ಅಧಿಕಾರ ಪೀಠ: ಲಿಂಗಾಯತರ ಚಿತ್ತ ಯಾರ ಕಡೆಗೆ?

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಹಗರಣಗಳ ಮಧ್ಯೆ ಸಿಕ್ಕಿರುವ ಈ ಸಂದರ್ಭದಲ್ಲಿ ಮುಂಬರುವ ಚುನಾವಣೆಯಲ್ಲಿ ಎರಡು ಪ್ರಧಾನ ರಾಜಕೀಯ ಪಕ್ಷಗಳು ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡಿವೆ.
ರಾಜ್ಯ ರಾಜಕಾರಣದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗರು ಎರಡು ಪ್ರಧಾನ ರಾಜಕೀಯ ಸಮುದಾಯಗಳು. ಅನಂತರ ದಲಿತರು, ಕುರುಬರು, ಅಲ್ಪಸಂಖ್ಯಾತರು ಬರುತ್ತಾರೆ, ಲಿಂಗಾಯಿತರ ಮತ ಯಾರ ಕಡೆಗೆ? ಉಳಿದ ಜಾತಿ ಮತ ಪಂಥದವರ ನಿಲುವು ಹೇಗಿದೆ ಎಂಬುದರ ಬಗ್ಗೆ ರವೀಂದ್ರ ಕೊಟಕಿ ಸರಣಿ ಲೇಖನ ಇಲ್ಲಿದೆ...
ಲಿಂಗಾಯಿತರ ಮತ ಯಾರ ಕಡೆಗೆ?
ಹಿಂದೆ ಬಿಜೆಪಿ ಎಂದರೆ ಬ್ರಾಹ್ಮಣರ ಜನತಾ ಪಾರ್ಟಿ ಅನ್ನೋರು, ಈಗೀದು ಲಿಂಗಾಯಿತರ ರಾಜಕೀಯ ಶಕ್ತಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಲಿಂಗಾಯಿತರು ಕೂಡ ಹಿಂದೆ ಇಷ್ಟರ ಮಟ್ಟಿಗೆ ಯಾವುದೇ ಒಂದು ಪಕ್ಷದ ಪರವಾಗಿ ಧೃವೀಕರಣಗೊಂಡ ಉದಾಹರಣೆಗಳು ಕೂಡ ಇಲ್ಲ. ಇದಕ್ಕೆ ಕಾರಣವಿಲ್ಲದೆ ಕೂಡ ಇಲ್ಲ. ಎಸ್. ನಿಜಲಿಂಗಪ್ಪನವರಿಂದ ಹಿಡಿದು ವೀರೇಂದ್ರ ಪಾಟೀಲರವರಿಗೆ ಕಾಂಗ್ರೆಸ್‍ನಲ್ಲಿ ಲಿಂಗಾಯಿತ ಸಮುದಾಯದ ನಾಯಕತ್ವಗಳಿಗೆ ಒಂದು ನೆಲೆ-ಬೆಲೆ ಎರಡು ದೊರೆಯುತ್ತಿತ್ತು.
ಆದರೆ ವೀರೇಂದ್ರ ಪಾಟೀಲರನ್ನು ರಾಜೀವ್ ಗಾಂಧಿ ಸಕಾರಣವಿಲ್ಲದೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದ ದಿನವೇ ಲಿಂಗಾಯಿತರು ಕಾಂಗ್ರೆಸ್ ನಿಂದ ಹತ್ತು ಹೆಜ್ಜೆ ದೂರ ಸರಿದರು. ಅಲ್ಲಿಂದ ಮುಂದೆ ರಾಜ್ಯದಲ್ಲಿ 'ಲಿಂಗಾಯಿತ ಬ್ರಾಂಡ್' ಕಾಂಗ್ರೆಸ್‍ನಲ್ಲಿ ತಯಾರು ಆಗಲ್ಲೇ ಇಲ್ಲ.
ಇಂದಿಗೂ ಮತ್ತೆ ಆ ಸಮುದಾಯದ ಪೂರ್ಣವಿಶ್ವಾಸವನ್ನು ಪಡೆಯಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಲಿಂಗಾಯಿತ ಸಮುದಾಯದಕ್ಕೆ ಹೆಚ್ಚಿನ ಮಾನ್ಯತೆ ಕೂಡ ಸಿಗುತ್ತಿಲ್ಲ.
ಇನ್ನೊಂದಡೆ ಜನತಾಪಕ್ಷದ ಸರ್ಕಾರ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ 1983ರಲ್ಲಿ ಅಸ್ತಿತ್ವಕ್ಕೆ ಬಂದಮೇಲೆ ಮೊದಲಬಾರಿಗೆ ವಿಶೇಷವಾಗಿ ಉತ್ತರ ಕರ್ನಾಟಕದ ಲಿಂಗಾಯಿತ ಸಮುದಾಯದಿಂದ ದೊಡ್ಡಮಟ್ಟದಲ್ಲಿ ಲಿಂಗಾಯಿತ ನಾಯಕತ್ವಗಳು ರೂಪಾಂತರವಾದವು.
