ರೈತರನ್ನು ಮುಟ್ಟಿ ಡೆಟಾಲಿನಿಂದ ಕೈತೊಳೆಯಲ್ಲಾ, ಎಚ್ಡಿಕೆ

ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳೊಬ್ಬರು ರೈತರನ್ನು ಮುಟ್ಟಿದರೆ ಡೆಟಾಲ್ ಹಾಕಿ ಕೈತೊಳೆಯುತ್ತಾರೆ.
ನಾನು ಸದಾ ರೈತರೊಂದಿಗೆ ಇದ್ದರೂ ಡೆಟಾಲ್ ಬಳಸುವುದೇ ಇಲ್ಲ. ಇದು ಜೆಡಿಎಸ್ ಪಕ್ಷದ ಸಂಸ್ಕೃತಿ ಎಂದು ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಎಸ್ ಎಂ ಕೃಷ್ಣ ಅವರನ್ನು ಲೇವಡಿ ಮಾಡಿದ್ದಾರೆ.
ನಾವು ರೈತರ ಕಷ್ಟ , ಸುಖ ಅರಿಯಲು ಹಳ್ಳಿ ಹಳ್ಳಿ ಸುತ್ತುತ್ತಿದ್ದೇವೆ. ಬಹುಷಃ ನಾನು ಕಪ್ಪಾಗಿ ಇರುವುದರಿಂದ ಮಾಧ್ಯಮದವರಿಗೆ ನಾನು ಕಾಣಿಸದೇ ಇರಬಹುದು.
ಎಸ್ ಎಂ ಕೃಷ್ಣ ಚಡ್ಡಿ, ಟಿ-ಶರ್ಟ್ ಧರಿಸಿ ಟೆನಿಸ್ ಆಟವಾಡುತ್ತಿದ್ದರೆ ಮಾಧ್ಯಮದವರು ಮೊದಲ ಪುಟದಲ್ಲಿ ಅದನ್ನು ಹಾಕುತ್ತಾರೆ ಎಂದು ಕುಮಾರಸ್ವಾಮಿ ಮಾಧ್ಯಮದವರಿಗೂ ಟಾಂಗ್ ನೀಡಿದರು.
ಜನತೆಯ ಖುಣ ತೀರಿಸುವ ಬದಲು ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ಖುಣ ತೀರಿಸಲು ರಾಜ್ಯ ಪ್ರವಾಸ ಮಾಡುತ್ತೇನೆ ಎನ್ನುವ ಬಾಲಿಶ ಹೇಳಿಕೆ ಎಸ್ ಎಂ ಕೃಷ್ಣ ನೀಡುತ್ತಾರೆ.
ಮತದಾರರು ನೀವು ಬುದ್ದಿವಂತರಿದ್ದೀರಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮತ ನೀಡಬೇಕೋ, ಬೇಡವೋ ಎಂದು ನೀವೇ ನಿರ್ಧರಿಸಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬರುವ ಯುಗಾದಿ ವೇಳೆಗೆ ರಾಜ್ಯದಲ್ಲಿ ಮತದಾರರ ಆಶಿರ್ವಾದದಿಂದ ಜೆಡಿಎಸ್ ಸರ್ಕಾರ ರಚನೆಯಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಭವಿಷ್ಯ ನುಡಿಯಲು ಮರೆಯಲಿಲ್ಲ.
ಈ ಬಾರಿ ಚುನಾವಣೆಯಲ್ಲಿ ತಾಲೂಕಿನ ಜನತೆ ಜೆಡಿಎಸ್‌ನ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.












Click it and Unblock the Notifications