ಲಂಚ: ಪರಾರಿಯಾಗಿದ್ದ ಪೇದೆ ಪಿಪಿ ಮಂಜುನಾಥನ ಅರೆಸ್ಟ್

ಸೆಪ್ಟೆಂಬರ್ 6ರ ಗುರುವಾರ ಸಂಜೆ ತನ್ನ ಮೇಲಧಿಕಾರಿ ಇನ್‌ಸ್ಪೆಕ್ಟರ್ ಎಂ. ಪುರುಷೋತ್ತಮ್ ಜತೆ ಪರಾರಿಯಾಗಿದ್ದ ಭೂಪ ಅನ್ಯ ಮಾರ್ಗವಿಲ್ಲದೆ ತಡವಾಗಿಯಾದರೂ ನಿನ್ನೆ ಮಧ್ಯಾಹ್ನ ಲೋಕಾಯುಕ್ತ ಕೋರ್ಟಿಗೆ ಶರಣಾಗಿದ್ದಾನೆ.
ದಾಸನಾಯಕನಹಳ್ಳಿ ನಿವಾಸಿ ಮಂಜುನಾಥ ಕೋರ್ಟಿಗೆ ಶರಣಾದ ಪೇದೆ. ಲೋಕಾಯುಕ್ತ ನ್ಯಾಯಾಧೀಶರಾಧ ಪ್ರಕರಣದ ಸಂಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಆರೋಪಿ ಮಂಜುನಾಥನಿಗೆ ಜಾಮೀನು ಕೋರಿ ಅವನ ಪರ ವಕೀಲರು ಅರ್ಜಿ ಸಲ್ಲಿಸಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಅಭಿಯೋಜಕ ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಇಂದಿಗೆ (ಶನಿವಾರ) ಮುಂದೂಡಿದ್ದಾರೆ.
ಪ್ರಕರಣವನ್ನು ಬೇಧಿಸಿದ್ದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಅಬ್ದುಲ್ ಅಹಮದ್ ಅವರು ಕೊತ್ತನೂರು ಠಾಣೆ ಇನ್‌ಸ್ಪೆಕ್ಟರ್ ಪುರುಷೋತ್ತಮನನ್ನು ತಕ್ಷಣವೇ ಬಂಧಿಸಿದ್ದರಾದರೂ ಮಂಜುನಾಥ ನಾಪತ್ತೆಯಾಗಿದ್ದ. ಅವನ್ನು ಹುಡುಕಿಕೊಡುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಸಾಹೇಬರಿಗೆ ಲೋಕಾಯುಕ್ತ ಪೊಲೀಸರು ತಾಕೀತು ಮಾಡಿದ್ದರು. ಆದರೆ 4 ತಿಂಗಳ ನಂತರ ಪೇದೆ ಈಗ ಶರಣಾಗಿದ್ದಾನೆ.












Click it and Unblock the Notifications