ದಿ.ಎಸ್.ಆರ್. ಬೊಮ್ಮಾಯಿ, ದಿ. ಎಂ.ಪಿ.ಪ್ರಕಾಶ್, ಎಂ.ಪಿ.ನಾಡೇಗೌಡ, ಚಂದ್ರಕಾಂತ ಬೆಲ್ಲದ್, ಸಿ.ಎಂ.ಉದಾಸಿ, ಬಿ.ಜಿ.ಬಣಕಾರ್, ಬಸವರಾಜರಾಯರೆಡ್ಡಿ ಹೀಗೆ ಹತ್ತಾರು ಲಿಂಗಾಯಿತ ರಾಜಕಾರಣಿಗಳನ್ನು ಬೆಳೆಸಿದ ಕೀರ್ತಿ ಹೆಗಡೆಯವರಿಗೆ ಸಲ್ಲುತ್ತದೆ.
ಇದರಿಂದಾಗಿಯೆ ಲಿಂಗಾಯಿತ ಸಮುದಾಯದ ಅದರಲ್ಲೂ ಉತ್ತರ ಕರ್ನಾಟಕದ ಲಿಂಗಾಯಿತ ಸಮುದಾಯದ ನೆಚ್ಚಿನ ನಾಯಕರಾಗಿ ಹೆಗಡೆ ಪರಿವರ್ತನೆಗೊಂಡರು. 'ವಿ'ದಳ 1994ರ ಸಮಯದಲ್ಲಿ ಮತ್ತೆ 'ಏಕ'ದಳವಾಗಿ ಅಧಿಕಾರಕ್ಕೆರಲು ಕಾರಣವಾಗಿದ್ದು ಕೂಡ ಲಿಂಗಾಯಿತ ಮತ್ತು ಒಕ್ಕಲಿಗರು ಒಟ್ಟಿಗೆ ಜನತಾದಳಕ್ಕೆ ಮತ ನೀಡಿದ್ದೆ. ಮತ್ತೆ ವಿದಳವಾದ ಜನತಾಪರಿವಾರ ಪೂರ್ಣಪ್ರಮಾಣದಲ್ಲಿ ಒಗ್ಗೂಡಲು ಅಥವಾ ಅಧಿಕಾರವನ್ನು ಪಡೆಯಲು ಆಗಲ್ಲೇ ಇಲ್ಲ. ಇದರ ಒಟ್ಟು ಲಾಭ ಪಡೆದಿದ್ದು ಬಿಜೆಪಿ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಪರದಾಡುತ್ತಿದ್ದ ಬಿಜೆಪಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಾಟೆ ಉತ್ತರಕರ್ನಾಟಕದಲ್ಲಿ ಒಂದು ವೇದಿಕೆಯನ್ನು ಒದಗಿಸಿತ್ತು. ಇದರಿಂದ ರಾಜಕೀಯ ಲಾಭ ಪಡೆದುಕೊಂಡ ಬಿಜೆಪಿ ನಿಧಾನವಾಗಿ ಅತಂತ್ರವಾಗಿದ್ದ ಲಿಂಗಾಯಿತ ಮತಗಳನ್ನು ತನಡೆಗೆ ಸೆಳೆದುಕೊಳ್ಳಲು ಯಶಸ್ವಿಯಾಯಿತು.
ಹೆಗಡೆಯವರ ನಿಧನದ ನಂತರ ಅವರ ಬಹುತೇಕ ಬೆಂಬಲಿಗರು ನೇರವಾಗಿ ಬಿಜೆಪಿಗೆ ಸೇರಿದರು. ಇದಕ್ಕೆ ಕಾರಣವಿಲ್ಲದೆ ಇಲ್ಲ, ದೇವೇಗೌಡರ ಜೆಡಿಎಸ್‍ಗೆ ಒಕ್ಕಲಿಗರ ಪಕ್ಷವೆಂಬ ಹಣೆಪಟ್ಟಿಯಿತ್ತು, ಇನ್ನೊಂದಡೆ ಕಾಂಗ್ರೆಸ್‍ನಲ್ಲಿ ಲಿಂಗಾಯಿತ ನಾಯಕತ್ವ ಸಂಪೂರ್ಣವಾಗಿ ನಿರ್ಲಕ್ಷ್ಯಗೊಳಗಿತ್ತು.
ಇಂತಹ ಸಮಯದಲ್ಲಿ ಲಿಂಗಾಯಿತರಿಗೆ ಪರ್ಯಾಯವಾಗಿ ಕಂಡಿದ್ದು ಬಿಜೆಪಿ. ಕುಮಾರಸ್ವಾಮಿ ಯಡಿಯೂರಪ್ಪನವರಿಗೆ ಅಧಿಕಾರ ನಿರಾಕರಣೆ ಮಾಡಿದ ಮೇಲಂತೂ ಬಿಜೆಪಿ ಯಡಿಯೂರಪ್ಪನವರು ಬಲಾಢ್ಯ ಲಿಂಗಾಯಿತ ನಾಯಕರಾಗಿ ರೂಪಗೊಂಡರು. ಇದರಿಂದ ತಂತಿ ಮೇಲೆ ನಿಂತಿದ್ದ ಉಳಿದ ನಾಯಕರಗಳು ಕೂಡ ಬಿಜೆಪಿಗೆ ಜೀಗಿದು ಬಿಟ್ಟರು.
ಮುಂದಕ್ಕೆ ಓದಿ..[ಲಿಂಗಾಯತರಿಗೆ ಯಡಿಯೂರಪ್ಪನೇ ಮಾಸ್ ಲೀಡರ್]












Click it and Unblock the Notifications