ಹರಿಯಾಣ: ರಾಹುಲ್ ಗಾಂಧಿಯಿಂದಲೂ ಭೂವಶೀಕರಣ

ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿದ್ದೇ ಬಂತು ಹರಿಯಾಣಾದಲ್ಲಿ ಗಾಂಧಿ ಕುಟುಂಬದ ಭೂವಶೀಕರಣ ತಾರಕಕ್ಕೇರಿದೆ. ಸೋನಿಯಾ ಅಳಿಯ,ಖಾಸಗಿ ವ್ಯಕ್ತಿ ರಾಬರ್ಟ್ ವಾದ್ರಾ ಒಬ್ಬರೇ ಅಲ್ಲ, ಎಐಸಿಸಿ ಮಹಾಕಾರ್ಯದರ್ಶಿ ರಾಹುಲ್ ಗಾಂಧಿ ಸಹ ನಮ್ಮ ರಾಜ್ಯದಲ್ಲಿ ಅಕ್ರಮವಾಗಿ ಭೂ ಖರೀದಿ ಮಾಡಿದ್ದಾರೆ.
ಮಾರುಕಟ್ಟೆ ದರಗಳಿಗಿಂತ ಕಡಿಮೆ ದರದಲ್ಲಿ ಅವುಗಳ ಮೌಲ್ಯ ಮಾಡಿ, ಸರಿಯಾಗಿ ಸ್ಟಾಂಪ್ ಡ್ಯೂಟಿ ಪಾವತಿಸದೆ ಖರೀದಿ ಮಾಡಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಲೋಕ ದಳದ (INLD) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಭೂವಶೀಕರಣಕ್ಕೆ ಸ್ಥಳೀಯ ಕಂದಾಯ ಅಧಿಕಾರಿಗಳು ನೆರವಿನ 'ಹಸ್ತ' ನೀಡಿದ್ದಾರೆ. ವಾದ್ರಾ 1.64 ಕೋಟಿ ತೆತ್ತು 74 ಎಕರೆ ಜಮೀನನ್ನು ಖರೀದಿಸಿದರೆ ಅವರ ಬಾವಮೈದುನ ರಾಹುಲ್ 6.5 ಎಕರೆ ಭೂಮಿಯನ್ನು 2008-2009ರಲ್ಲಿ ಪಲವಾಲ ಜಿಲ್ಲೆಯಲ್ಲಿ ಖರೀದಿಸಿದ್ದಾರೆ ಎಂಬುದು ಚೌತಾಲಾ ಆರೋಪದ ತಿರುಳು.
ಈ ಸಂಬಂಧ sale deeds ದಾಖಲೆಗಳನ್ನು ಸಾದರಪಡಿಸಿದ ಚೌತಾಲಾ, ರಾಹುಲ್ ಅವರು DLF Gurgaon ಮುಖ್ಯಸ್ಥ ಎಚ್ಎಲ್ ಪಹುವಾ ಅವರಿಂದ 2008ರ ಮಾರ್ಚಿನಲ್ಲಿ 26.47 ಲಕ್ಷ ರೂ. ನೀಡಿ ಖರೀದಿ ನಡೆಸಿದ್ದಾರೆ.












Click it and Unblock the Notifications