ದತ್ತ ಮಾಲೆ ಧರಿಸಿದ ಶಿಕ್ಷಣ ಸಚಿವ ಸಿಟಿ ರವಿ

ಸಂಘ ಪರಿವಾರದ ನೇತೃತ್ವದಲ್ಲಿ ನಡೆಯಲಿರುವ ದತ್ತ ಜಯಂತಿ ಅಂಗವಾಗಿ ಭಜರಂಗ ದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಸೇರಿದಂತೆ ಹಲವರು ಇದೇ ಸಂದರ್ಭದಲ್ಲಿ ದತ್ತ ಮಾಲೆ ಧರಿಸಿದರು.
ಇಲ್ಲಿನ ರತ್ನಗಿರಿ ರಸ್ತೆಯ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಎಂ ಎಸ್ ನಂಜುಂಡಸ್ವಾಮಿ ಹಾಗೂ ರಘುನಾಥ್ ಅವಧಾನಿ ಅವರು ಬೆಳಗ್ಗೆ ಹೋಮ ಮತ್ತು ಧಾರ್ಮಿಕ ಕಾರ್ಯವನ್ನು ಮುಗಿಸಿದ ಬಳಿಕ ದತ್ತ ಮಾಲೆ ಧಾರಣೆ ಮಾಡಿದರು. ಡಿ. 26ರಂದು ಶೋಭಾ ಯಾತ್ರೆ ಹಾಗೂ ಡಿ. 27ರಂದು ದತ್ತ ಪೀಠದಲ್ಲಿ ದತ್ತ ಜಯಂತಿ ಕಾರ್ಯಕ್ರಮ ಜರುಗಲಿದೆ.
'ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ವರ್ಷವೇ ದತ್ತ ಮಾಲೆ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಯಾಕೋ ಅವರು ಬಂದಿರಲಿಲ್ಲ. ಈ ವರ್ಷ ಬಂದರೂ ಬರಬಹುದು' ಎಂದು ರವಿ ಇದೇ ಸಂದರ್ಭದಲ್ಲಿ ಹೇಳಿದರು.
ಆರೋಪದಲ್ಲಿ ಹುರುಳಿಲ್ಲ: ದತ್ತ ಪೀಠ ವಿಚಾರವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ ಸಚಿವ ರವಿ, 14ನೇ ವರ್ಷದಿಂದ ದತ್ತ ಪೀಠ ಹೋರಾಟದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ರಾಜಕೀಯ ಜೀವನಕ್ಕೆ ಬರುವುದಕ್ಕೂ ಮೊದಲೇ ದತ್ತ ಪೀಠ ಹೋರಾಟದಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications