ಮೋದಿಗೆ ತಿರುಗೇಟು: ಪ್ರತಿಯೊಬ್ಬರ ಪತ್ನಿಯೂ ಅಮೂಲ್ಯವೇ

ಆದರೆ ಈಗ ಸ್ವತಃ ಸುನಂದಾ ಪುಷ್ಕರಣಿ ಅವರೇ ಮೋದಿಗೆ ತಿರುಗೇಟು ನೀಡಿದ್ದಾರೆ: 'ಮಹಾಸ್ವಾಮಿ, ಪ್ರತಿಯೊಬ್ಬ(ರ) ಹೆಂಡತಿಯೂ ಅಮೂಲ್ಯವೇ, ಅವರಿಗೆ ಬೆಲೆಕಟ್ಟಲಾಗದು' ಎಂದಿದ್ದಾರೆ ಸುನಂದಾ.
ಜತೆಗೆ ವಿಷಾದವೂ ವ್ಯಕ್ತಪಡಿಸಿದ್ದಾರೆ - 'ಏನ್ ಜನಾರೀ! ಈ ಪ್ರಪಂಚದಲ್ಲಿ ಸುಂದರವಾಗಿ ಕಾಣಿಸಿಕೊಳ್ಳುವುದು ನಿಜಕ್ಕೂ ಕಷ್ಟಕಷ್ಟ ಕಣ್ರೀ' ಎಂದಿದ್ದಾರೆ. 'ಮೋದಿಗೆ ಸುನಂದಾ ಅವರ ಧ್ವನಿಯಲ್ಲಡಗಿರುವ ನೋವು ಅರ್ಥವಾದೀತೇ !?' ಎಂದು ನಾಡಿನ ಹೆಣ್ಣುಮಕ್ಕಳು ಕೇಳುತ್ತಿದ್ದಾರೆ.
ಪತಿ ಶಶಿ ತುರೂರ್ ವಿನಾಕಾರಣ ತಮ್ಮಿಂದಾಗಿ 2010ರಲ್ಲಿ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದರು. ಆದರೆ ಮತ್ತೆ ಸಚಿವ ಸ್ಥಾನ ಅಲಂಕರಿಸಿ, ಗೌರವ ವಾಪಸ್ಸು ಪಡೆದಿದ್ದೂ ಆಯ್ತು. ಶಶಿ ತುರೂರ್ ಸಚಿವ ಸ್ಥಾನ ಅಲಂಕರಿಸಿದ ಕ್ಷಣವನ್ನು ಸಾಕ್ಷಾತ್ಕರಿಸಿಕೊಳ್ಳಲು ಸುನಂದಾ ತಮ್ಮ ಮೊಬೈಲಿನಲ್ಲಿ ಕ್ಲಿಕ್ಕಿಸುತ್ತಿದ್ದರು. ಆ ಸಂದರ್ಭದಲ್ಲಿ ಹೆಮ್ಮೆ, ಖುಷಿ, ಮಹತ್ತರವಾದುದನ್ನು ಸಾಧಿಸಿದ ಭಾವದಿಂದ ಬೀಗುತ್ತಿದ್ದ ಸುನಂದಾ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಸುನಂದಾ ಇನ್ನೂ ಏನು ಹೇಳಿದರು: ದುಬೈನಲ್ಲಿ ಮಗ ಶಿವ ಸುಂದರ್ ವ್ಯಾಸಂಗ ಮಾಡುತ್ತಿದ್ದಾನೆ. ದುಬೈನಲ್ಲಿ ಸುನಂದಾ ಅವರಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಇದೆ. 1989ರಲ್ಲಿ ನಮ್ಮ ಕುಟುಂಬ ಕಾಶ್ಮೀರವನ್ನು ತೊರೆದಾಗಿನಿಂದಲೂ ನನ್ನ ಕುಟುಂಬಕ್ಕೆ ಆರ್ಥಿಕವಾಗಿ ನಾನು ಊರುಗೋಲಾಗಿದ್ದೇನೆ.
ಸ್ವಸಾಮರ್ಥ್ಯದಿಂದ ಈ ಸಮಾಜದಲ್ಲಿ ಬಾಳಿಬದುಕುತ್ತಿರುವ ಹೆಣ್ಣುಮಗಳು ನಾನು. ಇಂತಹ ಅಗ್ಗದ ಮಾತುಗಳು ಕೇಳಿಬಂದಾಗ ತುಸು ಬೇಜಾರಾಗುತ್ತದೆ. ಆದರೆ ಇತ್ತೀಚೆಗೆ ಅದನ್ನು ಸಹಿಸಿಕೊಳ್ಳುವಷ್ಟು ಮಾನಸಿಕವಾಗಿ ಸದೃಢಳಾಗಿದ್ದೇನೆ. 'ಚಾಣಕ್ಯನ ನೀತಿ' ನನಗೆ ಅಚ್ಚುಮೆಚ್ಚು ಆ ಬಗ್ಗೆ ಪುಸ್ತಕವನ್ನೂ ಬರೆಯುತ್ತಿದ್ದೇನೆ. ಶಶಿಗೆ ಇಬ್ಬರು ದೊಡ್ಡ ಮಕ್ಕಳಿದ್ದಾರೆ. ಇಬ್ಬರೂ ಅಂತಾರಾಷ್ಟ್ರೀಯ ಪತ್ರಕರ್ತರು. ನನ್ನ-ಶಶಿ ಮದ್ವೆಗೂ ಬಂದಿದ್ದರು.
'ನಾನೋ ಮಾಂಸಾಹಾರಿ. ಆದರೆ ನನ್ನ ಶಶಿ ಪಕ್ಕಾ ಶಾಕಾಹಾರಿ. ಆದರೂ ಇಬ್ಬರೂ ಒಂದೇ ಟೇಬಲ್ಲಿನಲ್ಲಿ ಕುಳಿತು ಊಟ ಮಾಡುತ್ತೇವೆ' ಎಂದು ಕಣ್ಣುಮಿಟುಕಿಸುತ್ತಾ ಸುನಂದಾ ಹೇಳಿದರು.












Click it and Unblock the Notifications