ಬೆಂಗಳೂರು ಸ್ಫೋಟ: ಮದನಿ ಜಾಮೀನು ವಜಾ

Madani bail plea rejected
ಬೆಂಗಳೂರು, ನ.22: 2008ರ ಜುಲೈ 25ರಂದು ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಸ್ಫೋಟದ ರೂವಾರಿ ಅಬ್ದುಲ್ ನಾಸರ್ ಮದನಿಗೆ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ಗುರುವಾರ(ನ.22) ತಿರಸ್ಕರಿಸಿದೆ. ಮದನಿ ಮೇಲೆ ಉಗ್ರ ಚಟುವಟಿಕೆ, ಕೊಲೆ ಯತ್ನ ಮುಂತಾದ ಆರೋಪಗಳಿದೆ.

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಭಾಷಣ ಸಮಾರಂಭದಲ್ಲಿ ಸರಣಿ ಸ್ಫೋಟ ಸಂಭವಿಸಿದ ಪ್ರಕರಣದ ಹಿಂದೆ ಮದನಿ ಸಂಚು ಇದೆ ಎಂದು ಆರೋಪಿಸಲಾಗಿದೆ. ಈ ಸ್ಫೋಟದಲ್ಲಿ ಸುಮಾರು 58 ಜನ ಸಾವನ್ನಪ್ಪಿದ್ದು, 200 ಜನ ಗಾಯಗೊಂಡಿದ್ದರು.

1998ರ ಕೊಯಮತ್ತೂರು ಬಾಂಬ್ ಸ್ಫೋಟದ ಆರೋಪ ಹೊತ್ತು ಕೊಯಮತ್ತೂರು ಜೈಲಿನಲ್ಲಿದ್ದ ಮದನಿ 2007ರಲ್ಲಿ ಹೊರ ಬಂದಿದ್ದ.

ಮದನಿಗೆ ಸುಪ್ರೀಂಕೋರ್ಟ್ ನ್ಯಾಯಪೀಠ ಕೂಡಾ ಜಾಮೀನು ನಿರಾಕರಿಸಿದೆ. ಈ ಮುಂಚೆ ಜಾಮೀನು ನೀಡಿಕೆ ಬಗ್ಗೆ ನ್ಯಾಯಪೀಠದ ಇಬ್ಬರು ನ್ಯಾಯಮೂರ್ತಿಗಳ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು.

ನಂತರ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕ ಅಬ್ದುಲ್ ಮದನಿ ಅನಾರೋಗ್ಯಕ್ಕೆ ಬೆಂಗಳೂರಿನಲ್ಲಿರುವ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತ್ತು.

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ಅಬ್ದುಲ್ ನಾಸಿರ್ ಮದನಿ ಬಂಧನ ಅಥವಾ ಶರಣಾಗತಿ ಕುರಿತ ಅಶ್ಚಿತತೆ ಮುಂದುವರಿದಿತ್ತು. ಆತನ ಬಂಧನಕ್ಕೆ ಅನುವು ಮಾಡಿಕೊಡುವಲ್ಲಿ ಕೇರಳ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ನೇರವಾಗಿ ಆರೋಪಿಸಿತ್ತು.

2008ರಲ್ಲಿ ಬೆಂಗಳೂರಿನಲ್ಲಿ ಸುಮಾರು 9 ಕಡೆ ಸಂಭವಿಸಿದ ಸರಣಿ ಸ್ಫೋಟದಲ್ಲಿ 2 ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಜನ ಗಾಯಗೊಂಡಿದ್ದರು.

ಕೊಯಮತ್ತೂರಿನ ಸರಣಿ ಸ್ಫೋಟ ರುವಾರಿಯೂ ಆಗಿರುವ ಮದನಿ ಕೊಯಮತ್ತೂರು ಸ್ಫೋಟ ಪ್ರಕರಣದಿಂದ ಖುಲಾಸೆಗೊಂಡಿದ್ದಾನೆ. ಆದರೆ, ಬೆಂಗಳೂರು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮದನಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+