ಅಂದು ಕೋಲಾರದಲ್ಲಿ ಎಸ್ ಎಂ ಕೃಷ್ಣ 'ಪಾಂಚಜನ್ಯ', ಇಂದು?

Kolar district party workers convention today
ಬೆಂಗಳೂರು, ಡಿ 23: 1999ರ ವಿಧಾನಸಭಾ ಚುನಾವಣೆಯ ವೇಳೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ 'ಪಾಂಚಜನ್ಯ' ಯಾತ್ರೆ ಆರಂಭಿಸಿದ್ದರು.

ಇಂದು ಭಾನುವಾರ (ಡಿ 23) ಕೋಲಾರದಲ್ಲಿ ಜಿಲ್ಲಾ ಕಾರ್ಯಕರ್ತರ ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್ ತನ್ನ ಚುನಾವಣಾ ಯಾತ್ರೆ ಆರಂಭಿಸಲಿದೆ.

ಅಂದು ಕೃಷ್ಣಾರ ಪಾಂಚಜನ್ಯ ಯಾತ್ರೆಯ ಮೂಲಕ ಕಾಂಗ್ರೆಸ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿತ್ತು. ಇಂದು ಅದೇ ಮಾದರಿಯಲ್ಲಿ ಮತ್ತೆ ಕೋಲಾರ ಜಿಲ್ಲೆಯಿಂದ ಕಾಂಗ್ರೆಸ್ ಚುನಾವಣಾ ಪೂರ್ವ ಪ್ರಚಾರ ಯಾತ್ರೆ ಆರಂಭಿಸುತ್ತಿದೆ.

ಈ ಯಾತ್ರೆ 'ಕಾಂಗ್ರೆಸಿನೊಂದಿಗೆ ಬನ್ನಿ - ಬದಲಾವಣೆ ತನ್ನಿ' ಎನ್ನುವ ಘೋಷ ವ್ಯಾಕ್ಯದೊಂದಿಗೆ ಸಾಗಲಿದೆ. 1999ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾದ ಎಸ್ ಎಂ ಕೃಷ್ಣ ಇಂದು ನಡೆಯುವ ಸಮಾವೇಶದಲ್ಲಿ ಭಾಗವಹಿಸುವುದು ಅನುಮಾನ.

ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಲು ಒಂದೇ ಬಸ್ಸಿನಲ್ಲಿ ಕೋಲಾರಕ್ಕೆ ತೆರಳಲಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಿಂದ ವೋಲ್ವೋ ಬಸ್ಸಿನಲ್ಲಿ ಅವರ ಪಯಣ ಒಂದು ಕಾಲದ ಕಾಂಗ್ರೆಸ್ ಭದ್ರ ಕೋಟೆ ಕೋಲಾರದತ್ತ ಸಾಗಲಿದೆ.

ಇಂದು ಬೆಳಗ್ಗೆ 11 ಗಂಟೆಗೆ ಕೋಲಾರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶ ಆರಂಭವಾಗಲಿದೆ.

ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ವಿಶೇಷ ಐಷಾರಾಮಿ ಬಸ್ ಸಿದ್ದಪಡಿಸಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಯುವರಾಜ ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರ ಭಾವಚಿತ್ರ ಬಸ್ಸಿನಲ್ಲಿ ಅಲಂಕೃತಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+