ಕಾಳಿಮಠ ಸ್ವಾಮಿಯ ಅವಾಂತರಗಳು ಅನ್ ಲಿಮಿಟೆಡ್

ಈ ಮಧ್ಯೆ, ನಾಡಿನ ಕೆಲ ಚಾನೆಲ್ಲುಗಳೂ ಋಷಿಕುಮಾರ ಸ್ವಾಮೀಜಿಯನ್ನು ಬಹಿರಂಗವಾಗಿ ಹರಾಜು ಹಾಕುತ್ತಿವೆ. ಜನಶ್ರೀ, ಕಸ್ತೂರಿ 24 ನ್ಯೂಸ್, ಟಿವಿ9 ನಿರಂತರವಾಗಿ ಋಷಿಕುಮಾರ ಸ್ವಾಮೀಜಿಯ ಜನ್ಮ ಜಾಲಾಡುತ್ತಿದೆ.
ಈ ಮಧ್ಯೆ, ಋಷಿಕುಮಾರ ಸ್ವಾಮೀಜಿಯ ಇಡೀ ವೃತ್ತಾಂತ ಇಂಚಿಂಚೂ ಬಿಚ್ಚಿಕೊಳ್ಳುತ್ತಿದೆ. ಚಾನೆಲ್ಲುಗಳಲ್ಲಿ ಬೆತ್ತಲಾಗುತ್ತಿರುವ ಋಷಿಕುಮಾರ ಸ್ವಾಮೀಜಿಯ ಕುರಿತು 'ಒನ್ ಇಂಡಿಯಾ ಕನ್ನಡ' ದಲ್ಲಿ ಒಂದಷ್ಟು ಝಲಕ್ ಗಳು ಹೀಗಿವೆ:
ಟಿವಿಗಳಲ್ಲಿ ಸ್ವಾಮೀಜಿ ನಿಜ ಬಣ್ಣ ಕಂಡು ಭಕ್ತರು, ಕರವೇ ಮತ್ತಿತರೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನೀರುಗುಂಡಿ ತಾಂಡ್ಯ ಗ್ರಾಮದಲ್ಲಿ ಋಷಿಕುಮಾರ ಸ್ವಾಮೀಜಿಯ ಮನೆ ಮಠ ಪೀಸ್ ಪೀಸ್ ಮಾಡಿದ್ದಾರೆ. ಜನರಿಗೆ ಹೆದರಿ ಕಾಳಿ ಕೇರಳಕ್ಕೆ ಪರಾರಿಯಾಗಿರುವ ಅನುಮಾನ ಇದೆ.
ನಾನಾ ಭಾಗಗಳಿಂದ ಋಷಿಕುಮಾರನಿಂದ ಬಾಧೆಗೊಳಗಾದವರು ತಮ್ಮ ದುಃಖ ತೋಡಿಕೊಳ್ಳುತ್ತಿದ್ದಾರೆ. ಅವನ ಬಗ್ಗೆ ಅನೇಕ ಸ್ವಾರಸ್ಯಕರ ಮಾಹಿತಿಗಳನ್ನು ನೀಡುತ್ತಿದ್ದಾರೆ.
ಅವನೊಬ್ಬ ಬೃಹನ್ನಳೆ. ಸಕಲಕಲಾವಲ್ಲಭ. ಹೆಣ್ಣು ಹೆಂಡ ಚಟ ಇದೆ. ಅರಸೀಕೆರೆಯಲ್ಲಿದ್ದಾಗ ವೈಶಾಲಿ ಬಾರಿನ ಕಾಯಂ ಗಿರಾಕಿ. ಕುಡಿದು ಗಲಾಟೆ ಮಾಡಿದಾಗ ಸ್ಥಳೀಯರು ಹಣ್ಣುಗಾಯಿ ನೀರುಗಾಯಿ ಆಗುವಂತೆ ಬಡಿದಿದ್ದಾರೆ. ಸಿನಿಮಾನೂ ಗೊತ್ತು, ಸೆಕ್ಸೂ ಗೊತ್ತು. ಒಂದೆರಡು ಸಿನಿಮಾಗಳಲ್ಲೂ ನಟಿಸಿದ್ದಾನೆ. ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ.
