ಸ್ಟೂಡೆಂಟ್, ಟೀಚರ್, ಪ್ರಿನ್ಸಿ, ಮೇಲ್ವಿಚಾರಕಿ ಜತೆ ಮದುವೆ

ಸರಿ, ಸರಿ. ಒಂದೇ ಶಾಲೆಯಲ್ಲಿ ಸದರಿ ಸ್ಟೂಡೆಂಟ್, ಟೀಚರ್, ಪ್ರಿನ್ಸಿಪಾಲ್, ಮೇಲ್ವಿಚಾರಕಿ ಒಬ್ಬರಿಗೊಬ್ಬರು ಎದುರಾದರೆ... ಅವರ ಮಧ್ಯೆ ಈ ಪುರುಷಪುಂಗವ ನಿಂತರೆ!? ಯಾರಪ್ಪಾ ಆ ಪುಣ್ಯಾತ್ಮ ಎಂದು ಕೆಳೋಣವೆಂದರೆ ಸುದ್ದಿಯನ್ನು ಪ್ರಸರಿಸಿರುವ ಸೌದಿಯ Okaz newspaper ಆತನ ಹೆಸರು, ಕುಲಗೋತ್ರಗಳನ್ನು ತಿಳಿಸಿಲ್ಲ.
ಗಮನಾರ್ಹವೆಂದರೆ 'ನಮಗೇನೂ ಮುಜುಗುರ ಆಗುವುದಿಲ್ಲ. ಶಾಲೆಯಲ್ಲಿ ನಮ್ಮ ಪಾಡಿಗೆ ನಾವು ಕೆಲ್ಸ ಮಾಡಿಕೊಂಡು ಒಂದೇ ಮನೆಗೆ ಹೋಗುತ್ತೇವೆ ಅಷ್ಟೇ' ಎಂದು 'ಪ್ರಿನ್ಸಿಪಾಲ್' ಮಹಿಳೆ ಪತ್ರಿಕೆಗೆ ತಿಳಿಸಿದ್ದಾಳೆ. ಈ ಸುಖೀ ಕುಟುಂಬಕ್ಕೆ ಶುಭ ಹಾರೈಕಗಳು.
ಅದ್ಸರಿ ಹೀಗೆ ಸಾಲು ಸಾಲು ಮದ್ವೆ ಬಗ್ಗೆ ಸೌದಿ ನಿಯಮ ಏನು ಹೇಳುತ್ತದೆ?












Click it and Unblock the Notifications