ಮತ್ತೆ ಕಾವೇರಿದ ಕಾವೇರಿ ಕಣಿವೆ, ನಿಷೇಧಾಜ್ಞೆ ಜಾರಿ

KRS ಸುತ್ತಮುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ (ಸೆಕ್ಷನ್ 144) ಜಾರಿಗೊಳಿಸಿ ಪಾಂಡವಪುರ ಉಪವಿಭಾಗಾಧಿಕಾರಿ ಲತಾ ಆದೇಶ ಹೊರಡಿಸಿದ್ದಾರೆ.
ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಬಳಿ ರೈತರು ಪ್ರತಿಭಟನೆಗೆ ಮುಂದಾಗಿದ್ದು ಬೆಂಗಳೂರು - ಮೈಸೂರು ಹೆದ್ದಾರಿ ತಡೆ ನಡೆಸಿದ್ದು ರಸ್ತೆ ಸಂಚಾರ ಮತ್ತೆ ಅಸ್ತವ್ಯಸ್ತವಾಗಿದೆ.
ಮಂಡ್ಯದ ಗೆಜ್ಜಲಕೆರೆಯಲ್ಲಿ ಪ್ರತಿಭಟನಾಕಾರರು ರೈಲು ಸಂಚಾರ ತಡೆಹಿಡಿದ್ದಾರೆ. ನಮ್ಮದೇ ಸೈನ್ಯ ಕಟ್ಟಿಕೊಂಡು ಇಂದಿನಿಂದಲೇ ಕೆಆರ್ಎಸ್ ರಕ್ಷಣೆಗೆ ಇಳಿಯಲಿದ್ದೇವೆ ಎಂದು ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಮಾದೇಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ ತಿಂಗಳಿನಿಂದ ಜನವರಿಯವರೆಗೆ ಒಟ್ಟು 24.62 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಕಾವೇರಿ ಮೇಲುಸ್ತುವಾರಿ ಸಮಿತಿ ಗುರುವಾರ(ಅ.11) ಕರ್ನಾಟಕಕ್ಕೆ ಲಿಖಿತ ಆದೇಶ ನೀಡಿತ್ತು.
ಈ ನಡುವೆ ಕರ್ನಾಟಕ ಸಲ್ಲಿಸಿರುವ ಆಕ್ಷೇಪಣಾ ಅರ್ಜಿ ಸುಪ್ರೀಂಕೋರ್ಟಿನಲ್ಲಿ ಶುಕ್ರವಾರ (ಅ 12) ವಿಚಾರಣೆಗೆ ಬರಲಿದೆ.












Click it and Unblock the Notifications