ಇನ್ಮುಂದೆ ಬ್ಲೂಬುಕ್ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಸಿಗೋಲ್ಲಾ

ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು, ಬ್ಲೂಬುಕ್ ಇಲ್ಲದಿದ್ದರೆ ಅಂತಹ ಗ್ರಾಹಕರು ತಮ್ಮತಮ್ಮ ಗ್ಯಾಸ್ ಏಜೆನ್ಸಿಯಿಂದ ಅರ್ಜಿ ಸಲ್ಲಿಸಿ ಹೊಸ ಬ್ಲೂಬುಕ್ ಪಡೆದುಕೂಳ್ಳುವುದು ಅನಿವಾರ್ಯವಾಗಲಿದೆ.
ಬ್ಲೂಬುಕ್ ಇಲ್ಲದ ಗ್ರಾಹಕರು ಇದನ್ನು ಪಡೆದುಕೊಳ್ಳಲು ಗ್ಯಾಸ್ ಏಜೆನ್ಸಿಗೆ ಅರ್ಜಿ ಸಲ್ಲಿಸಿ, ಗ್ರಾಹಕರ ಸಂಖ್ಯೆ, ವಿಳಾಸದ ಜೊತೆ ರೂಪಾಯಿ 45 ಶುಲ್ಕ ಪಾವತಿಸಿದರೆ ಬ್ಲೂಬುಕ್ ಅನ್ನು ಏಜೆನ್ಸಿ ನೀಡುತ್ತದೆ.
ಬರುವ ಮಾರ್ಚ್ 31ರೊಳಗೆ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಮೂರು ಸಿಲಿಂಡರ್ ಮಾತ್ರ ನೀಡಬೇಕೆಂದು ಕೇಂದ್ರ ಸರಕಾರ ಕಟ್ಟಾಜ್ಞೆ ನೀಡಿರುವ ಹಿನ್ನಲೆಯಲ್ಲಿ ಅಡುಗೆ ಅನಿಲ ವಿತರಕ ಏಜೆನ್ಸಿಗಳು ಬ್ಲೂಬುಕ್ ನಿಯಮವನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಗ್ಯಾಸ್ ವಿತರಿಸುವ ಹುಡುಗರಿಗೆ ಬ್ಲೂಬುಕ್ ಇಲ್ಲದೆ ಸಿಲಿಂಡರ್ ನೀಡಬಾರದೆಂದು ಏಜೆನ್ಸಿ ತಾಕೀತು ಮಾಡಿವೆ. ಅದರಲ್ಲಿ ಸಿಲಿಂಡರ್ ನೀಡಿದ ವಿವರ, ದಿನಾಂಕ ಮತ್ತು ಬಿಲ್ ನಂಬರ್ ಅನ್ನು ನಮೂದಿಸಬೇಕೆಂದು ನಿಯಮ ರೂಪಿಸಿದೆ.
ಒಂದು ವೇಳೆ ಬ್ಲೂಬುಕ್ ಇಲ್ಲದಿದ್ದರೆ ಹುಡುಗರು ಸಿಲಿಂಡರ್ ಅನ್ನು ವಾಪಾಸ್ ತೆಗೆದುಕೊಂಡು ಹೋಗುತ್ತಾರೆ. ಹಾಗಾಗಿ ಎಲ್ಪಿಜಿ ಗ್ರಾಹಕರು ಬ್ಲೂಬುಕ್ ಅನ್ನು ಮೊದಲು ಹುಡುಕಿ ಇಟ್ಟುಕೊಳ್ಳುವುದು ಉತ್ತಮ.
ಬ್ಲೂಬುಕ್ ಎಂದರೆ ಸಿಲಿಂಡರ್ ಮೊದಲು ಪಡೆದಾಗ ಏಜೆನ್ಸಿ ನೀಡುವ ನೀಲಿ ಕಲರ್ ಪುಸ್ತಕ. ಇದರಲ್ಲಿ ಗ್ರಾಹಕರಿಗೆ ಸಂಬಂಧಪಟ್ಟ ಗ್ರಾಹಕ ಸಂಖ್ಯೆ, ವಿಳಾಸ, ಸಿಲಿಂಡರ್ ವಿತರಿಸಿದ ದಿನಾಂಕ ಮುಂತಾದ ಮಾಹಿತಿಗಳಿರುತ್ತವೆ. ಇದನ್ನು ಡೊಮೆಸ್ಟಿಕ್ ಗ್ಯಾಸ್ ಕನ್ಸ್ಯೂಮರ್ ಕಾರ್ಡ್ (Domestic Gas Consumer Card) ಎಂದೂ ಕರೆಯುತ್ತಾರೆ.












Click it and Unblock the Notifications