ಕೊಡಗಿನಲ್ಲಿ ಮೇಲೆದ್ದ ತಾಜ್ ವಿವಂತ ಹೋಟೆಲ್

ಬೆಂಗಳೂರು, ಡಿ.17: ತಾಜ್ ಸಮೂಹ, ತನ್ನ ವಿವಂತ ಬ್ರ್ಯಾಂಡ್‌ನ ಮುಂದಿನ ಐಷಾರಾಮಿ ಹೊಟೆಲ್ ಸ್ಥಾಪನೆ ಮೂಲಕ ಕೊಡಗಿನ ಬೆಟ್ಟದ ತಪ್ಪಲಿಗೆ ಕಾಲಿರಿಸಿದೆ. ಮೊಟ್ಟ ಮೊದಲ ಗಿರಿಧಾಮ ಹೋಟೆಲ್ ಆರಂಭಗೊಂಡಿದೆ.

ಇತ್ತೀಚೆಗೆ ಎರಡನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡ ತಾಜ್ ಹೋಟೆಲ್ ಸಮೂಹ, ಗಿರಿಧಾಮದಲ್ಲಿ ಹೋಟೆಲ್ ಸ್ಥಾಪಿಸುವ ಉದ್ದೇಶದಿಂದ ಕೂರ್ಗ್ ನಲ್ಲಿ ಮುಂದಿನ ಹೋಟೆಲ್ ಆರಂಭಿಸಲು ಯೋಜನೆ ಹಾಕಿಕೊಂಡಿತ್ತು ಎಂದು ತಾಜ್ ಹೋಟೆಲ್ಸ್ ರೆಸಾರ್ಟ್ಸ್ ಆಂಡ್ ಪ್ಯಾಲೇಸಸ್ ವ್ಯವಸ್ಥಾಪಕ ಸಿರ್ದೇಶಕ ಹಾಗೂ ಸಿಇಒ ರೇಮಂಡ್ ಎನ್ ಬಿಕ್ಸನ್ ಹೇಳಿದ್ದಾರೆ.

Taj Group opens first hill station hotel in Coorg

ಬೆಂಗಳೂರಿನ ಯಶವಂತಪುರದಲ್ಲಿ ಬೃಹತ್ ಹೋಟೆಲ್ ಕಳೆದ ವರ್ಷ ಆರಂಭಗೊಂಡಿತ್ತು. ನಗರದಲ್ಲಿ ತಾಜ್ ವಿವಂತ ಸಂಖ್ಯೆ 3ಕ್ಕೇರಿತ್ತು. ವೈಟ್‌ಫೀಲ್ಡ್ ಹಾಗೂ ಎಂಜಿ ರಸ್ತೆಯಲ್ಲಿ ವಿವಂತ ಹೋಟೆಲ್‌ಗಳಿವೆ. ಕೊಡಗಿನ ತಾಜ್ ವಿವಂತ ತಾಜ್ ಸಮೂಹದ 25ನೇ ಹೋಟೆಲ್ ಆಗಿರುವುದು ವಿಶೇಷ.

2010ರಿಂದ 'ತಾಜ್ ವಿವಂತ' ಬ್ರ್ಯಾಂಡ್ ನೇಮ್ ಅಡಿಯಲ್ಲಿ ಐಷಾರಾಮಿ ಹೋಟೆಲ್ ಗಳನ್ನು ತಾಜ್ ಹೋಟೆಲ್ಸ್ ಸಮೂಹ ವಿಸ್ತರಿಸುತ್ತಿದೆ. ಮಳೆಕಾಡಿನ ನಡುವೆ ಸುಮಾರು 180 ಎಕರೆ ಪ್ರದೇಶದಲ್ಲಿ ಸಮುದ್ರಮಟ್ಟದಿಂದ ಸುಮಾರು 4000 ಅಡಿ ಎತ್ತರ ಇರುವ ಭೂ ಪ್ರದೇಶದಲ್ಲಿ ಹೋಟೆಲ್ ಸ್ಥಾಪಿಸಿ ಪ್ರವಾಸೋದ್ಯಮಕ್ಕೆ ಹೊಸ ಹುರುಪು ತುಂಬಲು ತಾಜ್ ನಿರ್ಧರಿಸಿದೆ.

