ಬಿಗ್ ಬಿ ಹೃದಯವಂತಿಕೆಗೆ ಎರಡು ಉದಾಹರಣೆ

amitabh-bachchan-gives-cash-constable-sc-tomar-family
ಮುಂಬೈ, ಡಿ. 26: ಧನ್ ಬಾದಿನ ಸೋನಾಲಿ ಮುಖರ್ಜಿಗೆ ಆಗಿನ್ನೂ 16 ವರ್ಷ. ಕಾಮಾಂಧ ವಿದ್ಯಾರ್ಥಿಗಳು ಅವಳ ಮುಖದ ಮೇಲೆ ಬಾಟಲಿಯಲ್ಲಿದ್ದ ಅಷ್ಟೂ ಆಸಿಡ್ ಅನ್ನು ಸುರಿದು, ಅವಳ ಬಾಳನ್ನು ಸುಟ್ಟುಹಾಕಿದ್ದರು. ಅದಾಗಿ 10 ವರ್ಷಗಳೇ ಕಳೆದಿವೆ. ಬಸವನ ಹುಳುವಿನಂತೆ ತೆವಳುವ ನಮ್ಮ ನ್ಯಾಯ ವ್ಯವಸ್ಥೆಯಿಂದ ಸೋನಾಲಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ!

ಆದರೆ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರಲ್ಲಾ ಕೌನ್ ಬನೇಗಾ ಕರೋಡ್ ಪತಿ ಎಂಬ ಅತ್ಯಂತ ಜನಪ್ರಿಯ ಕಾರ್ಯಕ್ರಮ, ಆ ಕಾರ್ಯಕ್ರಮದ ಮೂಲಕ ಆಸಿಡ್ ದಾಳಿಯ ಬಾಧಿತೆಗೆ ಒಂದಷ್ಟು ಪರಿಹಾರ ಸಿಕ್ಕಿದೆ. KBC 6 ಮೂಲಕ ಸೋನಾಲಿಗೆ ಅಮಿತಾಭ್, 25 ಲಕ್ಷ ರೂ. ಪ್ರಶಸ್ತಿ ಮೊತ್ತವನ್ನು ದಕ್ಕಿಸಿಕೊಟ್ಟಿದ್ದಾರೆ. ಸೋನಾಲಿ ಸ್ವಲ್ಪಮಟ್ಟಿಗೆ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾಳೆ. ಇಲ್ಲಿ ರೂ 25 ಲಕ್ಷಕ್ಕಿಂತ ಸದ್ಬಾವನೆ ಅಮೂಲ್ಯ, ಅಲ್ವಾ.

ಮತ್ತೊಂದು ಪ್ರಸಂಗ: ಸೋನಾಲಿಗೆ ಅಮಿತಾಭ್ ನೆರವಾಗಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮುನ್ನ, ಇದೇ ಅಮಿತಾಭ್ ಮತ್ತೊಮ್ಮೆ ತಮ್ಮ ಹೃದಯವೈಶಾಲ್ಯವನ್ನು ಪರಿಚಯಿಸಿದ್ದಾರೆ. ಅದನ್ನೂ ತಿಳಿದುಕೊಳ್ಳಿ.

ಏನಿಲ್ಲ, ಮೊನ್ನೆ ದೆಹಲಿ ಅತ್ಯಾಚಾರ ಪ್ರಕರಣದ ವಿರುದ್ಧ ಇಂಡಿಯಾ ಗೇಟ್ ಬಳಿ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಪೇದೆ ಸುಭಾಷ್ ಚಂದ್ ತೋಮರ್ ಬಲಿಯಾದರಲ್ಲ. ಅದರಿಂದ ಸಂತೋಷವನ್ನು ಕಳೆದುಕೊಂಡ ಕುಟುಂಬಕ್ಕೆ ಅಮಿತಾಭ್ ಬಚ್ಚನ್ ಅವರು 2.5 ಲಕ್ಷ ರೂ. ಸಮರ್ಪಿಸಿ, ಹೃದಯವಂತಿಕೆ ಮೆರೆದಿದ್ದಾರೆ.

ಅಂದಹಾಗೆ, ಅಮಿತಾಭ್ ಅವರ ಅನುಮಪ ಸೇವೆಯನ್ನು ಪರಿಗಣಿಸಿ, ಸಂಸ್ಥೆಯೊಂದು ಮುಂಬೈನಲ್ಲಿ ನಿನ್ನೆ 2.5 ಲಕ್ಷ ರೂ. ಬಹುಮತಿಯನ್ನು ನೀಡಿತ್ತು. ಅದನ್ನು ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಈ ಬಹುಮಾನದ ಮೊತ್ತ ಮೃತಪಟ್ಟ ಪೇದೆ ಸಂತೋಷ್ ಅವರ ಮನೆಯವರಿಗೆ ಸಲ್ಲಲಿ ಎಂದು ಅಮಿತಾಭ್ ಪ್ರಕಟಿಸಿದರು.
ಇನ್ನು, ಆಸಿಡ್ ದಾಳಿ ಸಂತ್ರಸ್ತೆ ಸೋನಾಲಿ ಮುಖರ್ಜಿ ಬಗ್ಗೆ ಹೇಳುವುದಾದರೆ... ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+