ಅಡುಗೆ ಅನಿಲ ಸಿಲಿಂಡರ್: HP ವಿವರವೂ ಸಿಗ್ತಿದೆ, ನೋಡಿ
ಬೆಂಗಳೂರು, ಅ.12: ಡೀಲರುಗಳ ಮೂಲಕ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಮಾಡುವ ಪೆಟ್ರೋಲಿಯಂ ಕಂಪನಿಗಳು ಸಾಕಷ್ಟು ಪಾರದರ್ಶಕತೆಯೊಂದಿಗೆ ಕೆಲಸ ಮಾಡುತ್ತಿವೆ ಎಂದರೇ ನಂಬುತ್ತೀರಾ? ಎಲ್ ಪಿಜಿ ಗ್ಯಾಸ್ ಸಪ್ಲೈ ಬಗ್ಗೆ ಸದಾ ಏನಾದರೊಂದು ಕೊಂಕು ತೆಗೆಯುವ ಗ್ರಾಹಕರು ಒಮ್ಮೆ ಈ ಪಾರದರ್ಶಕತೆಯನ್ನು ಪರಾಂಬರಿಸುವುದು ಒಳಿತು.

ಪೆಟ್ರೋಲಿಯಂ ಕಂಪನಿಗಳು ಈ ಪಾರದರ್ಶಕತೆಯನ್ನು ಪಾಲಿಸುತ್ತಿರುವುದು ಅಂತರ್ಜಾಲದ ಮೂಲಕ. ಇಲ್ಲಿ ಕ್ಲಿಕ್ ಮಾಡಿ Indane, Bharat Gas, HP Gas ಕಂಪನಿಗಳ ವೆಬ್ ಸೈಟ್ ಗೆ ಭೇಟಿ ನೀಡಿದರೆ ಅಷ್ಟೂ ವಿವರ ಲಭ್ಯವಾಗುತ್ತದೆ. ಇಲ್ಲಿ ಪ್ರತಿಯೊಂದು ವಿವರವನ್ನೂ ದಾಖಲಿಸಲಾಗಿದೆ. ಸರಕಾರ ವೈಯಕ್ತಿಕವಾಗಿ ಇದುವರೆಗೂ ನಿಮಗಾಗಿ ಎಷ್ಟು ಸಬ್ಸಿಡಿ ಖರ್ಚು ಮಾಡಿದೆ ಎಂಬ ಮಾಹಿತಿಯೂ ಲಭಿಸುತ್ತದೆ.
ನೀವು ಮಾಡಬೇಕಾದ್ದಿಷ್ಟೇ. ನಿಮ್ಮ ಅನಿಲ ಕಂಪನಿ ಮತ್ತು ಡೀಲರ್ ಹೆಸರನ್ನು ಆಯ್ಕೆ ಮಾಡಿಕೊಂಡು, ನಿಮ್ಮ ಹೆಸರನ್ನು ದಾಖಲಿಸಿದರೆ ಸಾಕು. ಅಷ್ಟೂ ವಿವರ ಪರದೆಯ ಮೇಲೆ ಮೂಡುತ್ತದೆ. ಆದರೆ ಇತ್ತೀಚೆಗೆ ಕೇಂದ್ರ ನಿಗದಿಪಡಿಸಿರುವ 6/12 ಸಿಲಿಂಡರ್ ಲೆಕ್ಕಾಚಾರ ಸರಿಯಾಗಿಲ್ಲ.
ಸಾಮಾನ್ಯವಾಗಿ ಈ ಆಯಿಲ್ ಕಂಪನಿಗಳು ವ್ಯವಹಾರ ನಡೆಯುವುದೆಲ್ಲ ಹಣಕಾಸು ವರ್ಷದ ಕಾಲಮಾನದ ಪ್ರಕಾರ ಅಂದರೆ 2012-13 ಸಾಲಿನಲ್ಲಿ ಎಷ್ಟು ಸಿಲಿಂಡರುಗಳು ಸರಬರಾಜು ಆಗಿದೆ ಎಂಬುದು ಇಲ್ಲಿ ದಾಖಲಾಗಿದೆ. ಆದರೆ 6/12 ಸಿಲಿಂಡರ್ ಲೆಕ್ಕಾಚಾರ ಯಾವಾಗಿನಿಂದ ಅನ್ವಯವಾಗುತ್ತದೆ. ಇದುವರೆಗೂ ನಾವೆಷ್ಟು ಖರ್ಚು ಮಾಡಿಕೊಂಡಿದ್ದೇವೆ. ಇನ್ನೂ ಸಬ್ಸಿಡಿ ಸಹಿತ ಸಿಲಿಂಡರುಗಳು ನಮ್ಮ ಲೆಕ್ಕದಲ್ಲಿವೆ ಎಂಬುದರ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ.












Click it and Unblock the Notifications