ನಾನು ಕರ್ನಾಟಕದ ಕರುಣಾನಿಧಿ : ಯಡಿಯೂರಪ್ಪ

ಡೆಕ್ಕನ್ ಕ್ರೋನಿಕಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ನಮ್ಮ ರಾಜ್ಯದಲ್ಲಿ ಹಲವು ನಾಯಕರು ಪ್ರಾದೇಶಿಕ ಪಕ್ಷ ಕಟ್ಟಿದರು. ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಅರಸು ಪ್ರಾದೇಶಿಕ ಕಟ್ಟಿ ವಿಫಲರಾಗಿರಬಹುದು. ಆಗಿನ ಪರಿಸ್ಥಿತಿಯೇ ಬೇರೆ ಈಗಿನ ಪರಿಸ್ಥಿತಿಯೇ ಬೇರೆ ಎಂದು ಯಡಿಯೂರಪ್ಪ ಭರವಸೆ ಮಾತನ್ನು ಆಡಿದ್ದಾರೆ
ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಾರದೆಂದು ರಾಜ್ಯಾಧ್ಯಕ್ಷ ಸ್ಥಾನ ಕೇಳಿದೆ. ನನಗೆ ಮುಖ್ಯಮಂತ್ರಿ ಪದವಿ ಬೇಡ, ಶಾಸಕ ಸ್ಥಾನಕ್ಕೂ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರದ ನಾಯಕರಲ್ಲಿ ಮನವಿ ಮಾಡಿದೆ. ಆದರೆ ನನ್ನ ಮಾತಿಗೆ ಅವರು ಬೆಲೆ ಕೊಡಲಿಲ್ಲ ಎಂದು ಬಿಎಸ್ವೈ ಬೇಸರ ವ್ಯಕ್ತ ಪಡಿಸಿದ್ದಾರೆ
ಕೇಂದ್ರದಲ್ಲಿ ಅರುಣ್ ಜೇಟ್ಲೆ ಒಬ್ಬರೇ ನನ್ನ ಮೇಲೆ ವಿಶ್ವಾಸವಿಟ್ಟಿದ್ದರು. ಪಕ್ಷ ಬಿಡದಂತೆ ನನ್ನಲ್ಲಿ ಕೇಳಿಕೊಂಡರು. ಆದರೆ ಪಕ್ಷದ ನಾಯಕರು ನೀಡಿದ ಪೊಳ್ಳು ಭರವಸೆಯಿಂದ ಬೇಸತ್ತು ಜೇಟ್ಲೆ ಮಾತಿಗೆ ಬೆಲೆ ಕೊಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ ಎಂದು ಯಡಿಯೂರಪ್ಪ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಂದು ವೇಳೆ ಈ ದೇಶದ ಪ್ರಧಾನಿಯಾದರೂ ನಾನು ಮತ್ತೆ ಬಿಜೆಪಿಗೆ ವಾಪಾಸಾಗುವುದಿಲ್ಲ. ನನ್ನ ನಿರ್ಧಾರ ಅಚಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಎಲ್ಲಾ 224 ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡುವ ಅವಶ್ಯಕತೆ ನನಗಿಲ್ಲ.
ದೇವರ ಇಚ್ಛೆ, ಮತದಾರರ ಆಶೀರ್ವಾದ ನನ್ನ ಮೇಲಿದ್ದರೆ ನಾನು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications