FIR ಎಫೆಕ್ಟ್: ಈಶ್ವರಪ್ಪಗೆ ಇಂದು/ನಾಳೆ ಏನಾಗುವುದೋ?

ಈ ಮಧ್ಯೆ, ಇಂದು ಗುಜರಾತ್ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಬಿಜೆಪಿ ವರಿಷ್ಠರು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಈಶ್ವರಪ್ಪಗೆ ಇಂದು ಮತ್ತು ನಾಳೆ ಮಹತ್ವದ ದಿನಗಳು ಎಂದೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ... ಈ ಹಿಂದೆ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈಗ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ಆರೋಪ ಕೇಳಿಬಂದಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವಾ? ಎಂದು ಸಾರ್ವಜನಿಕ ವಲಯದಲ್ಲಿ ಆಗಲೇ ಆಕ್ರೋಶ ಕೇಳಿಬಂದಿದೆ.
ಅಸಮಾಧಾನದ ಗೂಡಾದ RSS :
ಈ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಈಶ್ವರಪ್ಪ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸೂಕ್ತ ಎಂಬ ಸಂದೇಶ ಸಂಘದ ಒಳಮನೆಯಿಂದಲೇ ಕೇಳಿಬರುತ್ತಿದೆ. ಇಷ್ಟಾಗಿಯೂ ಇಂದು ಜಾಮೀನು ಸಿಕ್ಕಿತು ಎಂದು ಅಧಿಕಾರದಲ್ಲಿ ಮುಂದುವರಿದರೆ ಸಂಘವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಹಾಗೆ ನೋಡಿದರೆ ಮತ್ತೊಬ್ಬ ಉಪಮುಖ್ಯಮಂತ್ರಿ ಅಶೋಕ್ ಸೇರಿದಂತೆ ಇನ್ನೂ ಹತ್ತಾರು ಸಚಿವರು/ಶಾಸಕರು ಕೋರ್ಟ್ ಕಟೆಕಟೆ ಏರಿದ್ದಾರೆ. ಆದರೆ ಪಕ್ಷದಲ್ಲಿ ಅವರ ಸ್ಥಾನವೇ ಬೇರೆ. ಯಡಿಯೂರಪ್ಪ/ಈಶ್ವರಪ್ಪ ಸ್ಥಾನವೇ ಬೇರೆ. ಹಾಗಾಗಿ ಈಶ್ವರಪ್ಪ ರಾಜೀನಾಮೆ ನೀಡಲಿ ಎಂಬ ಮಾತುಗಳು ಕೇಳಿಬರುತ್ತಿವೆ.
ಒಂದು ಗುಂಪು ತಕ್ಷಣಕ್ಕೆ ಈಶ್ವರಪ್ಪ ಉಪ ಮುಖ್ಯಮಂತ್ರಿ ಸ್ಥಾನ ತೊರೆಯಲಿ ಎಂದು ಆಗ್ರಹಿಸುತ್ತಿದ್ದರೆ ಮತ್ತೊಂದು ಗುಂಪು ಪಕ್ಷ ಮತ್ತು ಸಂಘಟನೆಯ ಪ್ರತಿಷ್ಠೆ/ವರ್ಚಸ್ಸು ಮಣ್ಣುಪಾಲಾಗುತ್ತಿದೆ. ಅತ್ಲಾಗೆ ಈಶ್ವರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲಿ ಎಂಬ ಬೇಡಿಕೆಯೂ ಕೇಳಿಬಂದಿದೆ.
ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಮುಂದಿನ ಸಾಧಕ-ಬಾಧಕಗಳನ್ನು ವಿಚಾರ ಮಾಡಿ, ಪಕ್ಷದ ವರಿಷ್ಠರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಖಚಿತ. ಅಲ್ಲಿಯವರೆಗೂ ಈಶ್ವರಪ್ಪನೇ ಮುಂದುವರಿಯಲಿ ಎಂಬ ಮಾತುಗಳೂ ಕೇಳಿಬರುತ್ತಿವೆ.











Click it and Unblock the Notifications