ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

Bangalore Techie Kills Wife
ಬೆಂಗಳೂರು, ನ.13: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಸಾಫ್ಟ್ ವೇರ್ ಇಂಜಿನಿಯರೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಮುನ್ನೆಕೊಳಲ ಬಳಿಯ ರಾಜಶ್ರೀ ಬಡಾವಣೆ ನಿವಾಸಿ ರುಚಿ ಚೌಧರಿ (28) ಕೊಲೆಯಾದ ದುರ್ದೈವಿ. ಪಂಜಾಬ್ ಮೂಲದ ರುಚಿ ಚೌಧುರಿ ಹಾಗೂ ಸಿದ್ದಾರ್ಥ್ ಅವರು ಮದುವೆಯಾಗಿ ನಾಲ್ಕು ವರ್ಷವಾಗಿದೆ. ಇವರ ಸಂಬಂಧಿಕರೆಲ್ಲ ದೆಹಲಿಯಲ್ಲಿ ನೆಲೆಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಮೂರು ವರ್ಷದ ಮಗಳಿದ್ದಾಳೆ. ದೆಹಲಿಯ ಆಸೆಂಚರ್ ಕಂಪನಿ ವಿಭಾಗದಲ್ಲಿ 31 ವರ್ಷದ ಸಿದ್ದಾರ್ಥ್ ಕೆಲಸ ಮಾಡುತ್ತಿದ್ದರು. ದೆಹಲಿಯಿಂದ ಬೆಂಗಳೂರಿಗೆ ಆಗಾಗ್ಗೆ ಬಂದು ಹೋಗಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಟೆಕ್ಕಿ ದಂಪತಿಯಲ್ಲಿ ಅನ್ಯೋನ್ಯತೆ ಇರಲಿಲ್ಲ: ಪ್ರೀತಿಸಿ ಮದುವೆಯಾಗಿದ್ದರೂ ಇಬ್ಬರ ನಡುವೆ ಅನ್ಯೋನ್ಯತೆ ಇರಲಿಲ್ಲ ಎಂದು ತಿಳಿದು ಬಂದಿದೆ. ಫೋಪಾನ್ ಇನ್ ಫೋ ಟೆಕ್ ಕಂಪನಿಯ ಉದ್ಯೋಗಿಯಾಗಿದ್ದ ರುಚಿ ಹಗೂ ಸಿದ್ದಾರ್ಥ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ದೆಹಲಿಗೆ ತೆರಳುವ ಮುನ್ನ ಸಿದ್ದಾರ್ಥ್ ವೈಟ್ ಫೀಲ್ಡ್ ರಸ್ತೆಯಲ್ಲಿ ಅಪಾರ್ಟ್ಮೆಂಟ್ ವೊಂದನ್ನು ಖರೀದಿಸಿ ಅದರ ಕಂತಿನ ಸಾಲದ ಜವಾಬ್ದಾರಿಯನ್ನು ಪತ್ನಿಗೆ ವಹಿಸುತ್ತಾರೆ. ಜಂಟಿಯಾಗಿ ಇಬ್ಬರು ಗೃಹಸಾಲ ಪಡೆಯಲು ಸಿದ್ದಾರ್ಥ್ ನಿರ್ಧರಿಸಿರುತ್ತಾರೆ.

ಪತಿಯ ಮಾತಿಗೆ ಒಪ್ಪಿದ ರುಚಿ ಒಂದೆರಡು ಕಂತು ಕಟ್ಟಿ ನಂತರ 'ನಾನ್ಯಾಕೆ ಕಂತು ಕಟ್ಟಲಿ?' ಎಂದು ಸಿದ್ದಾರ್ಥ್ ರನ್ನು ಪ್ರಶ್ನಿಸುತ್ತಾರೆ.

ಕಳೆದ ರಾತ್ರಿ ಮನೆಗೆ ಬಂದ ಸಿದ್ದಾರ್ಥ್ ಕಂತು ಕಟ್ಟದಿರುವ ಬಗ್ಗೆ ರುಚಿ ಅವರನ್ನು ಪ್ರಶ್ನಿಸಿದ್ದಾರೆ. ಜಂಟಿ ಸಾಲ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸೈದ ಗಂಡನಿಗೆ ರುಚಿ ಕ್ಯಾರೆ ಎನ್ನುವುದಿಲ್ಲ.

ನಂತರ ಇಬ್ಬರು ಮುನಿಸಿಕೊಂಡು ಊಟ ಕೂಡಾ ಮಾಡದೆ ಹಾಗೆ ಮಲಗಿದ್ದಾರೆ. ಸಿಟ್ಟಿನಿಂದ ಒಲಿಸಿಕೊಳ್ಳಲಾಗದ್ದನ್ನು ಸರಸದಿಂದ ಒಲಿಸಿಕೊಳ್ಳಲು ಸಿದ್ದಾರ್ಥ್ ಯತ್ನಿಸುತ್ತಾರೆ.

ಪತ್ನಿ ರುಚಿಯನ್ನು ಸರಸಕ್ಕೆ ಕರೆಯುತ್ತಾರೆ. ಆದರೆ, ಸಿದ್ದಾರ್ಥ್ ಮೇಲಿನ ಕೋಪ ಮುಂದುವರೆಸಿದ ರುಚಿ, ಆಫರ್ ನಿರಾಕರಿಸುತ್ತಾರೆ. ಇದರಿಂದ ಕೋಪಗೊಂಡ ಸಿದ್ದಾರ್ಥ್ ಅಡುಗೆ ಮನೆಗೆ ತೆರಳಿ ಚಾಕು ತೆಗೆದುಕೊಂಡು ಬರುತ್ತಾರೆ.

ರುಚಿ ಏನು ಎತ್ತ ಎಂದು ವಿಚಾರಿಸುವ ಮೊದಲೇ ಆಕೆ ಮೇಲೆ ಹಲ್ಲೆ ಮಾಡಿದ ಸಿದ್ದಾರ್ಥ್ 11 ಬಾರಿ ಚುಚ್ಚಿ ಕೊಂದು ಹಾಕುತ್ತಾರೆ. ನಂತರ ತನ್ನ ತಪ್ಪಿನ ಅರಿವಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಮಣಿಕಟ್ಟನ್ನು ಕತ್ತರಿಸಿಕೊಳ್ಳುತ್ತಾರೆ.

ಕೆಳಗಿನ ಮನೆಯಲ್ಲಿದ್ದ ಸಿದ್ದಾರ್ಥ್ ತಂದೆ ತಾಯಿ ಈ ಸಮಯಕ್ಕೆ ಮೇಲಿನ ಮನೆಗೆ ಬಂದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆ ಮಾಡಿದ್ದಾರೆ. ವಿಷಯ ಸ್ಥಳೀಯ ಪೊಲೀಸ್ ಠಾಣೆಗೂ ತಲುಪಿ, ಎಚ್ ಎಎಲ್ ಠಾಣೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

'ಸಿದ್ದಾರ್ಥ್ ಗೆ ಸೂಕ್ತ ಚಿಕಿತ್ಸೆ ನೀಡಿ ನಂತರ ಬಂಧಿಸಲಾಗಿದೆ. ರುಚಿ ಅವರ ಶವವನ್ನು ಬೌರಿಂಗ್ ಆಸ್ಪತ್ರೆಗೆ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಇನ್ಸ್ ಪೆಕ್ಟರ್ ಬಾಲಕೃಷ್ಣ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+