ಹೀನಾಯವೆಂದರೆ ಈ ಹಿಂದೆ, ವಿದೇಶಿ (ಜರ್ಮನ್) ಪ್ರಜೆಯೊಬ್ಬರು 'ತನಗೆ ಕ್ಯಾನ್ಸರ್ ಇದೆ. ವಾಸಿ ಮಾಡಿ' ಎಂದು ಇವನ ಬಳಿಗೆ ಬಂದರೆ ಪೂಜೆ ಪುನಸ್ಕಾರದ ನೆಪದಲ್ಲಿ ಆ ಮಧ್ಯ ವಯಸ್ಕನನ್ನು ಹೀನಾಯವಾಗಿ ನಡೆಸಿಕೊಂಡಿದ್ದಾನೆ. ಕೊನೆಗೂ ಆತ ತೀರಿಕೊಂಡಾಗ ಆತನ ಶವದ ಹಣೆಯ ಮೇಲೆ ತನ್ನ ಕಾಲನ್ನು ಇಟ್ಟು, ಪೂಜೆ ಮಾಡುತ್ತಾನೆ. ದುಡ್ಡಿಗಾಗಿ ಪೀಡಿಸುತ್ತಾನೆ. ಅದಕ್ಕೂ ಮುನ್ನ ಆತನಿಂದ ಪಾದ ಪೂಜೆ ಮಾಡಿಸಿಕೊಂಡಿರುತ್ತಾನೆ.
ಮಾಜಿ ಸಿಂಎಂ ಯಡಿಯೂರಪ್ಪ ಅವರ ಎದೆಯ ಮೇಲೆ ಕಾಲಿಡುವಷ್ಟು ಧಾರ್ಷ್ಯ ಇದೆಯಂತೆ. ಸಚಿವ ಬಸವರಾಜ ಬೊಮ್ಮಾಯಿ ಇವನನ್ನು ಕಂಡರೆ ಥರಥರ ನಡುಗುತ್ತಾರಂತೆ. ಇನ್ನು, ಕಟ್ಟಾಸುಬ್ರಮಣ್ಯ ನಾಯ್ಡು ಇವನ ಪರಮಭಕ್ತರು.
ಬೆಂಗಳೂರಿನ ಗಾಯತ್ರಿನಗರದಲ್ಲಿ ಮನೆಯನ್ನು ಬಾಡಿಗೆ ನೀಡಿದ್ದ ಮಾಲೀಕರು ಇವನ ರಗಳೆಗಳನ್ನು ಕಂಡು, ಬೇಸತ್ತು ಮನೆ ಖಾಲಿ ಮಾಡಿಸಿದ್ದೂ ಉಂಟು. ಕಾರ್ಯಕ್ರಮಗಳಿಗೆ ಕುಡಿದು ಬರುತ್ತಿದ್ದ. ಒಂಚೂರು ಭರತನಾಟ್ಯ ಕಲಿತಿದ್ದ ಋಷಿಕುಮಾರ ಹೆಣ್ಣು ಮಕ್ಕಳಿಗೆ ಡ್ಯಾನ್ಸ್ ಕಲಿಸುತ್ತಿದ್ದ. ಅಲ್ಲಿ ತಪ್ಪು ಹೆಜ್ಜೆ ಹಾಕಿದಾಗ ಹೆಣ್ಣುಮಕ್ಕಳು ಸರಿಯಾಗಿ 'ಪಾದಪೂಜೆ' ಮಾಡಿದ್ದರು.
ಅವನು ಕೋಡಿ ಮಠದಲ್ಲಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದು ನಿಜ. ಆದರೆ ನಮ್ಮ ಮಠದಲ್ಲಿ ಹಾಗೆಲ್ಲ ದೀಕ್ಷೆ ಕೊಡುವ ಪದ್ಧತಿ ಇಲ್ಲ. ಈ ಕಾಳಿ ಸ್ವಾಮಿಗೆ ನಾವು ಗುರು ಪದವಿ ನೀಡಿಲ್ಲ. ಅವನು ಸ್ವಂತ ಬುದ್ಧಿಯಿಂದ ಏನೇನೋ ಮಾಡಿದರೆ ನಮ್ಮ ಮಠ ಜವಾಬ್ದಾರಿಯಲ್ಲ. ಇಂತಹುವುದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಸಂಪ್ರದಾಯವೂ ನಮ್ಮಲ್ಲಿ ಅಷ್ಟಾಗಿ ಇಲ್ಲ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಇದು ಋಷಿಕುಮಾರ ಸ್ವಾಮೀಜೀಯ ಪ್ರೈವೇಟ್ ಮತ್ತು ಪಬ್ಲಿಕ್ ಲಿಮಿಟೆಡ್ ಕಂಪನಿಯ ಬ್ಯಾಲೆನ್ಸ್ ಶೀಟ್! ಹೀಗೆ ಬರೆಯುತ್ತಾ ಹೋದರೆ ಬೇಜಾನ್ ಇದೆ.












Click it and Unblock the Notifications