ಜ್ಞಾನಭಾರತಿ ಗ್ಯಾಂಗ್ ರೇಪ್: ಆರೋಪಿಗಳು ಸಿಕ್ಕಿಬಿದ್ದರು

jnanabharathi-national-law-school-student-molest-5-held
ಬೆಂಗಳೂರು, ಅ.19: ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿಯ ಮೇಲೆ ಒಂದು ವಾರದ ಹಿಂದೆ ಜ್ಞಾನಭಾರತಿ ಕ್ಯಾಂಪಸ್ ಬಳಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಾಧಿತ ಯುವತಿ ನಗರದ ನಾಗರಬಾವಿಯಲ್ಲಿನ ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿನಿ. ಈಕೆ ತನ್ನ ಪ್ರಿಯಕರ, IBM ಟೆಕ್ಕಿ, ಕೇರಳದ ಕೊಲ್ಲಂ ಮೂಲದ ನಿಖಿಲ್ ಜತೆ ಯಲ್ಲಿದ್ದಾಗ ದುಷ್ಕರ್ಮಿಗಳು ಕಳೆದ ಶನಿವಾರ ರಾತ್ರಿ 10 ಗಂಟೆ ವೇಳೆ ಸಾಮೂಹಿಕ ಅತ್ಯಾಚಾರ ಮಾಡಿದ್ದರು.

ಗುರುವಾರ ಸಂಜೆಯೇ ಈ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಸದ್ಯದಲ್ಲೇ ಇವರ ಸಹಚರರಾದ ಇನ್ನೂ ಮೂವರನ್ನು ಪ್ರಕರಣದ ಸಂಬಂಧ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುವಾರ ರಾಮನಗರದ ಬಳಿ ಗುಂಪೊಂದು ಶ್ರೀಗಂಧದ ಮರ ಕದಿಯುತ್ತಿದ್ದಾಗ ದಕ್ಷಿಣ ವಲಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆಯ ವೇಳೆ ಜ್ಞಾನಭಾರತಿ ಗ್ಯಾಂಗ್ ರೇಪ್ ತಮ್ಮದೇ ಕೃತ್ಯ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳ್ಳತನ ಮಾಡುವುದೇ ಈ ತಂಡದ ಕಸುಬಾಗಿದ್ದು, ತಂಡದಲ್ಲಿರುವವರೆಲ್ಲ 20-25 ವರ್ಷದವರಾಗಿದ್ದಾರೆ. ಜ್ಞಾನಭಾರತಿ ಕ್ಯಾಂಪಸ್ ಸುತ್ತಮುತ್ತ ಇವರು ಇನ್ನೂ ಹಲವು ಕುಕೃತ್ಯಗಳನ್ನು ನಡೆಸಿರುವ ಸಾಧ್ಯತೆಯಿದೆ ಪೊಲೀಸರು ಶಂಕಿಸಿದ್ದಾರೆ.

ಬಾಧಿತ ವಿದ್ಯಾರ್ಥಿನಿ ಆರೋಪಿಗಳ ಗುರುತು ಪತ್ತೆಹಚ್ಚಿರುವುದಾಗಿ ತಿಳಿದುಬಂದಿದೆ. ಬಾಧಿತ ವಿದ್ಯಾರ್ಥಿನಿಗೆ ಸುಮಾರು 600 ಕ್ಕೂ ಹೆಚ್ಚು ಫೋಟೋಗಳನ್ನು ತೋರಿಸಲಾಗಿ, ಆಕೆ ಸದರಿ ಆರೋಪಿಗಳನ್ನು ಪತ್ತೆಹಚ್ಚಿದ್ದಾಗಿ ತಿಳಿದುಬಂದಿದೆ.

ಈ ಮಧ್ಯೆ, ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ತಕ್ಷಣ ಪ್ರಕರಣದ ಬಗ್ಗೆ ಸಂಪೂರ್ಣ ವಿವರ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+