ಲಿಂಗಾಯತರಿಗೆ ಯಡಿಯೂರಪ್ಪನೇ ಮಾಸ್ ಲೀಡರ್

ಮಾಸ್ ಲೀಡರ್: ಈಗಲೂ ಯಡಿಯೂರಪ್ಪನವರೇ ಈ ಸಮುದಾಯದ 'ಮಾಸ್ ಲೀಡರ್'. ಅದು ವಿರೋಧಿಪಕ್ಷಗಳಿಗೂ ಗೊತ್ತು ಅವರ ಪಕ್ಷದಲ್ಲಿನ ಅವರ ವಿರೋಧಿಗಳಿಗಂತೂ ಅದು ಇನ್ನೂ ಚೆನ್ನಾಗೆ ಗೊತ್ತು. ಇದೇ ಕಾರಣದಿಂದಲೇ ಹೋರಾಟದ ಮೂಲಕ ಅಧಿಕಾರಕ್ಕೇರುವ ಅಲೋಚನೆ ಬಿಟ್ಟು ಕಾಂಗ್ರೆಸ್ ಎಂಬ ಶಬರಿ ರಾಮನೆಂಬ ಯಡಿಯೂರಪ್ಪ ಅಯೋಧ್ಯಾ(ಬಿಜೆಪಿ) ಬಿಟ್ಟು ಯಾವಾಗ ಹೊರಗೆ ಬರಬಹುದೆಂದು ಎದುರು ನೋಡುತ್ತಿದೆ.
ಒಬ್ಬ ಮಾಸ್ ಲೀಡರ್ ನ ಮುಖ್ಯಲಕ್ಷಣವೆಂದರೆ ತನ್ಮೇಲೆ ರಾಜಕೀಯದ ಒತ್ತಡ ಉಂಟದಾಗಲೆಲ್ಲಾ ಅವನು ಜನಸಾಮಾನ್ಯರ ಮುಂದೋಗಿ ತನ್ನ ನೋವು-ದುಗುಡಗಳನ್ನು ಅವರ ಮುಂದೆ ನಿವೇದಿಸಿಕೊಳ್ಳುವ ಮೂಲಕ ಅವರಲ್ಲಿ ತನ್ನ ಬಗ್ಗೆ ಸಿಂಪಥಿಯೊಂದನ್ನು ಕ್ರಿಯೇಟ್ ಮಾಡಿಕೊಳ್ತಾ ಹೋಗ್ತಾನೆ ಆ ಮೂಲಕ ತನ್ನ ಇರುವಿಕೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸುತ್ತಿರುತ್ತಾನೆ.
ಇದೇ ಕೆಲಸ ಕಾಲಕಾಲಕ್ಕೆ ಯಡಿಯೂರಪ್ಪನವರು ಮಾಡ್ತಾಯಿರೋದು, ಇದೇ ಕಾರಣಕ್ಕೆ ಯಡಿಯೂರಪ್ಪನವರು ಈ ದಿನ ರಾಜ್ಯದ ಏಕೈಕ ಮಾಸ್ ಲೀಡರ್ ಆಗಿ ಎದ್ದು ಕಾಣ್ತಾಯಿರೋದು ಕೂಡ. ಬಲವಾದ ಲಿಂಗಾಯಿತ ಸಮುದಾಯ ಕೂಡ ಇದೇ ಕಾರಣದಿಂದಲ್ಲೆ ಅವರ ಬೆನ್ನಿಗೆ ನಿಂತು ಜೈಕಾರ ಹಾಕುತ್ತಿರೋದು. ಏತನ್ಮಧ್ಯೆ ಜಗದೀಶ್ ಶೆಟ್ಟರ್ ರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬಿಜೆಪಿ ಕೂಡ ತನ್ನ ಜಾಣ್ಮೆ ಪ್ರದರ್ಶಿಸಿದೆ.
ಒಂದು ವೇಳೆ ಯಡಿಯೂರಪ್ಪ ಪಕ್ಷ ತೊರೆಯುವ ಸಂದರ್ಭ ಬಂದರೆ ಶೆಟ್ಟರ್ ಮೂಲಕ ಉತ್ತರಕರ್ನಾಟಕದ ತನ್ನ ನೆಲೆ ಮತ್ತು ಮತದಾರರನ್ನು ಅದು ಭದ್ರಪಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಈಗಾಗಿಯೇ ಸದಾನಂದಗೌಡರನ್ನು ಅಧಿಕಾರದಿಂದ ಕೆಳಕ್ಕಿಳಿಸುವ ವಿಷಯದಲ್ಲಿ ಅದು ಹಾಕಿದ ಲೆಕ್ಕಾಚಾರ ಕೂಡ ಇದಕ್ಕೆ ಪೂರಕವಾಗೇ ಇತ್ತು.
ಒಕ್ಕಲಿಗ ಸಮುದಾಯ ಸದಾನಂದಗೌಡರ ಪದಚ್ಯುತಿಯ ಸಮಯದಲ್ಲಿ ಅವರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದರು ಚುನಾವಣೆಯ ಸಮಯದಲ್ಲಿ ಕಾವೇರಿ-ಹೇಮಾವತಿ ಜಲಾಯನ ಪ್ರದೇಶದ ಈ ಬಲಾಢ್ಯ ಸಮುದಾಯದ ಮತಗಳು ಜೆಡಿಎಸ್ ಗೆ ಹರಿದು ಹೋಗುತ್ತದೆ.
ಮತ್ತೊಂದಡೆಗೆ ತನ್ನ ಪಾಲಿಗೆ ಜೀವಸಂಜೀವಿನಿಂತಿರುವ ಲಿಂಗಾಯಿತ ಮತದಾರರನ್ನು ಹಿಡಿದಿಟ್ಟಿಕೊಳ್ಳುವ ಅನಿವಾರ್ಯತೆ ಕೂಡ ಅದರ ಮೇಲೆಯಿತ್ತು. ಹೀಗಾಗಿಯೇ ಬಿಜೆಪಿ ಜಗದೀಶ್‍ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಅವರ ಇಚ್ಛೆಯಂತೆ ಶೆಟ್ಟರ್‍ರನ ಆಯ್ಕೆ ಮಾಡುವ ಮೂಲಕ ಪಕ್ಷದಲ್ಲಿ ಅವರಿಗೆ ಪರ್ಯಾಯವಾಗಿ ಮತ್ತೊಂದು ಲಿಂಗಾಯಿತ ನಾಯಕತ್ವವನ್ನು ರೂಪಿಸುವ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂತು.
ಲಿಂಗಾಯಿತರಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಕ್ರೆಡಿಟ್ ಪಕ್ಷ ಉಳಿಸಿಕೊಂಡು, ಸದಾನಂದಗೌಡ ಪದಚ್ಯುತಿ ಹಿನ್ನಲೆಯಲ್ಲಿ ಒಕ್ಕಲಿಗರ ವಿರೋಧಿ ಪಟ್ಟವನ್ನು ಯಡಿಯೂರಪ್ಪನವರಿಗೆ ವರ್ಗಾಯಿಸಲು ಕೂಡ ಅದು ಯಶಸ್ವಿಯಾಯಿತು.












Click it and Unblock the Notifications