ವಿಫಲ ಪ್ರೇಮ:ಡಾ ಮಧು ಹೊನ್ನಯ್ಯ ಲಂಡನ್ನಿನಲ್ಲಿ ಆತ್ಮಹತ್ಯೆ

Bangalore Doctor Madhu Honnaiah suicide London fiancee rejected
ಲಂಡನ್, ಡಿ.18‌: ಅಂತರ್ಜಾತೀಯ, ದೇಶಾಂತರದ ತಮ್ಮ ನಾಲ್ಕು ವರ್ಷಗಳ ಪ್ರೀತಿ ಇನ್ನು ಬರಕತ್ತಾಗುವುದಿಲ್ಲ ಎಂದು ಮನಗಂಡ ಬೆಂಗಳೂರು ಮೂಲದ ಅರವಳಿಕೆ ತಜ್ಞ ಡಾ. ಮಧು ಹೊನ್ನಯ್ಯ (33) ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ವೇಲ್ಸ್ ನಲ್ಲಿರುವ ಕರಾವಳಿ ನಗರ ಸ್ವಾನ್ ಸೀ ನಲ್ಲಿ ವೈದ್ಯರಾಗಿ ಸೇವೆಯಲ್ಲಿದ್ದರು.

ಇತ್ತೀಚೆಗೆ ಒಂದರ ಮೇಲೊಂದರಂತೆ ಬೆಳಗಾವಿಯ ಸವಿತಾ ಹಾಲಪ್ಪನವರ್, ಮಂಗಳೂರಿನ ಜೆಸಿಂತಾ ಸಲ್ಡಾನಾ ನಂತರ ಕರ್ನಾಟಕದವರು ವಿದೇಶಿ ನೆಲದಲ್ಲಿ ದಾರುಣ ಸಾವು ಕಂಡ ಮೂರನೆಯ ಪ್ರಕರಣ ಇದಾಗಿದೆ.

ಡಾ. ಮಧು ಹೊನ್ನಯ್ಯ 2008ರಲ್ಲಿ ಲಿವರ್‌ಪೂಲ್‌ ನಲ್ಲಿ ಕಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟನ್‌ ಮೂಲದ ವೈದ್ಯೆ ಡಾ. ವ್ರಿಂಗ್‌ಟನ್‌ (32) ಅವರನ್ನು ಪ್ರೀತಿಸಲಾರಂಭಿಸಿದ್ದರು. ಆಕೆಗೂ ಮಧುವಿನಲ್ಲಿ ಪ್ರೇಮಾಂಕುರವಾಗಿತ್ತು. ಆದರೆ ಮದುವೆಗೆ ಡಾ. ಮಧು ಪೋಷಕರು ಅಡ್ಡಿಪಡಿಸಿದ್ದರು. ಇದರಿಂದ ಬೇಸತ್ತ ಮಧು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡಾ. ಮಧು ತಾನು ಕೆಲಸ ಮಾಡುವ ಸಿಂಗ್ಲೆಟನ್‌ ಆಸ್ಪತ್ರೆಯಲ್ಲಿ ಭಾರಿ ಪ್ರಮಾಣದಲ್ಲಿದ್ದ ಅರಿವಳಿಕೆ ಇಂಜಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2010ರಲ್ಲಿ ಇವರಿಬ್ಬರೂ ಮನೆಯವರಿಗೆ ತಿಳಿಸದೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. 8 ಪುಟಗಳ ಮರಣ ಪತ್ರ ಬರೆದಿಟ್ಟ ಡಾ. ಮಧು ತಮ್ಮ ಪ್ರೇಮ ವೃತ್ತಾಂತವನ್ನು ಸಾದ್ಯಂತವಾಗಿ ಬರೆದಿಟ್ಟು ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+