ಅರವಿಂದ ಕೇಜ್ರಿವಾಲಾಗೆ ಇನ್ಫಿ ಮೂರ್ತಿ, ಟಾಟಾ ಹಣ

ಇಂಡಿಯಾ ಎಗೆನೆಸ್ಟ್ ಕರಪ್ಷನ್ ಸಂಘಟನೆಯ Public Cause Research Foundation ಲೆಕ್ಕಕ್ಕೆ ಬ್ಯಾಂಕ್ ಮೂಲಕ ಈ ಕೋಟ್ಯಂತರ ರೂ. ದೇಣಿಗೆಗಳು ಸಂದಾಯವಾಗಿವೆ. ಕೆಲವು ಖಾಸಗಿ ಬ್ಯಾಂಕರುಗಳು ಸಹ ಕೇಜ್ರಿವಾಲಾಗೆ ಆರ್ಥಿಕ ನೆರವು ನೀಡುತ್ತಿದ್ದಾರೆ.
ತಮಗೆ ಬಂದ ಮ್ಯಾಗ್ಸಸ್ಸೆ ಪ್ರಶಸ್ತಿಯ ನಗದು ಮೊತ್ತವನ್ನು ಮೊದಲ ಕಾಣಿಕೆಯಾಗಿ ನೀಡಿ, 2006ರ ಡಿಸೆಂಬರ್ 19ರಂದು ಕೇಜ್ರಿವಾಲಾ ಇನ್ನೂ ಮೂವರ ಜತೆಗೂಡಿ Public Cause Research Foundation ಸ್ಥಾಪಿಸಿದ್ದಾರೆ.
'ಇಲ್ಲಿ ದೇಣಿಗೆ ಮುಖ್ಯವಲ್ಲ. ಅವರ ಆಶೀರ್ವಾದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೋಟ್ಯಂತರ ಜನರ ಭಾಗವಹಿಸುವಿಕೆ ಹಾಗೂ ಆಶೀರ್ವಾದವು ಖಂಡಿತ ದೇಶವನ್ನು ಬದಲಾಯಿಸಬಲ್ಲದು' ಎಂದು ಕೇಜ್ರಿವಾಲಾ ಟ್ವೀಟ್ ಮಾಡಿ, ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರೀಯ ಪ್ರಜ್ಞೆಯಾಗಿ ಜಾಗೃತವಾಗುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಕೇಜ್ರಿವಾಲಾ ಹೋರಾಟಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ, ಟಾಟಾ ಒಡೆಯ ರತನ್ ಟಾಟಾ ಸೇರಿದಂತೆ ಅನೇಕರು ದೇಣಿಗೆ ನೀಡುವುದ ಜತೆಗೆ ನೈತಿಕ ಧೈರ್ಯವನ್ನು ತುಂಬುತ್ತಿದ್ದಾರೆ. IACಯ ಹೋರಾಟದಲ್ಲಿ ಆಸಕ್ತಿ ಹೊಂದಿರುವ ಇನ್ಫೋಸಿಸ್ ಮೂರ್ತಿ ಅವರು IAC ಕೊಡಮಾಡುವ RTI awardನ ಆಯ್ಕೆ ಸಮಿತಿಯ ಸದಸ್ಯರು ಆಗಿದ್ದಾರೆ.
2010-11 ಸಾಲಿನಲ್ಲೇ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು 12 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಬೆಂಗಳೂರಿನ Kasturi Trust ಸಹ 25 ಲಕ್ಷ ರೂ. ದೇಣಿಗೆ ನೀಡಿದೆ. ಇನ್ನು, ಟಾಟಾ ಸಾಮಾಜಿಕ ಕ್ಷೇಮಾಭ್ಯುದಯ ಟ್ರಸ್ಟ್ 25 ಲಕ್ಷ ರೂ. ದೇಣಿಗೆ ನೀಡಿದೆ. ಮುಂಬೈನ ವಲ್ಲಭ ಬನ್ಸಾಲಿ ಷೇರು ವ್ಯಾಪಾರಿ 2 ಲಕ್ಷ ರೂ. ಸಂದಾಯ ಮಾಡಿದ್ದಾರೆ.
IndusInd Bank, Eicher Goodearth Trust, JM Financial Foundation, Religare Enterprises, naukri.com ಸೇರಿದಂತೆ ಹಲವಾರು ಕಂಪನಿಗಳು IAC ನೆರವು ನೀಡಿವೆ.
ಗಮನಿಸಿ: ಮುಕೇಶ್ ಅಂಬಾನಿಯ ರಿಲಯನ್ಸ್ ಕಂಪನಿಯು ಕೇಜ್ರಿವಾಲಾರ IAC ಗೆ ಆರ್ಥಿಕ ನೆರವು ನೀಡಿಲ್ಲ ಎಂದು ಘಂಟಾಘೋಷವಾಗಿ ಯಾರು ಬೇಕಾದರೂ ಹೇಳಬಹುದು.












Click it and Unblock the Notifications