ಗುದದಲ್ಲಿ ಇತ್ತು 53 ಲಕ್ಷ ರು. ಚಿನ್ನದ ಬಿಸ್ಕತ್ತು!

ಬಂಧಿತನನ್ನು ಮೊಹಮ್ಮದ್ ಹಸನ್ ನಿಜಾಮುದ್ದಿನ್ (65) ಎಂದು ಗುರುತಿಸಲಾಗಿದ್ದು, ಆತ ಶ್ರೀಲಂಕಾದ ಪ್ರಜೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 1.17 ಕೆ.ಜಿ. ತೂಗುವ ಚಿನ್ನದ ಗಟ್ಟಿ ಬಿಸ್ಕತ್ತುಗಳನ್ನು ಆತ ತನ್ನ ಗುದದ್ವಾರದಲ್ಲಿ ಟೇಪು ಬಿಗಿದು ಇಟ್ಟುಕೊಂಡಿದ್ದ.
ಬೆಂಗಳೂರಿನಿಂದ ದುಬೈಗೆ ವಿಮಾನ ಹತ್ತಲು ಆತ ಸಿದ್ಧತೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಹೀಗೆ ಚಿನ್ನದ ಬಿಸ್ಕತ್ತುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದಾನೆಂಬ ಸುಳಿವಿನ ಮೇರೆಗೆ ಕಸ್ಟಮ್ಸ್ ಕಮಿಷನರ್ ಸಂದೀಪ್ ಪ್ರಕಾಶ್ ಅವರು ನಿಜಾಮುದ್ದಿನ್ ಮೇಲೆ ದಾಳಿ ಮಾಡಿ ಬಂಧಿಸಬೇಕೆಂದು ಆದೇಶಿಸಿದ್ದರು.
ಆತನನ್ನು ಬಂಧಿಸಿದ ನಂತರ ಎಲ್ಲ ಸರಾಗವಾಗಿ ಹೊರಬರುವಂತೆ ಚುಚ್ಚುಮದ್ದನ್ನು ನೀಡಿ ಎಲ್ಲ ಹದಿನೈದು ಚಿನ್ನದ ಗಟ್ಟಿಗಳನ್ನು ಹೊರತೆಗೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಒಟ್ಟು 15 ಚಿನ್ನದ ಬಿಸ್ಕತ್ತುಗಳನ್ನು ಬುಡದಿಂದ ಹೊರತೆಗೆಯಲಾಗಿದ್ದು, ಅವುಗಳ ಬೆಲೆ 53 ಲಕ್ಷ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಯಪ್ಪೋ, ಎಂತೆಂಥಲ್ಲಿ ಚಿನ್ನ ಇಟ್ಕೊಂಡು ಕಳ್ಳಸಾಗಾಟ ಮಾಡ್ತಾರೆ ಈ ಜನ?












Click it and Unblock the Notifications