ಉಪಮುಖ್ಯಮಂತ್ರಿ ಮನೆ ಬೀಗ ಒಡೆದು ಲೋಕಾ ದಾಳಿ

bng-loka-police-break-open-dcm-eshwarappa-house-raid
ಬೆಂಗಳೂರು, ಡಿ.24: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರ ಮನೆ, ಕಚೇರಿಗಳು, ಪುತ್ರನ ಮನೆ ಮತ್ತು ಸ್ಟ್ಯಾಂಪ್ ವೆಂಡರ್ ಸೋಮಶೇಖರ್ ಮನೆಯ ಮೇಲೂ ಶಿವಮೊಗ್ಗದ ಲೋಕಾಯುಕ್ತ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ.

ಆದರೆ ಲೋಕಾಯುಕ್ತ ಪೊಲೀಸರು ಪೂರ್ವನಿರ್ಧಾರದಂತೆ ಬೆಂಗಳೂರಿನಲ್ಲೂ ಈಶ್ವರಪ್ಪ ಮನೆಗೆ ದಾಳಿ ನಡೆಸಲು ಮುಂದಾದರು. ಆದರೆ ಬೆಂಗಳೂರಿನ ವಸಂತನಗರದ ಚಕ್ರವರ್ತಿ ಲೇಔಟಿನಲ್ಲಿರುವ ಉಪಮುಖ್ಯಮಂತ್ರಿ ಈಶ್ವರಪ್ಪ ಮನೆಗೆ ಬೀಗ ಹಾಕಲಾಗಿತ್ತು. ಅತ್ತ ಈಶ್ವರಪ್ಪ ಅವರು ಕೊಪ್ಪಳದತ್ತ ಹೊರಟಿರುವುದರಿಂದ ಮನೆಯಲ್ಲಿ ಯಾರೂ ಇಲ್ಲವೆಂದು ಪೊಲೀಸರು ಮನೆ ಕಾಯತೊಡಗಿದರು.

ಈ ಮಧ್ಯೆ ಈಶ್ವರಪ್ಪ ಸದ್ಯಕ್ಕೆ ಆಗಮಿಸುವುದಿಲ್ಲವೆಂದು ಖಾತರಿಪಡಿಸಿಕೊಂಡ ಲೋಕಾ ಪೊಲೀಸರು ಮನೆಗೆ ಸರಕಾರಿ ಬೀಗ ಹಾಕುವ ಶಾಸ್ತ್ರವನ್ನೂ ಪೂರೈಸಿದರು. ಉಪ ಮುಖ್ಯಮಂತ್ರಿಯೊಬ್ಬರ ಮನೆಗೆ ಸರಕಾರಿ ಬೀಗ ಬಿದ್ದಿರುವುದು ಬಹುಶಃ ಇದೇ ಮೊದಲಾಗಿತ್ತು.

ಆದರೆ ಹೆಚ್ಚು ಹೊತ್ತು ಕಾಯದ ಲೋಕಾ ಪೊಲೀಸರು ಈಶ್ವರಪ್ಪಗೆ ದೂರವಾಣಿ ಕರೆ ಮಾಡಿ, ವಿಷಯ ಹೀಗೀಗಿದೆ. ನಾವು ನಿಮ್ಮ ಮನೆ ಬಳಿ ಕಾಯುತ್ತಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ. ಅದಾಗುತ್ತಿದ್ದಂತೆ ತಮ್ಮ ನಿಜವಾದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಎಸ್ಪಿ ಸ್ವಾಮಿ ನೇತೃತ್ವದಲ್ಲಿ 17 ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಇದೀಗತಾನೆ ಈಶ್ವರಪ್ಪ ಮನೆಯ ಬೀಗ ಒಡೆದು ದಾಳಿ ಆರಂಭಿಸಿದ್ದಾರೆ. ಆಸ್ತಿ ಸಂಬಂಧಿತ ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಆದರೆ ದಾಳಿ ಇಷ್ಟೊಂದು ತಡವಾಗಿ ನಡೆಸುತ್ತಿರುವುದೇಕೆ? ಅವರೊಬ್ಬ ಪ್ರಭಾವಿ ವ್ಯಕ್ತಿ. ಉಪ ಮುಖ್ಯಮಂತ್ರಿಯೂ ಹೌದು. ಪಕ್ಷದಲ್ಲೂ ಪ್ರಭಾವಿ. ಅವರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಅವರನ್ನು ಬಂಧಿಸುವುದು ಸೂಕ್ತ ಎಂದು ದೂರುದಾರ ವಿನೋದ್ ಅಭಿಪ್ರಾಯಪಟ್ಟಿದ್ದಾರೆ

ಈ ಮಧ್ಯೆ, ಈಶ್ವರಪ್ಪ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯು ಇಂದು ಶಿವಮೊಗ್ಗ ವಿಶೇಷ ಲೋಕಾಯುಕ್ತ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+