ಬೆಂಗಳೂರಲ್ಲಿ ವಿಶ್ವ ಹಿಂದೂ ಮಹಿಳಾ ಸಮ್ಮೇಳನ
ಬೆಂಗಳೂರು, ಡಿ.24: ನಗರದ ಎನ್ ಎಂಕೆ ಆರ್ ವಿ ಕಾಲೇಜಿನಲ್ಲಿ ವಿಶ್ವ ಹಿಂದೂ ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ.
ಹಿಂದೂ ಮಹಿಳಾ ವೇದಿಕೆ ವತಿಯಿಂದ ಡಿ.29,30 ರಂದು ಹಿಂದೂ ಮಹಿಳಾ ಸಮ್ಮೇಳನ ಹಾಗೂ ವಿಶ್ವ ಸೌಹಾರ್ದ ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಕಾರ್ಯಕಾರಿಣಿ ಸದಸ್ಯೆ ಮೀರಾ ಫಡ್ಕೆ ಅವರು ಹೇಳಿದ್ದಾರೆ.

ಮಹಿಳೆಯರ ಸಮಗ್ರ ವಿಕಾಸ, ಸಬಲೀಕರಣ, ಸಮಾಜದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮತ್ತು ಹಿಂದುತ್ವದ ಪುನರುಜ್ಜೀವನದಲ್ಲಿ ಮಹಿಳೆಯರ ಪಾತ್ರ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚೆ, ಸಂವಾದ ನಡೆಯಲಿದೆ.
ಸುಮಾರು ಒಂದು ಸಾವಿರಕ್ಕೂ ಅಧಿಕ ಮಹಿಳಾ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಥಮ ಮಹಿಳಾ ಪುರೋಹಿತರಾದ ಭ್ರಮರಾಂಭ ಮಹೇಶ್ವರಿ ಅವರ ನೇತೃತ್ವದಲ್ಲಿ 500 ಮಹಿಳೆಯರು ವಿಶ್ವ ಸೌಹಾರ್ದತೆಗಾಗಿ ಹವನ ನಡೆಸಲಿದ್ದಾರೆ ಎಂದು ಮೀರಾ ಅವರು ಹೇಳಿದ್ದಾರೆ.
ಈ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು
ಸಂಪರ್ಕಿಸಿ: 09900 165456/ 98456 06654/ 99860 25675
ಪತ್ರಿಕಾಗೋಷ್ಠಿಯಲ್ಲಿ ಶಾಲಿನಿ ಕೃಷ್ಣಭಟ್, ಮೀರಾ ಫಡಕಿ ಅವರು ಭಾಗವಹಿಸಿದ್ದರು. ಡಿ.25ರಂದು ಬೆಳಗ್ಗೆ 10 ಗಂಟೆಗೆ ಜಾಗೃತಾ ಮಹಿಳೆಯರ ನಡಿಗೆ ಆಯೋಜನೆಗೊಂಡಿದೆ. ಡಿ.29ರಂದು ಬೆಳಗ್ಗೆ ಡಿ.29ರಂದು ಬೆಳಗ್ಗೆ 'ವಿಶ್ವ ಸೌಹಾರ್ದ ಹವನ' ಕೂಡಾ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಯಂತಿ ಮನೋಹರ್, ವಿಜಯಾ ವಿಷ್ಣುಭಟ್, ತೇಜಸ್ವಿನಿ ಅನಂತಕುಮಾರ್, ಮಾನನಿಯ ಶಾಂತಕ್ಕ, ಕೃಷ್ಣಾಂಮೃತ ಪ್ರಾಣ ಸೇರಿದಂತೆ ಹಲವರು ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಹಿಂದೂ ಮಹಿಳಾ ಪರಂಪರೆ: ಹಿಂದೂ ಧರ್ಮ ಬೆಳವಣಿಗೆಗೆ ಹಲವಾರು ಮಹಿಳೆಯ ಕೊಡುಗೆ ಇದೆ. ರಾಣಿ ದುರ್ಗಾವತಿ, ರಾಣಿ ಅಹಿಲ್ಯಾ ಬಾಯಿ ಹೋಳ್ಕರ್, ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮಿಬಾಯಿ, ರಾಣಿ ಅವಂತಿ ಬಾಯಿ.. ಇತ್ಯಾದಿ.
ಮತಾ ಜೀಜಾಬಾಯಿ ರಂಥ ಗುರುಗಳು, ಮೀರಾ ಬಾಯಿ, ಆಂಡಾಳ್ ದೇವಿ, ಲಾಲೇಶ್ವರಿ, ಕನ್ನಾಗಿ ಮುಂತಾದ ಭಕ್ತೆಯರು, ಸಿಸ್ಟರ್ ನಿವೇದಿತಾ, ಪ್ರೀತಿಲತಾ ರಂಥಾ ಕ್ರಾಂತಿಕಾರ ಮಹಿಳೆಯರನ್ನು ನಮ್ಮ ನಾಡು ಕಂಡಿದೆ.
ಆದರೆ, ಮಹಿಳೆಯರಿಗೆ ಸೂಕ್ತ ಮನ್ನಣೆ ಸಮಾಜದಲ್ಲಿ ದೊರೆಕಿಲ್ಲ. ಹೀಗಾಗಿ ಈ ರೀತಿ ಸಮಾವೇಶಗಳ ಮೂಲಕ ಮಹಿಳೆಯರ ಸಂಘಟನೆ ಹಾಗೂ ಜಾಗೃತಿ ಕಾರ್ಯಕ್ರಮ ಅನಿವಾರ್ಯವಾಗಿದೆ ಎಂದು ಮೀರಾ ಅವರು ಹೇಳಿದ್ದಾರೆ.












Click it and Unblock the Notifications