ಅಧಿಕಾರ ಪೀಠ: ಸರಳ ಬಹಮತ ಸಾಧ್ಯವಿಲ್ಲ, ಕೈ ಮೇಲುಗೈ ಗ್ಯಾರಂಟಿ

ಹೀಗೆ ಹಲವು ಅಂಶಗಳು ಬಿಜೆಪಿಗೆ ಮುಳ್ಳುವಾಗಲಿದೆ. ಅದರಲ್ಲೂ ಮುಖ್ಯಮಂತ್ರಿ ಆಗಿ ತಮ್ಮ ಅಸ್ತಿತ್ವವನ್ನು ತೋಪರ್ಡಿಸಿಕೊಳ್ಳುವ ನಿಟ್ಟಿನಲ್ಲಿ ಶೆಟ್ಟರ್ ಇದುವರಿಗೆ ಒಂದೇ ಒಂದು ಹೆಜ್ಜೆ ಕೂಡ ಇಟ್ಟಿಲ್ಲ. ಇನ್ನು ಬಹುತೇಕ ಶಾಸಕರು ಸ್ಥಳೀಯವಾಗಿ ಸಾಕಷ್ಟು ಹೆಸರು ಕೂಡ ಕೆಡಿಸಿಕೊಂಡಿದ್ದಾರೆ.
ಜೆಡಿಎಸ್ ಏನೇ ಸಾಹಸ ಮಾಡಿದರು ಹಳೆಮೈಸೂರು ಬಿಟ್ಟು ಬೇರೆ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಸಂಘಟನೆಯನ್ನು ಹೊಂದಿಲ್ಲ. ಬಿಎಸ್‌ಆರ್ ಪಕ್ಷಕ್ಕೆ ಶ್ರೀರಾಮಲು ಮಾತ್ರ ಏಕೈಕ ನಾಯಕ ಮತ್ತು ಸಂಘಟಕರಾಗಿ ಕೆಲಸ ಮಾಡಬೇಕಾಗಿದೆ.
ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಕಾಂಗ್ರೆಸ್ ಮಾತ್ರ ಅನಿವಾರ್ಯದ ಆಯ್ಕೆಯಾಗಿ ಜನರ ಮುಂದೆ ಕಾಣುತ್ತಿದೆ. ಹಾಗಂತ ಕಾಂಗ್ರೆಸ್ ಹೆಚ್ಚು ಬೀಗುವಂತೆ ಕೂಡ ಇಲ್ಲ. ಈಗಲೂ ಹೆಚ್ಚಿನ ಮತಗಳು ಕಾಂಗ್ರೆಸಿನ ಪಾಲಾಗುವ ಸಂಭವಿದೆ.
ಮತ ಗಳಿಕೆ ಮತ್ತು ಸ್ಥಾನ ಗಳಿಕೆ ವ್ಯತ್ಯಾಸ: ಕಳೆದ ಬಾರಿ ಕೂಡ ಕಾಂಗ್ರೆಸ್‌ಗೆ (34.59%) ಬಿಜೆಪಿಗೆ (33.86) ಜೆಡಿಎಸ್‌ಗೆ (19.11%) ಮತ ಬಂದಿತ್ತು. ಶೇ 34.59 ಮತಗಳನ್ನು ಪಡೆದ ಕಾಂಗ್ರೆಸ್‌ಗೆ 80 ಸ್ಥಾನಗಳು ಹೇಗೆ ಬಂತು, ಶೇ 33.86 ಮತ ಪಡೆದ ಬಿಜೆಪಿ ಹೇಗೆ 110 ಸ್ಥಾನಗಳು ಪಡೆಯಿತು. ಮತ ಗಳಿಕೆ ಮತ್ತು ಸ್ಥಾನ ಗಳಿಕೆ ಮಧ್ಯೆ ಒಂದು ವ್ಯತ್ಯಾಸವಿದೆ.
ಇದನ್ನು ಸರಳವಾಗಿ ಹೇಳಬೇಕು ಅಂದರೆ ಒಂದು ಉದಾಹರಣೆ ನೋಡೋಣ. ಈಗ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳು ಜೆಡಿಎಸ್ ಗೆಲುತ್ತದೆಂದು ಇಟ್ಟಿಕೊಳ್ಳೋಣ. ಇಲ್ಲಿ ಕಾಂಗ್ರೆಸ್ ಎಲ್ಲಾ ಸ್ಥಾನಗಳಲ್ಲಿಯೂ ಎರಡನೆ ಸ್ಥಾನ ಪಡೆಯುತ್ತದೆ.
ಅದರ ಅಭ್ಯರ್ಥಿಗಳು ಬಹುತೇಕ ಕಡೆ 500, 1000 ಹೀಗೆ ಅಲ್ಪಮತಗಳ ಅಂತರದಿಂದ ಸೋಲುತ್ತಾರೆ. ಇಲ್ಲಿ ಬಹುತೇಕ ಕಡೆ ಬಿಜೆಪಿ ಮೂರನೇ ಸ್ಥಾನ ಪಡೆದು ಎಲ್ಲಾ ಕಡೆ ಠೇವಣಿ ಕಳೆದುಕೊಳ್ಳುತ್ತದೆ ಎಂದು ಭಾವಿಸೋಣ.
