ಉಗ್ರ ಹೋರಾಟಕ್ಕೆ ಕರವೇ ನಾರಾಯಣ ಗೌಡ ಅಣಿ

karnataka-gets-ready-to-cauvery-river-battleat-mandya
ಬೆಂಗಳೂರು, ಅ.8: ಕರ್ನಾಟಕ ಸರಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಆದರೆ ಕಾವೇರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದ ನೀರು ಬಿಡುವುದನ್ನು ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನೇತೃತ್ವದ ಪ್ರಾಧಿಕಾರದ ಬಳಿ ವಾಪಸ್ ಹೋಗಿ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಆದರೆ ಇಂದು ಬೆಳಗ್ಗೆಯಷ್ಟೇ 'ಕಾವೇರಿ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸುವ ಮಾತೇ ಇಲ್ಲ' ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.

ಇತ್ತ ತಡೆಯಾಜ್ಞೆ ನೀಡೊಲ್ಲ ಎಂದಿರುವ ಕೋರ್ಟ್, ಅತ್ತ ಪ್ರಾಧಿಕಾರದ ಆಜ್ಞೆಯನ್ನು ವಾಪಸ್ ಪಡೆಯೋಲ್ಲ ಎಂದಿರುವ ಪ್ರಧಾನಿ ಸಿಂಗ್ ಅವರ ಮಾತುಗಳನ್ನು ಕೇಳಿಸಿಕೊಂಡಿರುವ
ಕಾನೂನು ಸಚಿವ ಸುರೇಶ್ ಕುಮಾರ್ ಅವರು ಇಂದಿನಿಂದ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಈ ಮಧ್ಯೆ, ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಉಗ್ರ ಹೋರಾಟ ಶತಸಿದ್ಧ ಎಂದು ಪ್ರಕಟಿಸಿದ್ದಾರೆ. ಕೋರ್ಟ್ ಮತ್ತು ಪ್ರಧಾನಿಯ ತೀರ್ಪನ್ನು ಅರಗಿಸಿಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಿಲ್ಲ. ಆದ್ದರಿಂದ ತಮ್ಮ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ತಕ್ಷಣ ಕೆಆರ್ ಎಸ್ ಅಣೆಕಟ್ಟು ತಲುಪಿಕೊಳ್ಳುತ್ತಿದ್ದೇವೆ. ಅಲ್ಲೇನಾದರೂ ಸರಕಾರ ನೀರು ಬಿಟ್ಟರೆ ಅದು ನಮ್ಮ ದೇಹಗಳ ಮೇಲಷ್ಟೇ ಹರಿದುಹೋಗಬೇಕು ಎಂದು ನಾರಾಯಣ ಗೌಡ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಿರುವ ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯ ಕಚೇರಿ ಮೇಲೆ ಕರವೇ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪ್ರತಿಭಟನೆಗೆ ಇಳಿದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ['ಮುಂದೇನು ಮಾಡುತ್ತೇವೆಂದು ಬಾಯಲ್ಲಿ ಹೇಳಲ್ಲ!']

ಅಯೋಗ್ಯರು ಎನಿಸಿಕೊಳ್ಳುವುದು ಬೇಡ; ನೀರು ನಿಲ್ಲಿಸಿ: 'ಇಂದಿನ ತೀರ್ಪು ಬೇಸರ ತಂದಿದೆ. ತಕ್ಷಣ ತಮಿಳುನಾಡಿಗೆ ನೀರು ಬಿಡುವುದನ್ನು ಕರ್ನಾಟಕ ನಿಲ್ಲಿಸಬೇಕು. ಸರಕಾರ ಇಂತಹ ದಿಟ್ಟ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜನಪ್ರತಿನಿಧಿಗಳಾಗಿ ನಾವು ಅಯೋಗ್ಯರು ಎನಿಸಿಕೊಳ್ಳುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+