ಪೂಜಾ ಬಿಎಸ್‌ವೈ ಪೂಜೆಗೆ ಹೋಗಿರಬೇಕು: ರೇವಣ್ಣ

ನಟಿ ಪೂಜಾ ಗಾಂಧಿ ಜೆಡಿಎಸ್ ತೆರೆದಿರತುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಚಿಕ್ಕಮಗಳೂರು ಸುದ್ದಿಗಾರರು ಶನಿವಾರ ಕೇಳಿದ್ದೇ ತಡ ಸನ್ಮಾನ್ಯ ರೇವಣ್ಣ ಅವರು 'ನನಗೆ ಗೊತ್ತಿರುವುದೆಲ್ಲ ಒಬ್ಬೇ ಒಬ್ಬ ಗಾಂಧಿ. ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ. ಅದ್ಯಾರೋ ನೀವು ಹೇಳುತ್ತಿರುವ ಪೂಜಾ ಗಾಂಧಿ ನನಗೆ ಗೊತ್ತಿಲ್ಲ' ಎಂದು ನಗೆಯಾಡಿದ್ದಾರೆ.
ಪೂಜಾ ಗಾಂಧಿ ಯಡಿಯೂರಪ್ಪಗೆ ಪೂಜೆ ಮಾಡಲು ಹೋಗಿರಬಹುದು: ಇಷ್ಟಕ್ಕೇ ಸುಮ್ಮನಾಗದ ಪತ್ರಕರ್ತರು ರೇವಣ್ಣ ಅವರನ್ನು ಇನ್ನಷ್ಟು ಕೆದ(ಣ)ಕಿದಾಗ 'ಯಡಿಯೂರಪ್ಪಗೆ ಪೂಜೆ ಮಾಡಲು ಪೂಜಾ ಗಾಂಧಿ ಕೆಜೆಪಿಗೆ ಹೋಗಿರಬಹುದು, ಗುರುಗಳೇ' ಎಂದು ಮತ್ತೊಮ್ಮೆ ನಗೆಚೆಲ್ಲಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಸಕಾಲದಲ್ಲಿ ತಮ್ಮ ಕೈಹಿಡಿಯಲಿಲ್ಲ. ಇದರಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಬಂದಿತು. ಕೆಜೆಪಿ ನಾಯಕ ಯಡಿಯೂರಪ್ಪ ಅವರು ಹೆಚ್ಚು ಸ್ವಾಭಿಮಾನಿ. ಹಾಗಾಗಿ ಕೆಜೆಪಿ ಸೇರಿದ್ದೇನೆ ಎಂದು ನಿನ್ನೆ ಪಕ್ಷ ಬಿಟ್ಟು ಪಕ್ಷ ಸೇರಿದ ಪೂಜಾ ಪ್ರತಿಕ್ರಿಯೆ ನೀಡಿದ್ದರು.
ಕೆಜೆಪಿ ಬಗ್ಗೆ ರೇವಣ್ಣ ವ್ಯಾಖ್ಯಾನ: ತಮ್ಮ ಮೇಲಿನ ಕೇಸುಗಳನ್ನು clear ಮಾಡಿಸಿಕೊಳ್ಳಲು ಕಾಂಗ್ರೆಸ್ ಜತೆಗೆ ಯಡಿಯೂರಪ್ಪ ಒಳ ಒಪ್ಪಂದವಾಗಿದೆ. ಕೆಜೆಪಿ ಅಂದರೆ ಕಾಂಗ್ರೆಸ್ಸಿನ ಜಾಯಿಂಟ್ ಪಾರ್ಟಿ.












Click it and Unblock the Notifications