ಮಡಿಕೇರಿಯ ತಾಜ್ ವಿವಂತ ಮೊಟ್ಟ ಮೊದಲ ಗಿರಿಧಾಮ ಹೋಟೆಲ್ ಎನಿಸಲಿದೆ. ಎಂದಿನಂತೆ ರೆಸಾರ್ಟ್ ಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿದೆ. ಸಾಹಸ, ಕ್ರೀಡೆ ಹಾಗೂ ಸ್ಥಳೀಯ ಸಂಸ್ಕೃತಿಯ ಜೊತೆ ತಾಜ್ ಬೆರೆಯಲಿದೆ ಎಂದು ಬಿಕ್ಸನ್ ಹೇಳಿದರು.

108 ವರ್ಷಗಳ ತಾಜ್ ಇತಿಹಾಸದಲ್ಲಿ ವಿವಂತ ಒಂದು ಮಹತ್ತರ ಮೈಲುಗಲ್ಲು. ಇದು ತಾಜ್‌ನ ಸಂಶೋಧನಾತ್ಮಕ ಹೆಜ್ಜೆ. ಇದು ಕಂಪನಿಯ ಬೆಳವಣಿಗೆ ಗುರಿಗೆ ಸಹಕಾರಿ.

ವಸತಿಯೊಂದಿಗೆ ನಾನಾ ಪ್ರದೇಶಗಳ ಊಟ, ಯೋಗ ಮೊದಲಾದ ವ್ಯವಸ್ಥೆಗಳಿವೆ. ದೇಶದ ನಾನಾ ಭಾಗಗಳನ್ನು ಬಿಂಬಿಸುವ, ನದಿ ದಡವನ್ನು ನೆನಪಿಸುವ ಖಾದ್ಯಗಳು ಇಲ್ಲಿ ಲಭ್ಯ. ಇದರ ಹೊರತಾಗಿ ಈಜುಕೋಳ ಮೊದಲಾದ ಆಧುನಿಕ ವ್ಯವಸ್ಥೆಗಳನ್ನು ಹೊಂದಿರುತ್ತದೆ.

ತಾಜ್ ವಿವಂತ: ಪಂಚತಾರಾ ಹೋಟೆಲ್ ಇದಾಗಿದ್ದು, ತಾಜ್ ಹೋಟೆಲ್ಸ್ ಸಮೂಹದ ಭಾಗವಾಗಿದೆ. ಪ್ರಪಂಚದಾದ್ಯಂತ 25 ವಿವಂತ ಹೋಟೆಲ್‌ಗಳಿವೆ. ಗೋವಾ,ಕೇರಳ, ರಾಜಾಸ್ತಾನ, ಶ್ರೀಲಂಕಾ ಮತ್ತು ಮ್ಯಾಲ್ಡೀವ್ಸ್‌ಗಳಲ್ಲಿ ಅಸ್ತಿತ್ವ ಹೊಂದಿದೆ.

ತಾಜ್ ಹೋಟೆಲ್ಸ್ ರೆಸಾರ್ಟ್ಸ್ : 1903ರಲ್ಲಿ ಮುಂಬೈ ನಲ್ಲಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಆರಂಭದ ಜೊತೆಗೆ ನಂತರ ಅಭಿವೃದ್ಧಿಗೊಂಡು ರೂಪಗೊಂಡಿರುವ ತಾಜ್ ಹೋಟೆಲ್ಸ್ ರೆಸಾರ್ಟ್ಸ್, ಏಷಿಯಾದ ಬೃಹತ್ ಆತಿಥ್ಯೋದ್ಯಮ ಸಂಸ್ಥೆಯಾಗಿದೆ. 55 ಪ್ರದೇಶಗಳಲ್ಲಿ 93 ಹೋಟೆಲ್ ಹೊಂದಿದೆ. 16 ಅಂತಾರಾಷ್ಟ್ರೀಯ ಹೋಟೆಲ್‌ಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+