ಅನಂತ್ಕುಮಾರ್ ಬಿಜೆಪಿ ಸಾರಥ್ಯವಹಿಸಿಕೊಳ್ಳಲಿ: ಬಿಎಸ್‌ವೈ

let-ananth-kumar-lead-bjp-to-victory-yeddyurappa-kjp
ಬೆಂಗಳೂರು, ನ.13: ಈಗಾಗಲೇ ಬಿಜೆಪಿ ಬಿಟ್ಟಾಗಿದೆ; ಕೆಜೆಪಿ ಒಪ್ಪಿಕೊಂಡಾಗಿದೆ ಎಂದು ಘೋಷಿಸುತ್ತಲೇ ಇರುವ ಮಾಜಿ ಸಿಎಂ ಯಡಿಯೂರಪ್ಪ ಅವರು ದೀಪಾವಳಿ ಅಮಾಸೆ ದಿನ ಬಿಜೆಪಿಗೆ ಭರ್ಜರಿ ಸವಾಲು ಹಾಕಿದ್ದಾರೆ. ತನ್ಮೂಲಕ ತಮ್ಮ ಹಳೆಯ ಮಿತ್ರ/ಶತ್ರು ಅನಂತ ಕುಮಾರ್ ಅವರಿಗೂ ಸವಾಲೊಡ್ಡಿದ್ದಾರೆ.

ಮುಂದಿನ ವಿಧಾಸನಭೆ ಚುನಾವಣೆಗೆ ಖುದ್ದಾಗಿ ಅನಂತ ಕುಮಾರೇ BJPಯನ್ನು ಕಟ್ಟಿ ಬೆಳಸಲಿ. ಆ ಪಕ್ಷವನ್ನು ಸ್ವಂತ ಸಾಮರ್ಥ್ಯದಿಂದ ಅವರೇ ಗೆಲ್ಲಿಸಲಿ. ಆ ಶ್ರೇಯಸ್ಸೂ ಅವರಿಗೆ ಸಲ್ಲಲಿ' ಎಂದು ದೀಪಾವಳಿಯಂದು ಶುಭ ಹಾರೈಸುತ್ತಲೇ, ಖಡಕ್ ಸವಾಲನ್ನೂ ಹಾಕಿದ್ದಾರೆ. ನನ್ನ ನಿಲುವನ್ನು ಅನಂತ ಕುಮಾರ್ ಸವಾಲಾಗಿ ಸ್ವೀಕರಿಸಲಿ ಎಂದೂ ಬಾಯ್ಬಿಟ್ಟು ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿ KJP ಪಕ್ಷದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಆಚರಣೆ ಸಂದರ್ಭದಲ್ಲಿ BSY ಹೀಗೆ ಗುಡುಗಿದ್ದಾರೆ. 'ನನ್ನನ್ನು ಇನ್ನೂ BJPಯಲ್ಲಿ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಬೇಡಿ. ನಾನು ಈಗಾಗಲೇ ಬಿಜೆಪಿ ತ್ಯಜಿಸಿದ್ದೇನೆ. ಬಿಜೆಪಿ ಹೈಕಮಾಂಡ್ ಇನ್ನು ಆಪ್ರಯತ್ನವನ್ನು ಜಾರಿಯಲ್ಲಿಟ್ಟಿರುವುದು ಬೇಡ' ಎಂದು BJP ನಾಯಕರಿಗೆ ಮತ್ತೊಮ್ಮೆ ಹಿತವಚನ ನುಡಿದಿದ್ದಾರೆ.

ನನ್ನ ಜೀವನದಲ್ಲಿ 2 ತಪ್ಪು ಮಾಡಿದ್ದೇನೆ. ಮೊದಲನೆಯದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಎರಡನೆಯದು, ಬಿಜೆಪಿ ಕೇಂದ್ರ ನಾಯಕರ ಮಾತು ಕೇಳಿದ್ದು. ಇನ್ನೆಂದಿಗೂ ಇಂತಹ ತಪ್ಪುಗಳನ್ನು ಮಾಡುವುದಿಲ್ಲ ಎಂದು ಯಡಿಯೂರಪ್ಪ ಅವರು ನೊಂದು ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+