಂತ್ಯಸಂಸ್ಕಾರ ಮಾಡುವಂತೆ ಆಗ್ರಹ ಪೂರ್ವಕ ಮನವಿ ಮಾಡಿಕೊಳ್ಳುತ್ತೇನೆ' ಎಂದು ಕೈಜೋಡಿಸಿ ಮುಗಿದರು.
'ಆದರೆ ಬಿಜೆಪಿ ಸರ್ಕಾರವನ್ನು ಹೂಳಬೇಕೋ, ಸುಡಬೇಕೋ?' ತಿಳಿಯದಾಗಿದೆ ಎಂದು ಸೂಚ್ಯವಾಗಿ ದತ್ತಾ ಹೇಳಿದರು.
ಜೆಡಿಎಸ್, ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ಆರೋಪವನ್ನು ನಿರಾಕರಿಸಿದ ದತ್ತಾ, ಜೆಡಿಎಸ್ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ.
ಜೆಡಿಎಸ್ ಬಗ್ಗೆ ಇಲ್ಲದ ಆರೋಪ ಮಾಡುವುದೇ ಯಡಿಯೂರಪ್ಪ ಕೆಲಸವಾಗಿದೆ ಎಂದು ದೂರಿದ ಅವರು, ರಾಜ್ಯ ಬಿಜೆಪಿ ಸರ್ಕಾರವನ್ನು ಬೆಂಬಲಿಸಬೇಕೆಂಬ ಯಾವುದೇ ಉದ್ದೇಶ ಜೆಡಿಎಸ್ ಗಿಲ್ಲ. ಇಂತಹ 'ಉತ್ತಮವಾದ ಸರ್ಕಾರವನ್ನು ಉಳಿಸಿದ ಪಾಪ' ಜೆಡಿಎಸ್ ಗೆ ಬೇಕಿಲ್ಲ ಎಂದು ದತ್ತಾ ಲೇವಡಿ ಮಾಡಿದರು.
ಅಷ್ಟೇ ಅಲ್ಪಮತಕ್ಕೆ ಕುಸಿದಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಕೆಜೆಪಿ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದರೆ ಜೆಡಿಎಸ್ ಅದನ್ನು ಬೆಂಬಲಿಸುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.












Click it and Unblock the Notifications