ಜೆಡಿಎಸ್‌ಗೆ ಕಿಂಗ್ ಅಥವಾ ಕಿಂಗ್‌ಮೇಕರ್ ಸ್ಥಾನ ಖಚಿತ

ಅದು ಅಲ್ಲದೆ ಅದರ ವೋಟ್‌ಬ್ಯಾಂಕ್ (ಲಿಂಗಾಯಿತರು-ದಲಿತರು-ಅತಿಹಿಂದುಳಿದವರು ಮತ್ತು ಮೇಲ್ಜಾತಿಯ ಮತದಾರರು) ಇಂತಹ ದೊಡ್ಡ ಕಾಂಬಿನೇಶನ್ ಪ್ರಸುತ್ತ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಹೀಗಾಗಿಯೇ ಹತ್ತಾರು ವೈಫಲ್ಯದ ಮಧ್ಯೆ ಕೂಡ ಬಿಜೆಪಿ ಟಿಕೇಟ್‌ಗೆ ಡಿಮ್ಯಾಂಡ್ ಕಡಿಮೆಯಾಗುವ ಸಾಧ್ಯತೆಯಿಲ್ಲ.
ಇನ್ನು ಜೆಡಿಎಸ್ ಕಳೆದ ನಾಲ್ಕು ವರ್ಷಗಳಿಂದ ವಿರೋಧ ಪಕ್ಷವಾಗಿ ತನ್ನ ಅಸ್ವಿತ್ತವನ್ನು ಅದು ಆಗಾಗ ಸಾಬೀತು ಪಡಿಸುತ್ತಲೇ ಬಂದಿದೆ. ಹಳೆ ಮೈಸೂರಲ್ಲಿ ಅದರ ಬೇಸ್ ಈಗಲೂ ಗಟ್ಟಿಯಾಗೆ ಇದೆ. ಉಳಿದ ಭಾಗದಲ್ಲಿ ಅದು ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲು ಮಾತ್ರ ವಿಫಲವಾಗಿದೆ.
ಆದರೂ ಅದು ಹಳೆಮೈಸೂರಿನ ಹೊರಗೆ ಕೂಡ ಈ ಬಾರಿ ಒಂದಷ್ಟು ಸ್ಥಾನಗಳನ್ನು ಪಡೆಯುವ ಅವಕಾಶಗಳಿವೆ ಬಿಎಸ್‌ಆರ್ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ರಾಜ್ಯದಲ್ಲಿ ಪಡೆಯಲು ಸದ್ಯದ ಮಟ್ಟಿಗಂತೂ ಸಾಧ್ಯವಾಗದ ಮಾತು.
ವೋಟ್‌ಬ್ಯಾಂಕಿನ ದೃಷ್ಟಿಯಿಂದ ನೋಡಿದರು ನಾಯಕ(?)ಸಮುದಾಯ ಬಿಟ್ಟರೆ ಅದರ ಪರವಾಗಿ ಗಟ್ಟಿಯಾಗಿ ನಿಲ್ಲುವಂತ ಮತ್ತೊಂದು ಸಮುದಾಯದ ಕೊರತೆ ಅದಕ್ಕೆ ಕಾಡುತ್ತಿದೆ.
ಒಟ್ಟಾರೆ ಪ್ರಸುತ್ತ ರಾಜ್ಯದ ಸ್ಥಿತಿಗತಿಗಳನ್ನು ಆಧಾರಿಸಿ ನೋಡಿದರೆ ಕಾಂಗ್ರೆಸ್‌ಗೆ ಅತಿ ಹೆಚ್ಚು ಅಂದರೆ 90 (85-90) ಸ್ಥಾನಗಳು ಮಾತ್ರ ದೊರಕಬಹುದು, ಇನ್ನೂ ಬಿಜೆಪಿಗೆ 75 (70-75) ಸ್ಥಾನಗಳು, ಜೆಡಿಎಸ್‌ಗೆ 40 (35-40) ಸ್ಥಾನಗಳು, ಬಿಎಸ್‌ಆರ್ ಪಾರ್ಟಿಗೆ 8 (6-8) ಸ್ಥಾನಗಳು ಹಾಗೂ ಇತರರು 8-10 ಸ್ಥಾನಗಳನ್ನು ಪಡೆಯುವ ಅವಕಾಶಗಳಿವೆ.
ಯಾವ ಪಕ್ಷಕ್ಕೂ ಸರಳ ಬಹಮತ ಪಡೆಯುವ ಅವಕಾಶವಂತೂ ಸಾಧ್ಯದ ಮಟ್ಟಿಗೆ ಕಂಡುಬರುತ್ತಿಲ್ಲ. ಜೆಡಿಎಸ್‌ಗೆ ಕಿಂಗ್ ಅಥವಾ ಕಿಂಗ್‌ಮೇಕರ್ ಆಗುವ ಅವಕಾಶವಂತೂ ಮುಕ್ತವಾಗಿದೆ. ಆದರೆ ಕಾಂಗ್ರೆಸ್ ಕಳೆದ ಬಾರಿಗಿಂತ ಶೇ 2 ರಿಂದ 3 ಮತಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡರೆ ಅದು ಸರಳ ಬಹುಮತ ಕೂಡ ಪಡೆಯುವ ಅವಕಾಶಗಳಿರುತ್ತದೆ.
ಆದರೆ ಕಾಂಗ್ರೆಸಿನ ಮುಖ್ಯ ಸಮಸ್ಯೆ ಅದರ ಪರವಾಗಿ ಯಾವುದೇ ಸಮುದಾಯ ಗಟ್ಟಿಯಾಗಿ ನಿಲ್ಲುವಂತ ಒಂದು ವೋಟ್‌ಬ್ಯಾಂಕ್ ಅದು ಹೊಂದಿಲ್ಲ. ಇದೇ ಕಾರಣದಿಂದಲ್ಲೇ ಅದು ಕಳೆದ ಬಾರಿಗಿಂತ ಶೇ 2 ರಷ್ಟು ಮತಗಳನ್ನು ಈ ಬಾರಿ ಕಳೆದುಕೊಂಡರೆ ಈಗಿರುವ (80) ಸ್ಥಾನಗಳಲ್ಲಿ 10 ರಿಂದ 15 ಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯ ಕೂಡ ಇಲ್ಲದಿಲ್ಲ.
ಅದರ ನೇರ ಲಾಭ ಬಿಜೆಪಿಗೋ ಅಥವಾ ಜೆಡಿಎಸ್‌ಗೋ ಅನ್ನೋದು ಅದು ಯಾವ ಪ್ರದೇಶದಲ್ಲಿ ಮತಗಳನ್ನು ಕಳೆದುಕೊಳ್ಳುತ್ತದೆ ಎಂಬುವುದರ ಮೇಲೆ ನಿಂತಿರುತ್ತದೆ. ಒಟ್ಟಲ್ಲಿ ಮತ್ತೆ ಅತಂತ್ರದ ಹಾದಿಯಲ್ಲಿ ರಾಜ್ಯದ ಪ್ರಸಕ್ತ ರಾಜಕಾರಣವಿದೆ. ಮುಂದಿನ ದಿನಗಳಲ್ಲಿ ರಾಜಕೀಯದ ಧೃವೀಕರಣ ಹೇಗಿರುತ್ತದೆಂದು ಎಂಬುವುದನ್ನು ಮೇಲೆ ಮಾತ್ರ ಅಂತ್ರವೋ ಸ್ವತಂತ್ರವೋ ಅನ್ನೋದು ನಿರ್ಧಾರವಾಗಲಿದೆ.












Click it and Unblock the Notifications