ಬಿಎಂಟಿಸಿಗೆ ತುಮಕೂರಿನ ನವವಿವಾಹಿತ ಟೆಕ್ಕಿ ಬಲಿ

ಹೌದು, ಆರ್ ಬಿ ಶಿವಪ್ರಸಾದ್ ಎಂಬ 29 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಶುಕ್ರವಾರ ಬೆಳಗ್ಗೆ 9 ಗಂಟೆಯಲ್ಲಿ ನಡೆದ ಅವಘಡದಲ್ಲಿ ಪ್ರಾಣತೆತ್ತಿದ್ದಾರೆ. ವಿಜಯನಗರದ ನಿವಾಸಿ ಶಿವಪ್ರಸಾದ್ ತಮ್ಮ ಬೈಕ್ ನಲ್ಲಿ ಮಾರತ್ ಹಳ್ಳಿ ಸಮೀಪವಿರುವ ಕಂಪನಿಗೆ ಎಂದಿನಂತೆ ಉದ್ಯೋಗಕ್ಕೆ ತೆರಳಿದ್ದರು.
ಆದರೆ ಎಚ್ಎಎಲ್ ಮುಖ್ಯರಸ್ತೆಯಲ್ಲಿ ಅಜಾಗರೂಕತೆಯಿಂದ ವೇಗವಾಗಿ ಬಂದ ಯಮರೂಪಿ ಬಿಎಂಟಿಸಿ ಶಿಪ್ರಸಾದರ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಶಿವಪ್ರಸಾದ್ ತಲೆಯ ಮೇಲೆ ಬಸ್ಸಿನ ಚಕ್ರ ಹರಿದಿದೆ. ಅಷ್ಟೇ, ಹೆಲ್ಮೆಟ್ ಸಮೇತ ಶಿವಪ್ರಸಾದ್ ತಲೆ ಜಜ್ಜಿಹೋಗಿ, ಆತನ ಪ್ರಾಣ ಪಕ್ಷಿ ಸ್ಥಳದಲ್ಲೇ ಹಾರಿಹೋಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತ ಟೆಕ್ಕಿ ಶಿವಪ್ರಸಾದ್ ತುಮಕೂರಿನವರು.












Click it and Unblock the Notifications