ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಅಡುಗೆಮನೆಯಿದ್ದರೆ ಎಲ್ಪಿಜಿ ಸಿಲಿಂಡರ್ ಹನ್ನೆರಡು

By Prasad
|
Google Oneindia Kannada News

Get 12 LPG cylinders per year
ಮುಂಬೈ, ಅ. 22 : ಮನೇಲಿರೋದು ಎಂಟು ಜನ, ವರ್ಷಕ್ಕೆ ಆರೇ ಎಲ್‌ಪಿಜಿ ಸಿಲಿಂಡರ್ ಎಲ್ಲಿ ಸಾಲುತ್ತೆ, ಜೀವನ ಹೇಗೆ ಸಾಗಿಸುವುದು ಎಂದು ತೊಳಲಾಡುತ್ತಿದ್ದ ಮಧ್ಯಮ ವರ್ಗದ ಜನತೆಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಅದೇನಪ್ಪಾ ಅಂದ್ರೆ, ನಿಮ್ಮ ಮನೇಲಿ ಎರಡು ಕುಟುಂಬಗಳು ವಾಸವಾಗಿವೆಯಾ, ಎರಡು ಅಡುಗೆಮನೆ ಇವೆಯಾ, ಹೊಡ್ಕೊಳ್ಳಿ ಹನ್ನೆರಡು ಸಿಲಿಂಡರು.

ಖುಷಿಯಿಂದ ಕುಣಿದಾಡುವ ಮುನ್ನ ಕೆಲ ನಿಬಂಧನೆಗಳಿವೆ. ಆ ಕಂಡಿಷನ್‌ಗಳನ್ನು ಪೂರೈಸಿದರೆ, ಎರಡು ಗ್ಯಾಸ್ ಸಂಪರ್ಕಗಳು ಮತ್ತು ವರ್ಷಕ್ಕೆ ಹನ್ನೆರಡು ಸಿಲಿಂಡರ್ ನಿಮಗೆ ಸಿಗೋದು ಗ್ಯಾರಂಟಿ. ಆ ನಿಬಂಧನೆಗಳೇನೆಂದರೆ,

* ನಿಮಗೆ ಮದುವೆಯಾಗಿರಬೇಕು ಮತ್ತು ಪಾಲಕರೊಂದಿಗೆ ವಾಸಿಸುತ್ತಿರಬೇಕು.
* ಮನೆಯಲ್ಲಿ ಎರಡು ಅಡುಗೆಮನೆಗಳಿರಬೇಕು.

ಆದರೆ, ಒಂದು ಮನೆಗೆ ಒಂದೇ ಎಲ್‌ಪಿಜಿ ಕನೆಕ್ಷನ್ ಇರುವಾಗ ಇದು ಹೇಗೆ ಸಾಧ್ಯ ಎಂದು ಜನರು ಚಿಂತಿಸುತ್ತಿದ್ದರೆ, ಅದಕ್ಕೂ ಇಲ್ಲಿ ಉತ್ತರವಿದೆ. ಒಂದೇ ಸೂರಿನಡಿ ಎರಡು ಅಡುಗೆಮನೆಗಳಿದ್ದು ಎರಡೂ ಕಡೆಗಳಲ್ಲಿ ಕುಕ್ಕರ್ ಶೀಟಿ ಹೊಡೆಯುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರೆ ತೈಲ ಕಂಪನಿಗಳು, 'ಒಂದು ಮನೆಗೆ ಒಂದೇ ಅನಿಲ ಕನೆಕ್ಷನ್' ಎಂಬ ನಿಯಮವನ್ನು ತಿದ್ದುಪಡಿ ಮಾಡಲು ನಿರ್ಧರಿಸಿವೆ.

ಒಂದು ಮನೆಯಲ್ಲಿ ಇಬ್ಬಿಬ್ಬರ ಹೆಸರಲ್ಲಿ ಇನ್ನೂ ಕೂಡ ಸಾವಿರಾರು ಜನರು ಎಲ್‌ಪಿಜಿ ಕನೆಕ್ಷನ್‌ಗಳನ್ನು ಪಡೆದಿದ್ದಾರೆ. ಅಂಥವರಿಗೆ ಇದು ವರದಾನವಾಗಿ ಸಿಗಲಿದೆ. ಅಡುಗೆ ಮಾಡಲಿಕ್ಕಾಗಿ ಎರಡು ಅಡುಗೆಮನೆಗಳನ್ನು ನಿರ್ವಹಿಸುತ್ತಲಾಗುತ್ತಿದೆ ಎಂದು ಖುದ್ದಾಗಿ ಬಂದು ತೈಲ ಕಂಪನಿಗಳ ಅಧಿಕಾರಿಗಳು ಖಚಿತಪಡಿಸಿಕೊಂಡನಂತರವೇ ಸಿಲಿಂಡರ್ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು.

ಇಂದಿಗೂ ನಮ್ಮ ಭಾರತದಲ್ಲಿ ಅಪ್ಪ ಅಮ್ಮಂದಿರು ಮಕ್ಕಳು ಸೊಸೆ ಮೊಮ್ಮಕ್ಕಳೊಂದಿಗೆ ಜಂಟಿಯಾಗಿ ಜೀವಿಸುತ್ತಿದ್ದಾರೆ. ಒಟ್ಟಾಗಿಯೇ ಅಡುಗೆ ಮಾಡುತ್ತಾರೆ, ಒಟ್ಟಾಗಿಯೇ ಕುಳಿತು ಊಟ ಮಾಡುತ್ತಾರೆ. ಆದರೆ, ತಿಂಗಳಿಗೆ ಮುಗಿದುಹೋಗುವ ಸಿಲಿಂಡರಿಂದಾಗಿ ಜೀವನ ನಡೆಸುವುದು ಬಲು ಕಷ್ಟವಾಗಿದೆ. ಹೆಚ್ಚು ದುಡ್ಡು ಕೊಟ್ಟು ಸಿಲಿಂಡರ್ ಪಡೆದುಕೊಳ್ಳಬೇಕಾಗಿದೆ. ಆದರೆ, ಈ ಹೊಸ ನಿಯಮದ ಪ್ರಕಾರ, ಜಂಟಿಯಾಗಿ ಕುಟುಂಬ ನಿರ್ವಹಿಸುತ್ತಿದ್ದರೂ, ಇನ್ನೂ ಆರು ಎಲ್‌ಪಿಜಿ ಸಿಲಿಂಡರ್ ಬೇಕೆಂದರೆ ಮನೆಯಲ್ಲಿ ಎರಡು ಅಡುಗೆಮನೆ ಇದೆ ಎಂದು ತೋರಿಸಲೇಬೇಕು. ಬಲವಂತವಾಗಿಯಾದರೂ ಜಂಟಿ ಸಂಸಾರವನ್ನು ಒಡೆಯಲೇಬೇಕು!

English summary
Do you have two kitchens? Then get 2 gas connections and 12 lpg cylinders per year. But, there are two conditions. One, you must be married and staying with parents. Two, you should have two kitchens and cooking should be happening on two platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X