ಮಲ್ಯ ಬಿಯರ್ ಗ್ಲಾಸಿಗೆ ಕಲ್ಲು ಹೊಡೆದ ಸರ್ಕಾರ

ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಉದ್ಯಮಿ ವಿಜಯ್‌ಮಲ್ಯ ಒಡೆತನದ ಬಿಯರ್ ತಯಾರಿಕಾ ಘಟಕ ಮೆ.ಯುನೈಟೆಡ್ ಬ್ರೆವರೀಸ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನೇ ಪಡೆಯದೇ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಕಾರ್ಖಾನೆ ವಿರುದ್ಧ ಕ್ರಮ ಜರುಗಿಸುವಂತೆ ಮಂಡಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ಇತ್ತೀಚೆಗೆ ಕಾರ್ಖಾನೆಗೆ ಪರಿಸರ ಸಚಿವ ಸೊಗಡು ಶಿವಣ್ಣ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಕಾರ್ಖನೆಗೆ ಭೇಟಿ ನೀಡಿದ್ದರು. ಅಧಿಕಾರಿಗಳು ಪರಿಶೀಲನೆ ವೇಳೆ ಅಬಕಾರಿ ಇಲಾಖೆಯ ದಾಖಲೆಗಳು, ನೀರು ಮತ್ತು ವಿದ್ಯುತ್ ಬಿಲ್‌ಗಳ ದಾಖಲೆಗಳಲ್ಲಿ ಕಾರ್ಖಾನೆ ಅಧಿಕೃತವಾಗಿ ಲೈಸನ್ಸ್ ಪಡೆದಿಲ್ಲ ಎಂಬುದು ತಿಳಿದು ಬಂದಿದೆ.
ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ನಂತರ ಕಾರ್ಖಾನೆ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರ ಸೂಚಿಸಿದೆ.
ಕಿಂಗ್ ಫಿಷರ್ ಏರ್ ಲೈನ್ಸ್ ನಂತರ ಯುನೈಟೆಡ್ ಸ್ಪಿರಿಟ್ಸ್ ಸಾಲಬಾಧೆ ತೀರಿಸಿಕೊಳ್ಳಲು ಇಂಡಿಯನ್ ಪ್ರಿಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ವಿಜಯ್ ಮಲ್ಯ ಮುಂದಾಗಿದ್ದರು.
ವೈಟ್ ಅಂಡ್ ಮ್ಯಾಕೆ ಬ್ರಾಂಡ್ ಖರೀದಿಸಿದ ಮೇಲೆ ಯುನೈಟೆಡ್ ಸ್ಪಿರಿಟ್ಸ್ ಜಾಗತಿಕವಾಗಿ ಉನ್ನತ ಸ್ಥಾನಕ್ಕೇರಿತ್ತು. ಆದರೆ, ಸುಮಾರು 7,000 ಕೋಟಿ ರು ಸಾಲ ಉಳಿಸಿಕೊಂಡಿರುವ ಯುನೈಟೆಡ್ ಸ್ಪಿರಿಟ್ಸ್ ಗೆ ರಿಲೀಫ್ ನೀಡಲು ಆಸ್ತಿ ಮಾರಾಟ, ಷೇರು ಮಾರಾಟಕ್ಕೆ ಕಿಂಗ್ ಮಲ್ಯ ಮುಂದಾಗಿದ್ದಾರೆ.
ಯುನೈಟೆಡ್ ಬ್ರೂವರೀಸ್ ನ ಸಾಲ ತೀರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 1,5000 ಕೋಟಿ ರು ನಿಂದ 2,000 ಕೋಟಿ ಮೊತ್ತ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಹೆಚ್ಚಿತ್ತು.
120 ಮಿಲಿಯನ್ ಕೇಸ್ ಗಳನ್ನು ಮಾರಾಟ ಮಾಡಿದ್ದ ಯುಸಿಎಲ್, FY16ರ ಹೊತ್ತಿಗೆ 200 ಮಿಲಿಯನ್ ಕೇಸುಗಳನ್ನು ಮಾರಾಟ ಮಾಡುವ ಗುರಿ ಹೊಂದಿತ್ತು, ಯುಸಿಎಲ್ ತನ್ನ ಗುರಿ ತಲುಪಬೇಕಾದರೆ ತನ್ನ ಬ್ರಾಂಡ್ ಮೌಲ್ಯವನ್ನು ಉಳಿಸಿಕೊಳ್ಳಬೇಕಿದೆ.
ಸುಮಾರು 6 ಕಂಪನಿಗಳ ಸಮೂಹ ಹೊಂದಿರುವ ಯುನೈಟೆಡ್ ಬ್ರಿವೆರೆಸ್(UB)ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 22,850 ಕೋಟಿ ರೂ ತೂಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೌಲಯ್ 464 ಕೋಟಿ ರೂ. ಇದ್ದದ್ದು ಷೇರುಗಳ ಮೌಲ್ಯವನ್ನು 1200 ಕೋಟಿಗೆ ಹೆಚ್ಚಿಸಿಕೊಂಡಿದೆ.












Click it and Unblock the Notifications