ಎಸ್ ಎಂ ಕೃಷ್ಣ ರಾಜೀನಾಮೆ, ಮುಂದೇನು?

ಈ ಮಧ್ಯೆ, ಯುಪಿಎ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇನ್ನಷ್ಟು ಹಿರಿಯ ಸಚಿವರ ರಾಜೀನಾಮೆ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮನಮೋಹನ್ ಸಿಂಗ್ ಅವರ ಸಂಪುಟ ವಿಸ್ತರಣೆ ಭಾನುವಾರ ಬೆಳಗ್ಗೆ 11.30 ರ ನಂತರ ನಡೆಸಲಾಗುತ್ತದೆ ಎಂದು ಯುಪಿಎ ಮೂಲಗಳು ಹೇಳಿದೆ. ಇದಕ್ಕೂ ಮುನ್ನ ಎಸ್ ಎಂ ಕೃಷ್ಣ ಅವರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಈಗ ಸುದ್ದಿ ನಿಜವಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಎದುರಾಗಲಿದ್ದು ರಾಜ್ಯದಲ್ಲಿ ತಮ್ಮದೇ ಆದ ವರ್ಚಸ್ಸು ಇರುವ ಕೃಷ್ಣ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ.
ಮನಮೋಹನ್ ಸಿಂಗ್ ಅವರ ಸಂಪುಟ ವಿಸ್ತರಣೆ ಹಿನ್ನೆಲೆ ಶುಕ್ರವಾರ ಸಂಜೆ ಎಐಸಿಐ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಮರಳಲು ಎಸ್ ಎಂ ಕೃಷ್ಣ ಅವರಿಗೆ ಹೈಕಮಾಂಡ್ ಸೂಚನೆ ನೀಡಿತ್ತು. ರಾಜ್ಯ ರಾಜಕಾರಣಕ್ಕೆ ಇಷ್ಟವಿಲ್ಲದ ಕೃಷ್ಣ ಅವರು ಮನಸ್ಸಿಲ್ಲದ ಮನಸ್ಸಿನಿಂದ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೃಷ್ಣ ಅವರ ಮುಂದಿರುವ ಆಯ್ಕೆಗಳು:
* ರಾಜ್ಯ ರಾಜಕಾರಣಕ್ಕೆ ಮರಳುವುದು.
* ರಾಜಕೀಯದಿಂದಲೇ ನಿವೃತ್ತಿ ಸಾಧ್ಯತೆ.
* ಚುನಾವಣೆ ತನಕ ರಾಜ್ಯ ಕಾಂಗ್ರೆಸ್ ಚುಕ್ಕಾಣಿ ಹಿಡಿಯುವುದು.
* ರಾಜ್ಯಪಾಲರಾಗಿ ಆಯ್ಕೆ ಸಂಭವ.
* ಪುನರಾಚನೆ ನಂತರ ಮತ್ತೊಮ್ಮೆ ಮನಮೋಹನ್ ಸಂಪುಟ ಸೇರುವುದು
ಕೃಷ್ಣ ಕೊಕ್ ಗೆ ರಾಹುಲ್ ಕಾರಣ?: ಮೇ 1, 1932ರಲ್ಲಿ ಜನಿಸಿರುವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರ ರಾಜಕೀಯ ಅನುಭವಕ್ಕೆ ಯುಪಿಎ ಮನ್ನಣೆ ನೀಡಿದರೂ, ರಾಹುಲ್ ಗಾಂಧಿ ಅವರ ಯುವಪಡೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಸಚಿನ್ ಪೈಲಟ್, ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಜಿತಿನ್ ಪ್ರಸಾದ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಭಡ್ತಿ ಪಡೆಯುವ ಸಾಧ್ಯತೆಯಿದೆ. ಹಾಲಿ ರಾಜ್ಯಸಭಾ ಸದಸ್ಯ ನಟ ಕಮ್ ರಾಜಕಾರಣಿ ಚಿರಂಜೀವಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಮಾನ ಗ್ಯಾರಂಟಿ ಎನ್ನಲಾಗಿದೆ.
ಆದರೆ, ನೈಸ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಎಂ ಕೃಷ್ಣ ಸೇರಿದಂತೆ ಮಾಜಿ ಸಿಎಂಗಳ ವಿರುದ್ಧ ತನಿಖೆಗೆ ಲೋಕಾಯುಕ್ತ ಕೋರ್ಟ್ ಆದೇಶಿಸಿರುವುದಕ್ಕೂ ಕೃಷ್ಣ ಅವರು ಶುಕ್ರವಾರ ನೀಡಿರುವ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ರಾಜಕಾರಣಿಯಾಗಿ ಎಸ್ ಎಂ ಕೃಷ್ಣ :
* 1999 ರಿಂದ 2004 ರ ತನಕ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿದ್ದರು.
* 2004 ರಿಂದ 2008 ರ ತನಕ ಮಹಾರಾಷ್ಟ್ರದ ರಾಜ್ಯಪಾಲ
* 2009 ರಿಂದ 2012 ರ ತನಕ ವಿದೇಶಾಂಗ ಸಚಿವ.












Click it and Unblock the Notifications