ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ನಿಧನ

92 ವರ್ಷ ವಯಸ್ಸಿನ ರವಿಶಂಕರ್ ಉತ್ತರಪ್ರದೇಶದ ವಾರಾಣಸಿಯಲ್ಲಿ ಎಪ್ರಿಲ್ 7, 1920ರಲ್ಲಿ ಜನಿಸಿದ್ದರು. ಬೆಂಗಾಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ರವಿಶಂಕರ್ ಭಾರತೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ.
ಇವರ ಮೂಲ ಹೆಸರು ರವೀಂದ್ರ ಶಂಕರ್ ಚೌಧುರಿ. ಕಳೆದ ಒಂದು ವಾರದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ನಗರದ ಸ್ಕ್ರಿಪ್ಸ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1999 ರಲ್ಲಿ ರವಿಶಂಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿತ್ತು.
1986ರಿಂದ 1992ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ರವಿಶಂಕರ್ ಅವರಿಗೆ ಮೂರು ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದಿತ್ತು.
ಪಂಡಿತ್ ರವಿಶಂಕರ್ ಅವರು ಪತ್ನಿ ಸುಕನ್ಯಾ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಸಿತಾರ್ ವಾದಕಿ ಅನುಷ್ಕಾ ಹಾಗೂ ನೋರಾ ಜೋನ್ಸ್ ಅವರನ್ನು ಅಗಲಿದ್ದಾರೆ.












Click it and Unblock the Notifications