ಈಗ ಇದೇ ರೀತಿ ಮತ್ತೊಂದು ಭಾಗದಲ್ಲಿ ನೋಡೋಣ. ಹಾವೇರಿ ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳು ಬಿಜೆಪಿ ಗೆಲುತ್ತದೆಂದು ಇಟ್ಟುಕೊಳ್ಳೋಣ. ಇಲ್ಲಿ ಕಾಂಗ್ರೆಸ್ ಎಲ್ಲಾ ಸ್ಥಾನಗಳಲ್ಲಿಯೂ ಎರಡನೇಯ ಸ್ಥಾನ ಪಡೆಯುತ್ತದೆ. ಅದರ ಅಭ್ಯರ್ಥಿಗಳು ಬಹುತೇಕ ಕಡೆ 500, 1000 ಅಲ್ಪಮತಗಳ ಅಂತರದಿಂದ ಸೋಲುತ್ತಾರೆ.
ಇಲ್ಲಿ ಬಹುತೇಕ ಕಡೆ ಜೆಡಿಎಸ್ ಮೂರನೇ ಸ್ಥಾನ ಪಡೆದು ಎಲ್ಲಾ ಕಡೆ ಠೇವಣಿ ಕಳೆದುಕೊಳ್ಳುತ್ತದೆ ಎಂದು ಭಾವಿಸೋಣ. ರಾಜ್ಯದ ಎಲ್ಲಾ ಭಾಗಗಳು ಕಾಂಗ್ರೆಸ್ ಎರಡನೆ ಸ್ಥಾನವನ್ನು ಪಡೆಯುವುದರಿಂದ ಶೇಕಡವಾರು ಮತಗಳನ್ನು ನೋಡಿದಾಗ ಕಾಂಗ್ರೆಸ್ ಮನ್ನಡೆಯಲ್ಲಿರುತ್ತದೆ. ಆದರೆ ಇದೇ ಮತಗಳನ್ನು ನಾವು ಸ್ಥಾನಗಳಾಗಿ ಪರವರ್ತಿಸಿದಾಗ ಸಾಧನೆ ಅಲ್ಪವಾಗುತ್ತೆ.
ಈಗಲೂ ಶೇಕಡವಾರು ಮತಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಬಂದರು ಕೂಡ ಅದು ಸರಳ ಬಹುಮತ ಪಡೆಯವಷ್ಟರ ಮಟ್ಟಿಗೆ ಸ್ಥಾನಗಳನ್ನು ಮಾತ್ರ ಪಡೆಯುವ ಅವಕಾಶಗಳು ಕಂಡುಬರುತ್ತಿಲ್ಲ.
ಬಿಜೆಪಿಗೆ ಲಿಂಗಾಯಿತ, ದಲಿತರಲ್ಲಿ ಒಂದು ವರ್ಗ, ಬ್ರಾಹ್ಮಣರು ಸೇರಿದಂತೆ ಮೇಲುವರ್ಗದ ಮತಗಳು, ಅತಿಹಿಂದುಳಿದ ಕೆಲಜಾತಿ ಮತಗಳು ದೊರೆಯುವ ಅವಕಾಶಗಳಿದ್ದರೂ ಯಡಿಯೂರಪ್ಪನವರೇ ಬಿಜೆಪಿ ಪಾಲಿಗೆ ಮೊಸರಿನಲ್ಲಿ ಕಲ್ಲಿನಂತೆ ಕಾಡುತ್ತಾರೆ ಎಂಬ ಭಯವೇ ಆಂತರೀಕವಾಗಿ ಬಿಜೆಪಿಗೆ ಕಾಡುತ್ತಿದೆ.
ಚುನಾವಣೆ ಹೊತ್ತಿಗೆ ಎಷ್ಟು ಹಾಲಿ ಶಾಸಕರಗಳು ಬೇರೆ ಪಕ್ಷಗಳಿಗೆ ಪಕ್ಷಾಂತರ ಮಾಡುತ್ತಾರೆ ಎಂಬುದು ಈಗಲೇ ಹೇಳೋದಕ್ಕೆ ಬರೋದಿಲ್ಲ. ಬಿಎಸ್ ವೈ ಅವರ ಕೆಜೆಪಿ ಎಷ್ಟು ಜನರನ್ನು ಸೆಳೆಯಲಿದೆ ಎಂಬುದರ ಮೇಲೆ ಬಿಜೆಪಿ ಭವಿಷ್ಯ ನಿಂತಿದೆ. ಮುಂದುವರೆಯಲಿದೆ...












Click it and Unblock the Notifications