ಪರಸ್ಪರ ಗುಂಡಿಕ್ಕಿಕೊಂಡು ಪಾಂಟಿ ಮಾಂಟಿ ಹತ್ಯೆ

ಜಮೀನಿಗೆ ಸಂಬಂಧಿಸಿದ ಜಗಳವೇ ಈ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಪಾಂಟಿ ಛಡ್ಡಾನ ನಿಜವಾದ ಹೆಸರು ಗುರಪ್ರೀತ್ ಛಡ್ಡಾ, ಮಾಂಟಿಯ ನಿಜವಾದ ಹೆಸರು ಹರದೀಪ್ ಛಡ್ಡಾ. ಉತ್ತರ ಪ್ರದೇಶದ ಮದ್ಯಲೋಕದ ಚಕ್ರಾಧಿಪತ್ಯ ನಡೆಸುತ್ತಿರುವ ಪಾಂಟಿ, ಸಕ್ಕರೆ ಕಾರ್ಖಾನೆ, ಸಿನೆಮಾ ನಿರ್ಮಾಣ, ರಿಯಲ್ ಎಸ್ಟೇಟ್ ದಂಧೆಗಳನ್ನೂ ನಡೆಸುತ್ತಿದ್ದಾನೆ.
ಗುಂಡಿನ ಕಾಳಗ ನಡೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೆ ಅವರಿಬ್ಬರ ಹತ್ಯೆ ನಡೆದುಹೋಗಿತ್ತು. ಇದೇ ರೀತಿಯ ಗುಂಡಿನ ಕಾಳಗ ಕಳೆದ ತಿಂಗಳು ನಡೆದಿತ್ತು. ಆಗ ಇಬ್ಬರೂ ಪಾರಾಗಿದ್ದರು. ಆದರೆ, ಈ ಬಾರಿ ವಿಧಿ ಕೈಕೊಟ್ಟಿದೆ. ಈ ಘಟನೆಯಲ್ಲಿ ಇಬ್ಬರು ರಕ್ಷಣಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಅಕ್ಟೋಬರ್ 5ರಂದು ದೆಹಲಿಯ ಮೊರಾದಾಬಾದ್ ನಲ್ಲಿರುವ ಪೂರ್ವಜರ ಮನೆಯಲ್ಲಿ ಪಾಂಟಿ ಮತ್ತು ಮಾಂಟಿಗಳಿಬ್ಬರು ಪರಸ್ಪರರನ್ನು ಹತ್ಯೆಗೈಯಲು ಯತ್ನಿಸಿದ್ದರು. ಆಗ ಯಾವುದೇ ಸಾವುನೋವಾಗಿರಲಿಲ್ಲ. ದಕ್ಷಿಣ ದೆಹಲಿ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications