ಈ ಬಾರಿ ಸೋತರೆ ಜೆಡಿಎಸ್ ನಿರ್ನಾಮ: ಯತ್ನಾಳ್

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮೇವಾಶದಲ್ಲಿ ಮಾತನಾಡುತ್ತಾ ಅವರು ಎಚ್ಚರಿಕೆ-ಮಿಶ್ರಿತ ಈ ಮಾತುಗಳನ್ನಾಡಿದ್ದಾರೆ.
ನಮ್ಮ ಪಕ್ಷದವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಸ್ವಂತ ಬಲದ ಮೇಲೆ ನಮ್ಮದೇ ಪಕ್ಷದ ಸರಕಾರ ರಚನೆಯಾಗಲು ಪಣ ತೊಡಬೇಕು ಎಂದು ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದರು.
'ನಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಎಂದು ಪುನರುಚ್ಚರಿಸಿದ ಯತ್ನಾಳ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ತಮ್ಮ ತಮ್ಮ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಧೈರ್ಯ ಇಲ್ಲವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಕಟಕಿಯಾಡಿದರು.












Click it and Unblock the Notifications