ಮೋದಿಗೆ ಹಿನ್ನಡೆ, ಭಟ್ ವಿರುದ್ಧ ತನಿಖೆಗೆ ತಡೆ

ಇಮೇಲ್ ಹ್ಯಾಕ್ ಮಾಡಿದ ಆರೋಪದಡಿಯಲ್ಲಿ ಗುಜರಾತಿನ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರ ಮೇಲೆ ಐಟಿ ಕಾಯ್ದೆ 66(ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ವಸ್ತ್ರಪುರ್ ಪೊಲೀಸ್ ಠಾಣಾಧಿಕಾರಿ ಎಕೆ ಶರ್ಮ ತನಿಖೆ ನಡೆಸುತ್ತಿದ್ದರು.
ಗುಜರಾತ್ ಎಜಿ ತುಷಾರ್ ಮೆಹ್ತಾ ಅವರು ಸಂಜೀವ್ ಮೇಲೆ ಇಮೇಲ್ ಹ್ಯಾಕ್ ಮಾಡಿದ ಆರೋಪ ಹೊರೆಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಸುಪ್ರೀಂಕೋರ್ಟಿನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ, ಜೈಲಿಗಟ್ಟಲಾಗಿತ್ತು.
ಗುಜರಾತ್ ಗಲಭೆ ಸಂದರ್ಭದಲ್ಲಿ ಅಲ್ಲಿನ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿತ್ತು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಮುಂದೆ ತಪ್ಪು ಹೇಳಿಕೆ ನೀಡುವಂತೆ ತಮ್ಮ ಚಾಲಕನ ಮೇಲೆ ಒತ್ತಡ ಹೇರಿದ ಆರೋಪ ಭಟ್ ಮೇಲಿದೆ.
ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಇದು ರಾಜಕೀಯ ಪ್ರೇರಿತ ಎಂದು ಭಟ್ ಅವರು ಕೋರ್ಟ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ರಂಜನಾ ದೇಸಾಯಿ ಅವರನ್ನು ಒಳಗೊಂಡ ನ್ಯಾಯ ಪೀಠವು ಈ ವಿಚಾರಣೆಗೆ ತಡೆ ನೀಡಿದ್ದರು.
ಗುಜರಾತ್ ಮುಖ್ಯಮಂತ್ರಿಗಾದಿಯಲ್ಲಿ ಒಂದು ದಶಕದಿಂದ ವಿರಾಜಮಾನರಾಗಿರುವ ನರೇಂದ್ರ ಮೋದಿ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜ್ಯದ ಐಪಿಎಸ್ ಒಕ್ಕೂಟ ಮೋದಿಯನ್ನು ಗುರಿಯಾಗಿಸಿಕೊಂಡು ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬಂಧನವನ್ನು ಪ್ರಶ್ನಿಸಿದ್ದರು.
ಸಂಜೀವ್ ಭಟ್, 2002 ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮುಖ್ಯಮಂತ್ರಿಯ ಪಾತ್ರವನ್ನು ಬಯಲಿಗೆಳೆದು ನರೇಂದ್ರ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
21 ವರ್ಷಗಳ ಹಿಂದೆ ಜಮ್ ಜೋಧ್ ಪುರ್ ನ ಠಾಣೆಯಲ್ಲಿ ಆರೋಪಿಯೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ್ ಭಟ್ ಆರೋಪ ಎದುರಿಸಿದ್ದರು.
ಪೋರಬಂದರ್ ನ ಕಮಲಬೌಗ್ ಪೊಲೀಸ್ ಠಾಣೆಯಲ್ಲಿದ್ದಾಗ ವ್ಯಕ್ತಿಯೊಬ್ಬನಿಗೆ ಅನಗತ್ಯವಾಗಿ ಚಿತ್ರಹಿಂಸೆ ನೀಡಿದ ಆರೋಪ ಹೊರೆಸಲಾಗಿತ್ತು. ಇದಲ್ಲದೆ ದಬ್ಬಾಳಿಕೆ ಮಾಡಿ ಮನೆ ಖಾಲಿ ಮಾಡಿಸಿದ ಆರೋಪ ಕೂಡಾ ಸಂಜೀವ್ ಭಟ್ ಮೇಲಿದೆ.












Click it and Unblock the Notifications