ಪ್ರೀತಿ ಕಾಮವಾದಾಗ ಹಠ ಸಂಭೋಗವಾಯ್ತು

ಇಲ್ಲಿನ ಹರಿಹರ ತಾಲೂಕಿನ ಜಿ ಬೇವಿನಹಳ್ಳಿ ಗ್ರಾಮದ ನಿವಾಸಿ 19 ವರ್ಷ ವಯಸ್ಸಿನ ಕರಿ ಬಸಮ್ಮ ತನ್ನ ತಂದೆ ತಿರುಕಪ್ಪ ಎಂಬುವರ ಜೊತೆ ಮಲೆ ಬೆನ್ನೂರು ಪೊಲೀಸ್ ಠಾಣೆಗೆ ಹೋಗಿ ಪ್ರೀತಿಯಿಂದ ಮೋಸ ಹೋದ ಘಟನೆಯನ್ನು ವಿವರಿಸಿ ದೂರು ನೀಡಿದ್ದಾರೆ.
ನಾಗಪ್ಪ ನಿಟ್ಟೂರು ಎಂಬುವರ ಹಿರಿಯ ಮಗ ಸಂತೋಷ ಹಾಗೂ ಕರಿಬಸಮ್ಮ ಇಬ್ಬರು ಸುಮಾರು 6 ತಿಂಗಳಿನಿಂದ ಪ್ರೀತಿಸುತ್ತಿದ್ದರು.
ನವೆಂಬರ್ 9 ರಂದು ರಾತ್ರಿ 11 ಗಂಟೆ ವೇಳೆಗೆ ಕರಿಬಸಮ್ಮಳ ಬಳಿಗೆ ಸಂತೋಷ ಬರುತ್ತಾನೆ. ಮನೆ ಹತ್ತಿರವೇ ಇದ್ದದರಿಂದ ಕರಿಬಸಮ್ಮ ಮನೆಯವರಿಗೆ ಹೇಳಿ ಸಂತೋಷ್ ಮನೆಗೆ ಬರುತ್ತಾಳೆ. ಇಬ್ಬರು ಒಂದೇ ಜನಾಂಗದವರಾಗಿದ್ದು, ಇಬ್ಬರ ಮನೆಯಲ್ಲೂ ಪರಿಚಯ ಇತ್ತು ಎಂದು ತಿಳಿದು ಬಂದಿದೆ.
ಹೀಗೆ ರಾತ್ರಿ ವೇಳೆ ಕರಿಬಸಮ್ಮಳನ್ನು ತನ್ನ ಓದುವ ಕೋಣೆಗೆ ಕರೆಸಿಕೊಂಡ ಸಂತೋಷನಿಗೆ ತಲೆ ತಿರುಗಿದೆ. ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ ಮದುವೆ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾನೆ.
ಇದರಿಂದ ಸಂತೋಷಗೊಂಡ ಕರಿಬಸಮ್ಮ ಮನೆಯಲ್ಲಿ ಹಿರಿಯವರನ್ನು ಕೇಳೋಣ ಎಂದಿದ್ದಾಳೆ. ಆದರೆ, ನಂತರ ಆಕೆ ಒಪ್ಪಿಗೆ ಪಡೆಯದೆ ಸಂತೋಷ ದೇಹ ಸಂಪರ್ಕ ಸಾಧಿಸಿದ್ದಾನೆ. ಕರಿಬಸಮ್ಮ ಬರೆದುಕೊಟ್ಟ ದೂರಿನಂತೆ ಆಕೆಯನ್ನು ಸಂತೋಷ ಹಠವಾಗಿ ಸಂಭೋಗಿಸಿದ್ದಾನೆ.
ಬೆಳಗಿನ ಜಾವ ಸುಮಾರು 4-00ಗಂಟೆ ಸಮಯದಲ್ಲಿ ಸಂತೋಷ ಕರಿಬಸಮ್ಮಳನ್ನು ಅವರ ಮನೆಯವರೆಗೂ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾನೆ.
ಪ್ರೀತಿಸಿದ ಹುಡುಗನಿಂದ ಮೋಸ ಹೋದಂತೆ ಆದ ಕರಿಬಸಮ್ಮ ನಂತರ ಸಂತೋಷನ ಮನೆಗೆ ಬಂದು ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾಳೆ.
ಅವರ ತಂದೆ ತಾಯಿ ಹಾಗೂ ಅವರ ಸಂಬಂಧಿಕರುಗಳು ಕರಿಬಸಮ್ಮಳನ್ನು ಅವಾಚ್ಯವಾಗಿ ಬೈದಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಕರಿಬಸಮ್ಮ ಮೂರು ದಿನ ಬಿಟ್ಟು ತನ್ನ ಅಪ್ಪನನ್ನು ಕರೆದುಕೊಂಡು ಹೋಗಿ ಮಲೆಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯ ಕೊಡಿಸುವಂತೆ ಮೊರೆ ಹೊಕ್ಕಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ref: ಮಲೆಬೆನ್ನೂರು ಪೊಲೀಸ್ ಠಾಣೆ ಗುನ್ನೆ ನಂ: 172/2012, ಕಲಂ: 376, 504, 506 ರೆ/ವಿ 149 ಐ.ಪಿ.ಸಿ.












Click it and Unblock the Notifications