ದಿಲ್ಲಿ ರೇಪ್ ಬಾಧಿತೆ ಹೆಸರು ಬಹಿರಂಗಕ್ಕೆ ಸಮ್ಮತಿ

Delhi physiotherapist gangmolestion: Naming Anti-Rape law after girl OK with her family
ನವದೆಹಲಿ, ಜ.2: ಪೈಶಾಚಿಕವಾಗಿ ಅತ್ಯಾಚಾರಕ್ಕೀಡಾಗಿ, ಮೃತಪಟ್ಟಿದ್ದ ದೆಹಲಿಯ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಹೆಸರನ್ನು ಬಹಿರಂಗಪಡಿಸಲು ಆಕೆಯ ಕುಟುಂಬಸ್ಥರು ಸಮ್ಮತಿಸಿದ್ದಾರೆ. ಆದರೆ ಅತ್ಯಾಚಾರದ ವಿರುದ್ಧ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಕಠಿಣ ಕಾನೂನಿಗೆ ಅವಳ ಹೆಸರನ್ನಿಡುವ ಮೂಲಕ ಅದು ಮಾದರಿಯಾಗಿರಲಿ ಎಂದು ಅವರು ಆಶಿಸಿದ್ದಾರೆ.

ಪರಿಷ್ಕೃತಗೊಳ್ಳಲಿರುವ ಅತ್ಯಾಚಾರ ತಡೆ ಶಾಸನಕ್ಕೆ ಆಕೆಯ ಹೆಸರನ್ನೇ ಇಡಬೇಕು. ಅದು ಅರ್ಹ ಗೌರವವಾಗುತ್ತದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ 228ನೇ ಕಲಂ ಅನ್ವಯಅತ್ಯಾಚಾರ ಬಾಧಿತೆಯ ಹೆಸರು ಬಹಿರಂಗಪಡಿಸುವುದಕ್ಕೆ ಅವಕಾಶವಿಲ್ಲ. ಆದರೆ ದಿಲ್ಲಿ ಗ್ಯಾಂಗ್ ರೇಪ್ ಪ್ರಕರಣವು ಅಪರೂಪದಲ್ಲಿ ಅಪರೂಪದ್ದಾಗಿದ್ದು, ಆಕೆಯ ಹೆಸರು ಬಹಿರಂಗಕ್ಕೆ ಈಗ ಒತ್ತಡ ಹೆಚ್ಚಾಗಿದೆ.

ನಿನ್ನೆಯಷ್ಟೇ ಕೇಂದ್ರ ಸಚಿವ ಶಶಿ ತರೂರ್ ಅವರು 'ಯುವತಿ ಹೆಸರು ಬಹಿರಂಗಕ್ಕೆ ಸಲಹೆ' ನೀಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರು. ಆದರೆ ಇಂದು ಆಕೆಯ ಕುಟುಂಬಸ್ಥರೇ ಹೆಸರು ಬಹಿರಂಗಪಡಿಸುವುದಕ್ಕೆ ಮುಂದಾಗಿರುವುದರಿಂದ ಸಚಿವ ಶಶಿ ತರೂರ್ ಅವ ರಿಗೆ ನೈತಿಕ ಜಯ ಸಿಕ್ಕಂತಾಗಿದೆ.

ಕ್ರೂರ ಅತ್ಯಾಚಾರ ಹಾಗೂ ನಂತರದ ತೀವ್ರ ಹಲ್ಲೆಯಿಂದ ಮೃತಪಟ್ಟ ಯುವತಿಯ ಹೆಸರನ್ನು ಗೋಪ್ಯವಾಗಿಡುವುದರಿಂದ ಏನನ್ನು ಸಾಧಿಸಿದಂತಾಗುತ್ತದೆ ಎಂದು ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವರಾದ ತರೂರ್ ನಿನ್ನೆ ಪ್ರಶ್ನಿಸಿದ್ದರು.

ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ ದಿಲ್ಲಿ ಗ್ಯಾಂಗ್ ರೇಪ್ ಬಾಧಿತೆಯ ತವರೂರು ಉತ್ತರ ಪ್ರದೇಶದ ಬಲಿಯಾದ ಮೇದ್ವಾರ್ ಕಾಲನ್‌. ಈ ಗ್ರಾಮದ ಪ್ರಾಥಮಿಕ ಶಾಲೆಗೆ ಆಕೆಯ ಹೆಸರನ್ನೇ ನಾಮಕರಣ ಮಾಡಲು ಮೇದ್ವಾರ್ ಕಾಲನ್‌ ಗ್ರಾಮದ ಗ್ರಾಮ ಪಂಚಾಯಿತಿ ಮುಖ್ಯಸ್ಥ ಶಿವ್ ಮಂದಿರ್ ಸಿಂಗ್ ತೀರ್ಮಾನ ತೆಗೆದುಕೊಂಡಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+