ಐಬಿಎಂ ಕಾಲ್ ಸೆಂಟರ್ ಉದ್ಯೋಗಿ ಆತ್ಮಹತ್ಯೆ

IBM Employee commits Suicide
ಪುಣೆ, ಜ.4: ಐಬಿಎಂ ಕಾಲ್ ಸೆಂಟರ್ ನಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಕಚೇರಿ ಕಟ್ಟದದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ(ಜ.4) ಬೆಳಗ್ಗೆ ನಡೆದಿದೆ.

ಮೃತಪಟ್ಟ ಯುವತಿಗೆ 30 ವರ್ಷ ವಯಸ್ಸಾಗಿದ್ದು, ಹೆಸರು ಇನ್ನಿತರ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ.

ಇಲ್ಲಿನ ಯರವಾಡದಲ್ಲಿರುವ ಐಬಿಎಂ ಇಂಡಿಯಾ ಕಚೇರಿಯಲ್ಲಿ ಕಟ್ಟಡದಲ್ಲಿ ಆಕೆ ಉದ್ಯೋಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಕಚೇರಿ ಬಂದ ತಕ್ಷಣ ಮಹಡಿ ಏರಿದ್ದಾರೆ.

7ನೇ ಅಂತಸ್ತಿಗೆ ತೆರಳಿ ಅಲ್ಲಿಂದ ಹಾರಿ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ರಕ್ತಸ್ರಾವವಾದ ಕಾರಣ ಆಸ್ಪತ್ರೆಗೆ ಸೇರಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿಯ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕಚೇರಿ ಅಥವಾ ಮನೆಯಲ್ಲಾಗಲಿ ಸೂಸೈಡ್ ನೋಟ್ ಬಿಟ್ಟಿಲ್ಲ. ಯಾರೊಂದಿಗೂ ಆತ್ಮಹತ್ಯೆ ಬಗ್ಗೆ ಮಾತನಾಡಿಲ್ಲ. ಸಹದ್ಯೋಗಿಗಳಿಗೆ ಆಕೆ ಆತ್ಮಹತ್ಯೆಗೆ ಮಾಡಿಕೊಳ್ಳಬಹುದು ಎಂಬ ಸಣ್ಣ ಸುಳಿವು ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. ಮೊದಲಿಗೆ ಕಚೇರಿಯ ಸಹದ್ಯೋಗಿಗಳ ವಿ‌ಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.

* ಬೆಂಗಳೂರಿನ ಐಬಿಎಂ ವೈಟ್ ಫೀಲ್ಡ್ ಸಂಸ್ಥೆ ಉದ್ಯೋಗಿ 24 ವರ್ಷದ ಭರತ್ ತನ್ನ ಆಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಯಲಹಂಕದ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಲಾಳಸಂದ್ರದ ಜನಪ್ರಿಯ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದರು.
* ಪುಣೆ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸದಲ್ಲಿದ್ದ 23 ವರ್ಷದ ಬದ್ರಿನಾರಾಯಣ್ ಅವರು ಬೆಂಗಳೂರಿನ ಇನ್ಫೋಸಿಸ್ ಕಚೇರಿ ಗೆಸ್ಟ್ ಹೌಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
* ಚೆನ್ನೈನ ಕಾಂಗ್ನಿಜೆಂಟ್ ಟೆಕ್ನಾಲಜೀಸ್ ಸಲ್ಯೂಷನ್ಸ್ ಸಂಸ್ಥೆಯ ಕಟ್ಟಡದಿಂದ ಜಿಗಿದು ಮಹಿಳಾ ಉದ್ಯೋಗಿ ಸಾವಿಗೆ ಶರಣಾಗಿದ್ದರು.

ಟೆಕ್ಕಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಮಾನಸಿಕ ಒತ್ತಡ, ಕೆಲಸದ ಒತ್ತಡ, ಖಿನ್ನತೆ ಜೊತೆಗೆ ವರದಕ್ಷಿಣೆ ಕಿರುಕುಳ ಪ್ರಮುಖ ಅಂಶವಾಗಿದೆ. ಪುಣೆ ಪ್ರಕರಣದಲ್ಲಿ ಕೂಡಾ ಶಿಫ್ಟ್ ಗಳಲ್ಲಿ ವರ್ಕ್ ಮಾಡಲು ಆಗದೆ ಯುವತಿ ಪರದಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಆದರೆ, ಆಕೆ, ಸಾವಿನ ಕಾರಣದ ಬಗ್ಗೆ ತನಿಖೆ ನಂತರವಷ್ಟೇ ಸ್ಪಷ್ಟಣೆ ಮೂಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+